ಬೆಂಗಳೂರು: ಸೀರಿಲ್ ನಟಿ ಶಾಂಭವಿ ವೆಂಕಟೇಶ್ ತಮಗೆ ಅವಳಿ ಮಕ್ಕಳಾಗಿರುವ ಸಂತೋಷನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೆರಿಗೆ ಆಯ್ತಾ??? ಆಯ್ತಾ???… ಅಬ್ಬಾ ಎಷ್ಟೊಂದು ಸಂದೇಶಗಳು ಬಂದಿವೆ. ಹೌದು, ಆಯ್ತು. ತಡವಾಗಿ ತಿಳಿಸ್ತಾ ಇದೀನಿ ಕ್ಷಮೆ ಇರಲಿ. ನಿಮ್ಮೆಲ್ಲರ ಹಾರೈಕೆಯಂತೆ, ನಮ್ಮ ಕನಸು ಸಾಕಾರವಾಯ್ತು. ಜೂನ್ 4ಕ್ಕೆ ಅವಳಿ-ಜವಳಿ ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡುವುದರೊಂದಿಗೆ ಅಪ್ಪ-ಅಮ್ಮನಾಗಿ ಬಡ್ತಿ ಪಡೆದಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ.
ಕುಟುಂಬಕ್ಕೆ ಅವಳಿ ಮಕ್ಕಳನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಜನವರಿ 30ರಂದು ಅನೌನ್ಸ್ ಮಾಡಿದ್ದರು. ಬೇಬಿಬಂಪ್ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದರು. ಇದೀಗ ನಟಿ ಶಾಂಭವಿ ವೆಂಕಟೇಶ್ ಅವಳಿ ಮಕ್ಕಳಿಗೆ ಜನ್ಮವನ್ನು ಕೊಟ್ಟಿದ್ದಾರೆ. ಗಂಡು, ಹೆಣ್ಣು ಮಗು ಹುಟ್ಟಿರುವ ಖುಷಿಯಲ್ಲಿದ್ದಾರೆ.