ಸ್ನೇಹಾ ಉಲ್ಲಾಳ್ ಗೆ ಐಶ್ವರ್ಯಾ ರೈ ಎಂದ ಫ್ಯಾನ್ಸ್

Date:

ಮುಂಬೈ: ಬಾಲಿವುಡ್ ನಟಿ ಸ್ನೇಹಾ ಉಲ್ಲಾಳ್ ವಧುವಿನ ಡ್ರೆಸ್ ಧರಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ನೇಹಾ ಫೋಟೋ ನೋಡಿದ ನೆಟ್ಟಿಗರು ನಟಿ ಐಶ್ವರ್ಯಾ ರೈ ಬಚ್ಚನ್ ರೀತಿ ಕಾಣಿಸುತ್ತಿದ್ದೀರಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ರಾಜಸ್ಥಾನಿ ವಧುವಿನ ರೀತಿ ಸ್ನೇಹಾ ಉಲ್ಲಾಳ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಕಪ್ಪು-ಬಿಳುಪು ಫೋಟೋ ಶೇರ್ ಮಾಡಿಕೊಂಡಿರುವ ಸ್ನೇಹಾ ಉಲ್ಲಾಳ್, ಬಿಂದಿ ಧರಿಸಿ, ಕಿವಿಯೊಲೆ ಸರಿ ಮಾಡಿಕೊಳ್ಳುವ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಮೊದಲ ಬಾರಿಗೆ ಸಲ್ಮಾನ್ ಖಾನ್ ಅಭಿನಯದ ಲಕ್ಕಿ: ನೋ ಟೈಮ್ ಫಾರ್ ಲವ್ ಸಿನಿಮಾದಲ್ಲಿ ಸ್ನೇಹಾ ಉಲ್ಲಾಳ್ ನಟಿಸಿ, ಬಿಟೌನ್ ನಲ್ಲಿ ಸದ್ದು ಮಾಡಿದ್ದರು. ಬಾಲಿವುಡ್ ಗೆ ಹೊಸ ಪ್ರತಿಭೆಯ ಆಗಮನ ಎಂದೇ ವಿಮರ್ಶೆ ಮಾಡಲಾಗಿತ್ತು. ಜಾನೇ ಬಿ ದೋ ಯಾರೋ ಮತ್ತು ಆರ್ಯನ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡರು. ಕೇವಲ ಹಿಂದಿಗೆ ಸೀಮಿತವಾಗದೇ ಟಾಲಿವುಡ್ ನಲ್ಲಿ ಯಶಸ್ಸು ಕಂಡಿದ್ದರು. 2015ರಲ್ಲಿ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ಸ್ನೇಹಾ ಎಕ್ಸ್‍ಪೈರಿ ಡೇಟ್ ವೆಬ್ ಸಿರೀಸ್ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...