ಜಿಂಬಾಬ್ವೆ ಸರಣಿಯ ನಂತರ ಕೂಲ್ ಕ್ಯಾಪ್ಟನ್ ಧೋನಿಗೆ ರೆಸ್ಟೋ ರೆಸ್ಟ್.. ಇನ್ನು ಮೂರು ತಿಂಗಳು ಅಂದ್ರೆ ಅಕ್ಟೊಬರ್ ವರೆಗೆ ಯಾವುದೇ ಟಿ20 ಹಾಗೂ ಏಕದಿನ ಸರಣಿಗಳಿಲ್ಲ. ಹಾಗಾಗಿ ಇನ್ನು ಮೂರು ತಿಂಗಳು ಮಾಹಿ ಬಿಂದಾಸ್ ಆಗಿ ಹಾಲಿಡೇ ಎಂಜಾಯ್ ಮಾಡಲಿದ್ದಾರೆ.
ಧೋನಿಗೆ ತಮ್ಮ ಮುದ್ದು ಕಂದ ಝೀವಾ ಅಂದ್ರೆ ಪಂಚಪ್ರಾಣ. ಕೂಲ್ ಕ್ಯಾಪ್ಟನ್ ಗೆ ಝೀವಾಳೇ ಪ್ರಪಂಚ ,ಝೀವಾಳೆ ಸರ್ವಸ್ವ. ಹಾಲಿಡೇಯನ್ನ ತಮ್ಮ ಫ್ಯಾಮಿಲಿ ಹಾಗೂ ಮುದ್ದು ಮಗಳು ಝೀವಾ ಜೊತೆ ಕಳೆಯಲಿದ್ದಾರಂತೆ.
ಹೌದು, ಧೋನಿಯ ಮುದ್ದು ಮಗಳು ಹುಟ್ಟಿದ್ದು ಏಕದಿನ ವಿಶ್ವಕಪ್ ಸಮಯದಲ್ಲಿ ನಂತರದಲ್ಲಿ ಮಾಹಿ ತುಂಬಾನೇ ಬ್ಯುಸಿಯಾಗಿದ್ರು. ಟಿ20 ವಿಶ್ವಕಪ್ , ಐಪಿಎಲ್ ಅಂತ ಮಗಳ ಜೊತೆ ಸಮಯ ಕಳೆಯೋದಕ್ಕೆ ಮಾಹಿಗೆ ಹೆಚ್ಚಿನ ಸಮಯಾನೇ ಸಿಗಲಿಲ್ಲ. ಹಾಗಾಗಿ ಈ ಹಾಲಿಡೇ ಸಮಯವನ್ನ ಸಂಪೂರ್ಣವಾಗಿ ಮಾಹಿ ಝೀವಾ ಜೊತೆ ಕಳೆಯಲು ಬಯಸಿದ್ದಾರೆ.
ದೀರ್ಘಾ ಕಾಲದ ಕ್ರಿಕೆಟ್ ನಲ್ಲಿ ಬ್ಯುಸಿ ಯಾಗಿದ್ದ ಧೋನಿಗೆ ತಮ್ಮ ಮಗಳು ತನ್ನನ್ನ ಗುರುತಿಸುತ್ತಾಳಾ ಅನ್ನೋ ಭಯ ಕಾಡ್ತಿದೆ ಅಂತೆ. ನಾನು ಈಗ ಮನೆಗೆ ಹೋದ್ರೆ ಝೀವಾ ನನ್ನನ್ನ ಗುರುತಿಸ್ತಾಳೆ ಅನ್ನೋ ನಂಬಿಕೆ ನನಗಿಲ್ಲ ಅಂತ ಧೋನಿ ಹೇಳಿದ್ದಾರೆ. ಹಾಗಾಗಿ ಜಿಂಬಾಬ್ವೆ ಸರಣಿಯ ನಂತರ ಮಗಳು ಝೀವಾ ಜೊತೆ ಎಂಜಾಯ್ ಮಾಡಲಿದ್ದು. ಅವಳು ನನ್ನನ್ನ ಅಪ್ಪ ಅಂತ ಗುರುತಿಸುವಂತೆ ಮಾಡ್ತೇನೆ ಅಂತ ಹೇಳಿದ್ದಾರೆ. ಮಗಳ ಜೊತೆ ಕಾಲ ಕಳೆಯಲು ಬಯಸುವ ಧೋನಿ ತಮ್ಮ ಫಿಟ್ನೆಸ್ ಕಡೆಗೂ ಹೆಚ್ಚಿನ ಗಮನಕೊಡಲಿದ್ದಾರೆ.
- ಶ್ರೀ
POPULAR STORIES :
ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!
ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!
7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ
ಮೂಢನಂಬಿಕೆ ಆಚರಣೆ ಕಾಯಿದೆ ಜಾರಿಗೆ ಬರುವುದೇ..?
ಸ್ನೇಹ ಸಂಪತ್ತು… ಫ್ರೆಂಡ್ಶಿಪ್ ಅಂದ್ರೆ ಅದೆಂಥಾ ತ್ಯಾಗ..!
ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?
ಚೀನಾದಲ್ಲಿ ಬೆತ್ತಲೆ ಚಿತ್ರ ಕೊಟ್ರೆ ಲೋನ್ ಕೊಡ್ತಾರೆ..! ಮಹಿಳೆಯರ ನಗ್ನ ಚಿತ್ರವೇ ಲೋನ್‍ಗೆ ಶೂರಿಟಿ…!
ಬೊಕ್ಕುತಲೆ ಕಸಿ, ವಿಗ್ ಜೋಡಣೆ ಚಟುವಟಿಕಿಗೆ ಬ್ರೇಕ್ : ಯು.ಟಿ ಖಾದರ್
ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ | ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ