ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎನ್ ಟಿ ಆರ್

Date:

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಕೆಜಿಎಫ್ ಚಿತ್ರದ ಸರದಾರ ಪ್ರಶಾಂತ್ ನೀಲ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇಡೀ ಭಾರತೀಯ ಸಿನಿಮಾರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್.

 

ಉಗ್ರಂ ಸಿನಿಮಾ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಪ್ರಶಾಂತ್ ನೀಲ್ ಇಂದು ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ನಿಂದ ತೆಲುಗು ಸಿನಿಮಾರಂಗಕ್ಕೆ ಹಾರಿರುವ ಪ್ರಶಾಂತ್ ನೀಲ್ ಪ್ರಭಾಸ್ ನಟನೆಯ ಸಲಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ತೆಲುಗು ಸ್ಟಾರ್ ನಟ ಜೂ.ಎನ್ ಟಿ ಆರ್, ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಪ್ರೀತಿಯ ವಿಶ್ ತಿಳಿಸಿದ್ದಾರೆ. ಅಂದಹಾಗೆ ಸಲಾರ್ ಬಳಿಕ ಪ್ರಶಾಂತ್ ನೀಲ್ ಜೂ.ಎನ್ ಟಿ ಆರ್ ಜೊತೆ ಸಿನಿಮಾ ಮಾಡುವುದು ಪಕ್ಕ ಆಗಿದೆ. ಜೂ ಎನ್ ಟಿ ಆರ್ ಹುಟ್ಟುಹಬ್ಬಕ್ಕೂ ಪ್ರಶಾಂತ್ ನೀಲ್ ವಿಶ್ ಮಾಡಿ ಮುಂದಿನ ಪ್ರಾಜೆಕ್ಟ್ ಶುರು ಮಾಡುವ ಬಗ್ಗೆ ಸುಳಿವು ನೀಡಿದ್ದರು. ಇದೀಗ ಜೂ ಎನ್ ಟಿ ಆರ್ ವಿಶ್ ಮಾಡಿ, ನಿಮ್ಮ ತಂಡ ಸೇರಿಕೊಳ್ಳಲು ಕಾಯುತ್ತಿರುವುದಾಗಿ ಹೇಳಿದ್ದಾರೆ. ಮುಂದೆ ಓದಿ…

ಜನ್ಮದಿನ ಆಚರಿಸಿಕೊಳ್ಳುತ್ತಿರುವ ಪ್ರಶಾಂತ್ ನೀಲ್ ಅವರಿಗೆ ತೆಲುಗು ಸ್ಟಾರ್ ನಟ ಜೂ ಎನ್ ಟಿ ಆರ್ ಸಾಮಾಜಿಕ ಜಾಲತಾಣದ ಮೂಲಕ ಶುಭಕೋರಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಸಹೋದರ ಪ್ರಶಾಂತ್ ನೀಲ್. ಯಾವಾಗಲೂ ಅದ್ಭುತವಾಗಿರಿ. ನಿಮ್ಮ ಫೋರ್ಸ್ ಸೇರಲು ನಾನು ಕಾಯುತ್ತಿದ್ದೀನಿ. ದೇವರು ಒಳ್ಳೆದು ಮಾಡಲಿ’ ಎಂದು ಟ್ವೀಟ್ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ “ಸಾಲು ಮರದ ತಿಮ್ಮಕ್ಕ” ಇನ್ನಿಲ್ಲ..!

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ "ಸಾಲು ಮರದ ತಿಮ್ಮಕ್ಕ" ಇನ್ನಿಲ್ಲ..! ಬೆಂಗಳೂರು: ಪದ್ಮಶ್ರೀ ಪುರಸ್ಕೃತ...

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ! ನವದೆಹಲಿ:...

ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರದಿಂದ 2025ನೇ ಸಾಲಿನ 'ಸಾರ್ವತ್ರಿಕ ರಜಾ' ದಿನಗಳ ಪಟ್ಟಿ ಬಿಡುಗಡೆ ಕರ್ನಾಟಕ...

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...