ಅರ್ಜುನ್ ಅವಳನ್ನು ತುಂಬಾ ಪ್ರೀತಿಸ್ತಿದ್ದ. ಅವಳು ಅಂದ್ರೆ ಅವನಿಗೆ ಪ್ರಪಂಚ. ಹಾಗೂ ಹೀಗೂ ಸ್ವಪ್ನಳನ್ನ ಒಪ್ಪಿಸಿ ಅವಳ ಕೈಹಿಡಿದ. ಅವರಿಬ್ಬರ ಜೀವನ ಸುಖ ಸಂಸಾರ. ಅವನೆಂದರೆ ಅವಳಿಗೆ, ಅವಳೆಂದರೆ ಅವನಿಗೆ ಪಂಚಪ್ರಾಣ. ಹೀಗೆ ಸಾಗುತ್ತಿದ್ದ ಬದುಕಿನಲ್ಲಿ ಅವತ್ತು ಅದೆಂತದ್ದೋ ವಿಶೇಷ ಸಂಭ್ರಮ. ಕಾರಣ ಅವಳು ಗರ್ಭಿಣಿ..
ಅವಳ ಅರೈಕೆಯಲ್ಲಿ ಅರ್ಜುನ್ ಬಿಜಿ ಆದ. ಅವಳನ್ನು ಒಂದು ನಿಮಿಷ ಬಿಟ್ಟರೂ ಅವನಿಗೆ ಏನೋ ಕಳೆದುಕೊಂಡ ಹಾಗಾಗುತ್ತಿತ್ತು. ಆಫೀಸಿಗೆ ಹೋದರೂ ಅರ್ಜುನ್ ಮನದಲ್ಲಿ ಸ್ವಪ್ನಳದ್ದೇ ಚಿಂತೆ. ಎನ್ ತಿಂದ್ಲು, ಏನ್ ಬಿಟ್ಲು ಅಂತ ಯೋಚನೆ ಮಾಡ್ತಾನೇ ಇದ್ದ. ಹೀಗೇ ತಿಂಗಳುಗಳು ಕಳೀತು. ಅವಳಿಗೆ ಒಂಭತ್ತು ತಿಂಗಳು. ಇಂದೋ ನಾಳೆ ಅವಳ ಡೆಲಿವರಿ. ಇಬ್ಬರ ಕಣ್ಣಲ್ಲೂ ಅದೇನೋ ಆಸೆ. ತಮ್ಮನ್ನು ಸೇರಲಿರೋ ಆ ಪುಟ್ಟ ಜೀವ ನೋಡೋ ಹಂಬಲ. ಆ ದಿನ ಬಂದೇ ಬಿಡ್ತು. ಸ್ವಪ್ನ ಹೆರಿಗೆ ಆಸ್ಪತ್ರೆ ಸೇರಿಯೇ ಬಿಟ್ಲು. ಅವಳಿಗೆ ಇನ್ನಿಲ್ಲದ ನೋವು. ಯಾವ ಕ್ಷಣದಲ್ಲಾದರೂ ಅವಳು ಮಗುವಿಗೆ ಜನ್ಮ ನೀಡಬಹುದು. ನೋವು ನುಂಗುತ್ತಲೇ ತನ್ನ ಮುಂದು ಕಂದಮ್ಮನ ಬರುವಿಕೆಗೆ ಕಾಯುತಿದ್ಲು. ಅರ್ಜುನ್ ಸಹ ಆ ಮುದ್ದು ಮಗುವನ್ನು ನೋಡಲು ಹಾತೊರೆಯುತ್ತಿದ್ದ. ಆ ಕ್ಷಣ ಬಂದೇ ಬಿಡ್ತು. ಹೆರಿಗೆ ಕೋಣೆಯೊಳಗಿಂದ ಸ್ವಪ್ನ ಕಿರುಚಿದ ಶಬ್ದ ಕೇಳಿಸ್ತು. ಆದ್ರೆ ಮಗುವಿನ ಅಳು ಕೇಳ್ತಾನೇ ಇಲ್ಲ..! ತುಂಬಾ ಸುಸ್ತಾಗಿದ್ದ ಸ್ವಪ್ನಾಗೆ ಏನೂ ಗೊತ್ತಾಗಲೇ ಇಲ್ಲ. ಆದ್ರೆ ಹೊರಗಿದ್ದ ಅರ್ಜುನ್ ಗೆ ಆ ಮಗುವಿನ ಅಳು ಕೇಳುತ್ತಿಲ್ಲ ಅಂತ ಗಾಬರಿಯಾಯ್ತು..! ಒಂದೆರೆಡು ನಿಮಿಷ ಬಿಟ್ಟು ವೈದ್ಯರು ಹೊರಬಂದ್ರು. ಓಡಿಬಂದು ಅರ್ಜುನ್ ಕೇಳ್ದ, ‘ ಡಾಕ್ಟರ್ ..ಏನಾಯ್ತು.?’ ತಲೆತಗ್ಗಿಸಿ ಡಾಕ್ಟರ್ ಹೇಳಿದ್ರು, ‘ ಐ ಆಮ್ ಸಾರಿ, ಮಗು ಉಳಿಸೋಕಾಗ್ಲಿಲ್ಲ’..! ಅಲ್ಲೇ ಅರ್ಜುನ್ ಕುಸಿದು ಬಿದ್ದ..
ಸ್ವಲ್ಪ ಹೊತ್ತು ಬಿಟ್ಟು ಒಳಗೆ ಹೋದರೆ ಇನ್ನೂ ಸ್ವಪ್ನ ಎದ್ದಿಲ್ಲ.. ಅರ್ಜುನ್ ಹೋಗಿ ಅವಳ ಕೈಹಿಡಿದ. ಅತ್ತ ಎಚ್ಚರವಾದ ಸ್ವಪ್ನ ಕೇಳಿದ್ಲು, ‘ ಮಗು ಹೇಗಿದೆ.?’ ಅಷ್ಟೆ… ಅರ್ಜುನ್ ಬಿಕ್ಕಿಬಿಕ್ಕಿ ಅತ್ತ. ಮಗುವಿನ ಹೃದಯ ಬಡಿತ ಕಮ್ಮಿ ಆಗಿ ಮಗು ಉಳೀಲಿಲ್ಲ ಅಂತ ಹೇಳುವಷ್ಟರಲ್ಲಿ ಅವನು ತತ್ತರಿಸಿ ಹೋಗಿದ್ದ.
ಅಲ್ಲಿಂದ ಅವರ ಜೀವನ ಒಂಥರಾ ಮೋಡ ಕವಿದ ವಾತಾವರಣ. ಮಗುವುಗೆ ಕುಡಿಸಬೇಕಿದ್ದ ಎದೆಹಾಲು ಸ್ವಪ್ನಳ ಎದೆಯಲ್ಲಿ ಜಿನುಗುತಿತ್ತು. ತನ್ನ ಮಗುವಿನ ಹಾಲು ಅದಕ್ಕೆ ಉಣಿಸಲಾಗದ ನೋವಲ್ಲಿ ಅವಳು ಕುಗ್ಗಿಹೋದ್ಲು..! ಅವರ ಜೀವನದ ಸಂತೋಷವೆಲ್ಲಾ ಆ ಮಗುವಿನ ಜೊತೆಗೇ ಸತ್ತು ಹೋಯ್ತು..! ಹೀಗೆ ಒಂದು ವಾರ ಕಳೀತು. ಅವತ್ತು ಅರ್ಜುನ್ ಗೆ ಆಸ್ಪತ್ರೆಯಿಂದ ಫೋನ್ ಬಂತು. ಸಾರ್, ಒಂದು ವಿಚಿತ್ರ ಕೇಸ್ ಬಂದಿದೆ. ಈಗ ತಾನೇ ಒಬ್ಬ ಮಹಿಳೆ ಒಂದು ಮಗುವಿಗೆ ಜನ್ಮ ನೀಡಿ ಪ್ರಾಣ ಬಿಟ್ರು. ಆ ಮಹಿಳೆಯ ಗಂಡ 2 ತಿಂಗಳ ಹಿಂದೆ ಅಪಘಾತದಲ್ಲಿ ಸತ್ತುಹೋಗಿದ್ರು. ಈಗ ಆ ಮಗು ಅನಾಥ ವಾಗಿದೆ. ಅದಕ್ಕೆ ಹಾಲುಣಿಸಲೂ ಯಾರೂ ಇಲ್ಲ. ನೀವ್ಯಾಕೆ ಆ ಮಗುವಿಗೆ ಅಪ್ಪ ಅಮ್ಮ ಆಗಬಾರದು’ ಅಂತ ಹೇಳಿದ್ರು. ಮರು ಯೋಚನೆ ಮಾಡದೇ ಅರ್ಜುನ್ ಹೋಗಿ ಆ ಮಗುವನ್ನು ಕರೆದುಕೊಂಡು ಬಂದ. ಈಗ ಆ ಮಗುವಿಗೆ ಅರ್ಜುನ್ ಅಪ್ಪ, ಸ್ವಪ್ನ ಅಮ್ಮ.. ಜಿನುಗುತ್ತಿದ್ದ ಎದೆಹಾಲು ಮಗುವಿನ ಹೊಟ್ಟೆ ತುಂಬಿಸುತ್ತಿದೆ. ಇವರಿಗೂ ಮಗುವಿಲ್ಲದ ನೋವು ಮರೆಯಾಯ್ತು… ಈಗ ಮತ್ತೆ ಅವರದು ಸುಖೀ ಕುಟುಂಬ..
ದೇವರು ಎಲ್ಲದಕ್ಕೂ ಒಂದು ಯೋಜನೆ ಹಾಕಿರ್ತಾನೆ. ಯಾರು ಎಲ್ಲಿ ಸೇರಬೇಕೋ ಆ ಭಗವಂತನೇ ನಿಶ್ಚಯಿಸುತ್ತಾನೆ. ಕಿತ್ತು ಕೊಂಡಾಗ ನೊಂದುಕೊಂಡು ಕುಗ್ಗಬೇಡಿ, ಕೊಡುವವನೊಬ್ಬ ಅವನಿದ್ದಾನೆ…
- ವಿಶ್ ಪಿತೃ
POPULAR STORIES :
ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!
ಹ್ಯಾಟ್ರಿಕ್ ಹೀರೊನ `ಖದರ್’ ಸಿನಿಮಾಗೆ ಸಿಕ್ಕಳು ನಾಯಕಿ..!
ಜಗ್ಗುದಾದ ಮೂರು ದಿನದಲ್ಲಿ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ..?
ದುಡ್ಡಿಲ್ಲ ಕಾಸಿಲ್ಲ ನೀವೆ ಒಂದು ಏರ್ ಕೂಲರ್‍ನ ಸಿದ್ದ ಮಾಡಬಹುದು..!!
ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????
ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?
ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?