ರಶ್ಮಿಕಾ ಬಗ್ಗೆ ಮಾತಾಡಿದವರ ಬೆವರಿಳಿಸಿದ ರಕ್ಷಿತ್ ಶೆಟ್ಟಿ

Date:

ಬೆಂಗಳೂರು: ನಟ ರಕ್ಷಿತ್ ಶೇಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಲ್ಲೂ ರಕ್ಷಿತ್ ಇಲ್ಲವೇ ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಾಗ, ಇಲ್ಲವೇ ಲೈವ್‍ಗೆ ಬಂದಾಗ ಹೆಚ್ಚು ಜನ ಈ ಬಗ್ಗೆ ಕಮೆಂಟ್ ಮಾಡುತ್ತಾರೆ. ಅಲ್ಲದೆ ರಶ್ಮಿಕಾ ಮಂದಣ್ಣ ವಿರುದ್ಧ ಆಕ್ರೋಶವನ್ನು ಸಹ ವ್ಯಕ್ತಪಡಿಸುತ್ತಾರೆ. ಆದರೆ ರಕ್ಷಿತ್ ಶೆಟ್ಟಿ ಮಾತ್ರ ರಶ್ಮಿಕಾ ಪರ ಮಾತನಾಡುತ್ತಾರೆ. ಅಂದರೆ ಅಸಹ್ಯಕರವಾಗಿ ಮಾತನಾಡದಂತೆ ಮನವಿ ಮಾಡುತ್ತಾರೆ. ಅದೇ ರೀತಿ ಇದೀಗ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೌದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ 777 ಚಾರ್ಲಿ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಈ ಬಗ್ಗೆ ಜನ ಅಭಿಪ್ರಾಯ ತಿಳಿಯಲು ರಕ್ಷಿತ್ ಶೆಟ್ಟಿ ಇನ್‍ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಗಳು ಅವರ ಸಿನಿಮಾ ಜೊತೆಗೆ ವೈಯಕ್ತಿ ಬದುಕಿನ ಬಗ್ಗೆ ಸಹ ಪ್ರಶ್ನಿಸಿದ್ದಾರೆ. ಅಲ್ಲದೆ ರಶ್ಮಿಕಾ ಮಂದಣ್ಣ ಬಗ್ಗೆ ಸಹ ಅಸಹ್ಯಕರ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಇದನ್ನು ಕಂಡ ರಕ್ಷಿತ್ ಶೆಟ್ಟಿ ನಮ್ಮ ಬಗ್ಗೆ ನಾವೇ ಅಸಹ್ಯಪಟ್ಟುಕೊಳ್ಳುವ ರೀತಿ ಕಮೆಂಟ್ ಮಾಡಬಾರದು ಎಂದು ಮನವಿ ಮಾಡಿದರು.

ಈ ಕುರಿತು ಅಭಿಮಾನಿಗಳಿಗೆ ತಿಳಿಸಿದ ಅವರು, ಸುಮಾರು ಜನ ಕಮೆಂಟ್ ಮಾಡುತ್ತಿದ್ದೀರಿ, ಕೆಲವರ ಕಮೆಂಟ್ ನೋಡಲು ತುಂಬಾ ಬೇಜಾರಾಗುತ್ತದೆ. ನನ್ನ ಬಗ್ಗೆ ಮಾತನಾಡದೆ, ಬೇರೆಯವರ ಬಗ್ಗೆ ಕೇಳುತ್ತಿದ್ದೀರಿ. ನಿಮ್ಮೆಲ್ಲರಿಗೂ ನಾನು ಕೇಳಿಕೊಳ್ಳುತ್ತೇನೆ, ಹಳೆಯದ್ದನ್ನೆಲ್ಲ ಬಿಡೋಣ, ಆಗಿದ್ದೆಲ್ಲ ಆಗಿದೆ, ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಯಾರಿಗೇ ಆಗಲಿ ನಾವು ಅಗೌರವ ತೋರಬಾರದು. ನಮ್ಮ ಬಗ್ಗೆ ನಾವು ಅಸಹ್ಯಪಟ್ಟುಕೊಳ್ಳುವಂತಹ ಕಮೆಂಟ್‍ಗಳನ್ನು ಮತ್ತೊಬ್ಬರ ಬಗ್ಗೆಯೂ ಮಾಡಬಾರದು ಎಂದು ಹೇಳಿದ್ದಾರೆ.

 

ನಾನು ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೆ, ನಾವು ಮೊದಲು ಮಾನವರಾಗಿರೋಣ, ಎಲ್ಲರಿಗೂ ಗೌರವ ಕೊಡೋಣ, ಎಲ್ಲರಿಗೂ ಅವರದ್ದೇಯಾದ ಸ್ವಂತ ಬದುಕು ಇರುತ್ತದೆ. ಹೀಗಾಗಿ ಈ ಕಮೆಂಟ್ ಸೆಕ್ಷನ್‍ನಲ್ಲಿ ಒಳ್ಳೆಯ ಕಮೆಂಟ್ ನೋಡಲು ಇಷ್ಟಪಡುತ್ತೇನೆ. ನಮ್ಮ ಸಿನಿಮಾ ಬಗ್ಗೆ ಮಾಡುವ ಕಮೆಂಟ್‍ಗಳನ್ನು ನೋಡಲು ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ಅಸಹ್ಯಕರವಾಗಿ ಕಮೆಂಟ್ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ, ರಶ್ಮಿಕಾ ಅವರ ಪೋಸ್ಟ್‍ಗಳಿಗೆ ಈ ರೀತಿಯ ಕಮೆಂಟ್ ಸಾಮನ್ಯ ಎನ್ನುವಂತಾಗಿದೆ. ಈಗಲೂ ಸಹ ಹಲವರು ಈ ರೀತಿಯ ಕಮೆಂಟ್‍ಗಳನ್ನು ಮಾಡುತ್ತಿರುತ್ತಾರೆ. ರಕ್ಷಿತ್ ಶೆಟ್ಟಿ ಈ ಹಿಂದೆ ಸಹ ಬುದ್ಧಿ ಹೇಳಿದ್ದರು, ಈಗಲೂ ಸಹ ಅಸಹ್ಯಕರ ಕಮೆಂಟ್ ಮಾಡಬಾರದು ಎಂದು ಹೇಳಿದ್ದಾರೆ.

ಇದೀಗ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆಗಿ ಬೆಳೆದಿದ್ದು, ಅವರ ಬೆಳವಣಿಗೆಯನ್ನು ರಕ್ಷಿತ್ ಶೆಟ್ಟಿ ಸಹ ಪ್ರೋತ್ಸಾಹಿಸುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಹುಟ್ಟುಹಬ್ಬಕ್ಕೂ ಸಹ ರಕ್ಷಿತ್ ಶುಭಾಶಯ ತಿಳಿಸಿದ್ದರು. ಕಿರಿಕ್ ಪಾರ್ಟಿಯ ಹಳೇಯ ವೀಡಿಯೋ ಶೇರ್ ಮಾಡಿ ಶುಭ ಕೋರಿದ್ದರು.

ಸದ್ಯ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಸಪ್ತಸಾಗರದಾಚೆ ಎಲ್ಲೋ, ಪುಣ್ಯಕೋಟಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...