ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮ್ಮ ಅದ್ಭುತ ನಟನೆ ಮತ್ತು ನೃತ್ಯ ಕೌಶಲ್ಯದಿಂದ ಚಿತ್ರಪ್ರೇಮಿಗಳ ಹೃದಯ ಮಾತ್ರವಲ್ಲ ಸೆಲೆಬ್ರಿಟಿಗಳನ್ನೂ ಅಭಿಮಾನಿಗಳನ್ನಾಗಿ ಮಾಡಿಕೊಂಡಿದ್ದಾರೆ.
ಕಿರುಚಿತ್ರಗಳಲ್ಲಿ ನಟಿಸುತ್ತಿದ್ದ, ರಿಯಾಲಿಟಿ ಶೋಗಳಲ್ಲಿ ಡಾನ್ಸ್ ಮಾಡುತ್ತಿದ್ದ ಸಾಯಿ ಪಲ್ಲವಿ ನಟಿಯಾಗಿ ಪರಿಚಯವಾಗಿದ್ದು ಮಲಯಾಳಂನ ‘ಪ್ರೇಮಂ’ ಸಿನಿಮಾ ಮೂಲಕ. ಮೊದಲ ಸಿನಿಮಾದಲ್ಲಿಯೇ ಪ್ರಬುದ್ಧ ನಟನೆಯನ್ನು ಸಾಯಿ ಪಲ್ಲವಿ ನೀಡಿದ್ದರು.
‘ಪ್ರೇಮಂ’ ಸಿನಿಮಾದ ಮಲರ್ ಪಾತ್ರದಿಂದ ಸಾಯಿ ಪಲ್ಲವಿಯನ್ನು ಬೇರೆ ಮಾಡಲಾಗುವುದಿಲ್ಲ, ಆ ಪಾತ್ರವೇ ತಾನಾಗಿದ್ದರು ಸಾಯಿ ಪಲ್ಲವಿ. ಆದರೆ ‘ಪ್ರೇಮಂ’ ನಿರ್ದೇಶಕ ಅಲ್ಫೋನ್ಸ್ ಪುತ್ರೆನ್ ಮಲರ್ ಪಾತ್ರಕ್ಕೆ ಬೇರೆ ನಟಿಯನ್ನು ಆಯ್ಕೆ ಮಾಡಿದ್ದರು. ಅದೃಷ್ಟವಶಾತ್ ಆ ಪಾತ್ರ ಸಾಯಿ ಪಲ್ಲವಿ ಕೈಗೆ ಸಿಕ್ಕಿತು. ಆ ನಂತರ ಆಗಿದ್ದು ಈಗ ಇತಿಹಾಸ.
ಕಾಲೇಜು ಉಪನ್ಯಾಸಕಿ ಆಗಿರುವ ಮಲರ್ ತನ್ನ ವಿದ್ಯಾರ್ಥಿಯೊಂದಿಗೆ ಪ್ರೇಮದಲ್ಲಿ ಬೀಳುವುದು ಕತೆ. ಈ ಪಾತ್ರಕ್ಕೆ ತುಸು ಹಿರಿಯ ಆದರೆ ಸುಂದರವಾದ ನಟಿಯರಿಗೆ ‘ಪ್ರೇಮಂ’ ನಿರ್ದೇಶಕ ಅಲ್ಫೋನ್ಸ್ ಪುತ್ರೆನ್ ಹುಡುಕುತ್ತಿದ್ದರು. ಆಗ ಅವರಿಗೆ ಮೊದಲು ಅನಿಸಿದ್ದು ಈ ಸಿನಿಮಾಕ್ಕೆ ಆಗಿನ ಸ್ಟಾರ್ ನಟಿ ಅಸೀನ್ ಸೂಕ್ತವೆಂದು.