ಅಯ್ಯಯ್ಯೋ…ಚೂಯಿಂಗ್ ಗಮ್ ನುಂಗ್ ಬಿಟ್ರೇ..!

Date:

ಚೂಯಿಂಗ್ ಗಮ್ ನ ನಾವು ಕೆಲವೊಮ್ಮೆ ಅದರ ಇಷ್ಟವಾದ ರುಚಿಗೋಸ್ಕರ ಅಥವಾ ಬಾಯಿಯ ತಾಜಾತನಕ್ಕೊಸ್ಕರ ತಿಂತೀವಿ. ನಮ್ಮ ಬಾಲ್ಯದ ದಿನಗಳಿಂದಲೇ ನಾವು ಕೇಳಲ್ಪಟ್ಟ ಮಾತು “ಚೂಯಿಂಗ್ ಗಮ್ ನುಂಗ್ ಬೇಡ” ಎಂದು. ಆದ್ರೆ, ಕೆಲವೊಂದು ಸಾರಿ ಅಪ್ಪಿ ತಪ್ಪಿ ಯಾರಾದ್ರೂ ಅದನ್ನ ನುಂಗ್ ಬಿಟ್ರಿ ಅಂದ್ರೆ ಅವರ ಬಿಟ್ಟ ಬಾಯಿ ಬಿಟ್ಟಂಗೇ ಇರುತ್ತೆ ನೋಡಿ. ಯಾಕಂದ್ರೆ ಅಂದಿನಿಂದ ಇಂದಿನ ತನಕ ಈ ಚೂಯಿಂಗ್ ಗಮ್ ನುಂಗಿದ್ರೆ ಏನಾಗುತ್ತೆ ಅನ್ನೊ ವಿಷ್ಯ ಯಾರಿಗೂ ಗೊತ್ತಿಲ್ಲ. ಇದು ಹೊಟ್ಟೆಯೊಳಗೆ ಹೋದ್ರೆ ೭ ವರ್ಷ ತನ್ಕ ಗಟ್ಟಿಯಾಗಿ ಅಂಟ್ಕೊಂಡಿರುತ್ತೆ ಅಂತಿದ್ರು ಆದ್ರೆ ಇದೆಲ್ಲಾ ಬರೀ ಸುಳ್ಳು. ನಿಜ ವಿಷ್ಯನೇ ಬೇರೆ.
ಚೂಯಿಂಗ್ ಗಮ್ ನ್ನ ಮೊದಲು ಒಂದು ರೀತಿಯ ಗಮ್ ನಿಂದ ತಯಾರಿಸಲಾಗುತ್ತಿತ್ತು. ಈ ಗಮ್ ಗಳನ್ನು ಹಬ್ಬಿರುವ ತೀರ ಜಿಗುಟುಳ್ಳ ನೈಸರ್ಗಿಕ ಟಾರ್ ಗಳಿಂದ ಮಾಡಲಾಗುತ್ತದೆ. ಆದರೆ ಇಂದು ಹೆಚ್ಚಿನ ಗಮ್ ಗಳನ್ನು ಸಿಂಥೆಟಿಕ್ ರಬ್ಬರ್,ಕೆಲವೊಂದು ಸಂರಕ್ಷಣ ಪದಾರ್ಥಗಳು, ಕೃತಕ ಬಣ್ಣ, ಸಿಹಿ ಹಾಗೂ ಸುಗಂಧ ಇವುಗಳಿಂದ ಮಾಡಲಾಗುತ್ತದೆ. ಆದರೆ ಈ ಪದಾರ್ಥಗಳು ನೈಸರ್ಗಿಕವಾಗಿದ್ರೂ ಸರಿ ಕೃತಕವಾದ ಸಿಂಥೆಟಿಕ್ ಆದ್ರೂ ಸರಿ ಇವುಗಳ ಸಾಮಾನ್ಯ ಲಕ್ಷಣವೇನೆಂದ್ರೆ ಇವು ಜೀರ್ಣವಾಗಲಾರವು.
ಅಂದ ಮಾತ್ರಕ್ಕೆ ಇವು ನಿಮ್ಮ ಶರೀರದಲ್ಲಿ ಉಳಿದುಕೊಳ್ಳುತ್ತವೆ ಎಂದಲ್ಲ.ಈ ಗಮ್ ಹಾಗೂ ನಿಮ್ಮ ದೇಹದಲ್ಲಿ ಪಚನವಾಗದೆ ಬಾಕಿ ಉಳಿದ ಪದಾರ್ಥಗಳೆಲ್ಲವೂ ಸೇರಿ ದೇಹದಿಂದ ಹೊರಹಾಕಲ್ಪಡುತ್ತದೆ. ನೀವು ಅಕಾಸ್ಮಾತ್ತಾಗಿ ಚೂಯಂಗ್ ಗಮ್ ನ್ನು ನುಂಗಿದಲ್ಲಿ ಅದು ನಿಮಗೆ ಹೆಚ್ಚಿನ ತೊಂದರೆ ಕೊಡಲಾರದು ಆದರೆ ನೀವು ಬೇಕು ಬೇಕಂತಲೇ ಪದೆ ಪದೆ ನುಂಗುತ್ತಿದ್ದರೆ, ಅದು ನಿಮ್ಮ ಹಾಗೂ ವಿಶೇಷವಾಗಿ ಮಕ್ಕಳಲ್ಲಿ ಜೀರ್ಣಾಂಗ ವ್ಯೂಹಕ್ಕೆ ಹಾನಿಯುಂಟುಮಾಡುವುದಲ್ಲದೆ ಇದು ತೀವ್ರ ತರನಾದ ನೋವುಭರಿತ ಮಲಬದ್ಧತೆಗೂ ಕಾರಣವಾಗಬಹುದು ಎಂದು ಅಮೆರಿಕಾದ ಪ್ರಸಿದ್ದ ರಾಸಾಯನಿಕ ಸಂಸ್ಥೆಯೊಂದು ತಿಳಿಸಿದೆ.
ಚೂಯಿಂಗ್ ಗಮ್ ಪ್ರೇಮಿಗಳೆ… ಚೂಯಿಂಗ್ ಗಮ್ ನ್ನು ಅಪ್ಪಿ ತಪ್ಪಿಯೂ ನುಂಗದೆ, ಚರ್ವಿತ ಚರ್ವಣ ಮಾಡೊ ಹಸು ತರಹ ಜಗೀತಾನೇ ಇರಿ..ಗೊತ್ತಾಯ್ತು ತಾನೇ????

  • ಸ್ವರ್ಣಲತ ಭಟ್

POPULAR  STORIES :

ಈತ 14 ವರ್ಷದ ಪೋರ ನಿತ್ಯ 3 ಕಿ.ಮೀ ಈಜಿ ಕೊಂಡು ಸ್ಕೂಲ್ ಗೆ ಹೋಗ್ತಾನೆ.!

`ನಿಧಿ’ಯನ್ನ ಹುಡುಕಿ ತಂದ ಪ್ರೇಮಕಥೆ ಇದು…!

ಮತ್ತೊಮ್ಮೆ ಮತ್ತೊಂದು ಜೋಗಿಯಂತಹ ಸಿನಿಮಾ..!!!

ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?

ಮಗು ಕಳೆದುಕೊಂಡರೂ ಅವರು ಅಪ್ಪ ಅಮ್ಮ ಆದ್ರು..!

ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!

ಹ್ಯಾಟ್ರಿಕ್ ಹೀರೊನ `ಖದರ್’ ಸಿನಿಮಾಗೆ ಸಿಕ್ಕಳು ನಾಯಕಿ..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...