ಹುಟ್ಟುಹಬ್ಬದಂದ ಹೊಸ ಕನಸುಗಳ ಝಲಕ್ ತೋರಿಸಿದ ಕನಸುಗಾರ ರವಿಮಾಮ!

Date:

ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್​ ಅವರಿಗೆ ಇಂದು (ಮೇ 30) ಜನ್ಮದಿನ. ಇಂದು ಅವರು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಹಲವು ಹೊಸಹೊಸ ಕನಸುಗಳನ್ನು ಕಂಡು ಅವುಗಳನ್ನು ನನಸು ಮಾಡಿದ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕವಾಗಿ ‘ಕ್ರೇಜಿ ಸ್ಟಾರ್​’ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಸೋಶಿಯಲ್​ ಮೀಡಿಯಾ ಮೂಲಕವೇ ಅವರಿಗೆ ಜನ್ಮದಿನದ ಶುಭ ಹಾರೈಸಲಾಗುತ್ತಿದೆ. ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳಿಗೆ ರವಿಚಂದ್ರನ್​ ಒಂದು ಗಿಫ್ಟ್​ ನೀಡಿದ್ದಾರೆ.

ಬಣ್ಣದ ಲೋಕಕ್ಕೆ ಕಾಲಿಡುವ ಎಷ್ಟೋ ಜನರಿಗೆ ರವಿಚಂದ್ರನ್​ ಸ್ಫೂರ್ತಿ. ಸೋಲು-ಗೆಲುವು ಏನೇ ಇದ್ದರೂ ರವಿಚಂದ್ರನ್​ ಕನಸು ಕಾಣುವುದನ್ನು ನಿಲ್ಲಿಸಿಲ್ಲ. ಹೊಸ ಉತ್ಸಾಹದೊಂದಿಗೆ ಅವರು ಹೊಸ ಸಿನಿಮಾಗಳನ್ನು ಅನೌನ್ಸ್​ ಮಾಡುತ್ತಲೇ ಇದ್ದಾರೆ. ಸದ್ಯ ‘ರವಿ ಬೋಪಣ್ಣ’, ‘ಕನ್ನಡಿಗ’ ಚಿತ್ರಗಳಲ್ಲಿ ತೊಡಗಿಕೊಂಡಿರುವ ಅವರು ಇನ್ನೂ ಮೂರು ಹೊಸ ಸಿನಿಮಾಗಳ ಬಗ್ಗೆ ಒಂದು ವಿಶೇಷ ವಿಡಿಯೋ ಟೀಸರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮದೇ ಯೂಟ್ಯೂಬ್​ ಚಾನೆಲ್​ ಮೂಲಕ ಮೂರು ಹೊಸ ಪ್ರಾಜೆಕ್ಟ್​ಗಳ ಝಲಕ್​ ತೋರಿಸಿದ್ದಾರೆ.

ನಟನೆ ಜೊತೆಗೆ ನಿರ್ದೇಶನದಲ್ಲೂ ರವಿಚಂದ್ರನ್​ ಯಶಸ್ಸು ಕಂಡವರು. ಹಾಗಾಗಿ ಅವರ ನಿರ್ದೇಶನದ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ವಿಶೇಷವಾದ ನಿರೀಕ್ಷೆ ಇದ್ದೇ ಇರುತ್ತದೆ. ಸದ್ಯ ಅವರು ‘ರವಿ ಬೋಪಣ್ಣ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಆ ಬಳಿಕ ‘ಗಾಡ್​’, ‘60’ ಮತ್ತು ‘ಬ್ಯಾಡ್​ ಬಾಯ್ಸ್​’ ಎಂಬ ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ. ಈ ಬಗ್ಗೆ ಅವರು ಟೀಸರ್​ ಮೂಲಕ ಸುಳಿವು ನೀಡಿದ್ದಾರೆ.

ಬಿಎಂ ಗಿರಿರಾಜ್​ ನಿರ್ದೇಶನದ ‘ಕನ್ನಡಿಗ’ ಸಿನಿಮಾದಲ್ಲಿ ರವಿಚಂದ್ರನ್​ ನಟಿಸುತ್ತಿದ್ದಾರೆ. ಕಳೆದ ವರ್ಷ ಲಾಕ್​ಡೌನ್​ ಸಡಿಲಿಕೆ ಆದಾಗ ಶೂಟಿಂಗ್​ ಆರಂಭಿಸಿದ ಈ ಸಿನಿಮಾ ಸೆನ್ಸಾರ್​ ಪ್ರಮಾಣಪತ್ರವನ್ನೂ ಪಡೆದುಕೊಂಡಿತ್ತು. ಇನ್ನೇನು ರಿಲೀಸ್​ ಬಗ್ಗೆ ಆಲೋಚನೆ​ ಮಾಡಬೇಕು ಎಂಬಷ್ಟರಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಆರಂಭ ಆಯಿತು. ಈಗ ಮತ್ತೆ ಎಲ್ಲ ಕಡೆ ಲಾಕ್​ಡೌನ್​ ಜಾರಿಯಲ್ಲಿದೆ. ಈ ಸಿನಿಮಾದಲ್ಲಿ ಎರಡು ಶೇಡ್​ನ ಪಾತ್ರವನ್ನು ರವಿಚಂದ್ರನ್​ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಒಂದು ಹಾಡು ಸೇರಿಸಲಾಗಿದ್ದು, ಅದರ ಶೂಟಿಂಗ್​ ಬಾಕಿ ಇದೆ. ರವಿಚಂದ್ರನ್​ ಜನ್ಮದಿನದ ಪ್ರಯುಕ್ತ ‘ಕನ್ನಡಿಗ’ನ ಮೊದಲ ಟೀಸರ್ ​ಇಂದು ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಆಗಲಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...