ನಿದ್ದೆ ಎಂಬುದು ಮನುಷ್ಯನ ದೇಹಕ್ಕಿರೋ ಒಂದು ನೈಸರ್ಗಿಕ ಉಪಚಾರ. ಪ್ರತೀಯೊಬ್ಬ ಮನುಷ್ಯನೂ ತನ್ನದಿನದ ಆರಂಭವನ್ನು ಒಳ್ಳೆಯ ಉತ್ಸಾಹದಿಂದ ಮಾಡಬೇಕಾದಲ್ಲಿ ಸುಖನಿದ್ರೆ ಅವಶ್ಯ ಬೇಕು. ಕೆಲವರು ಹೇಳೋ ಪ್ರಕಾರ, “ನಿನಗೆ ರಾತ್ರಿ ಚೆನ್ನಾಗಿ ನಿದ್ದೆ ಮಾಡಲಾಗುತ್ತಿಲ್ಲವೆಂದಾದಲ್ಲಿ,ನೀನು ಯಾರದೋ ಕನಸಿನಲ್ಲಿ ಎಚ್ಚರವಿರುವಿ ಎಂದರ್ಥ” ಆದರೆ ಆವ್ಯಕ್ತಿಗೆ ಇದರ ಸುಳಿವೆಲ್ಲವೇನೋ!!! ನನಗೆ ನಿದ್ದೆ ಬರದ ಕಾರಣ ನನ್ನ ರೂಂಮೇಟ್ನ ಹಾಳು ಗೊರಕೆ ಎಂಬುದು. ಹೀಗೆ ಈ ಗೊರಕೆ ಎಂಬುದು ಪ್ರತ್ಯೊಬ್ಬನ ಜೀವನದಲ್ಲೂ ಒಂದು ಶಾಪವಾಗಿ ಉಳಿದವರಿಗೂ ಕೆಟ್ಟ ತೊಂದರೆಯನ್ನು ಕೊಡುತ್ತದೆ. ಇದರಿಂದ ಪಾರಾಗಬೇಕೆ?ಹಾಗಿದ್ದಲ್ಲಿ ಇಲ್ಲಿದೆ ಕೆಲವು ಸುಲಭ ಉಪಾಯಗಳು.
1.ಗೊರಕೆಹೊಡೆಯುವವರನ್ನು ಮಗ್ಗುಲು ಬದಲಾಯಿಸಿ
ಅಂದರೆ ನೀವು ಯಾವಾಗ ಬೆನ್ನ ಮೇಲೆ ಮಲಗುತ್ತೀರೋ ಆವಾಗ ನಿಮ್ಮ ನಾಲಿಗೆಯ ತುದಿ ನಿಮ್ಮ ಗಂಟಲಿನ ಹಿಂಬದಿಯ ಗೋಡೆಯನ್ನು ಸ್ಪರ್ಶಿಸುತ್ತದೆ.ಹೀಗಾಗಿ ಗೊರಕೆಯ ಶಬ್ದ ಉಂಟಾಗುತ್ತದೆ.ಇದಕ್ಕಾಗಿ ನಿಮ್ಮ ಜೊತೆಗಾರರು ಮಲಗಿದಾಗ ಅವರನ್ನು ನಿಧಾನವಾಗಿ ಪಕ್ಕಕ್ಕೆ ಹೊರಳಿಸಿ ಅವರ ಹಿಂಬದಿಗೆ ಒಂದು ದಿಂಬನ್ನಿಡಿ ಇದರಿಂದ ಅವರು ಮತ್ತೆ ಹೊರಳಲಾರರು.
2.ನಿಮ್ಮ ದಿಂಬನ್ನು ಆಗಾಗ್ಗೆ ಬದಲಾಯಿಸುತ್ತಿರಿ.
ಕೆಲವೊಂದು ತಜ್ನರ ಪ್ರಕಾರ ಕೆಲವು ವಿಧದ ಅಲರ್ಜಿ ಹಾಗೂ ಸೋಂಕು ಇರುವ ವ್ಯಕ್ತಿಗಳು ಹೆಚ್ಚಾಗಿ ಗೊರಕೆ ಹೊಡೆಯುತ್ತಾರೆ ಯಾಕಂದ್ರೆ ಅವರ ಮೂಗಿನ ನಾಳಗಳು ಕಿರಿದಾಗಿರುತ್ತವೆ,ಅದಕ್ಕಾಗಿ ನೀವು ನಿಮ್ಮ ತಲೆ ದಿಂಬುಗಳನ್ನು ಪದೇ ಪದೇ ೬ ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸಬೇಕು.ಮತ್ತು ಈ ತರದ ತೊಂದರೆ ಇದ್ದ ವ್ಯಕ್ತಿಗಳಿಗೆ ಸ್ವಲ್ಪ ದಪ್ಪನೆಯ ದಿಂಬು ಕೊಟ್ಟಲ್ಲಿ ಮೂಗಿನ ನಾಳಗಳು ತೆರೆದು ಕೊಳ್ಳುತ್ತವೆ.
3.ನಿದ್ದೆಗೆ ಮೊದಲು ಮಾಡುವ ಮಧ್ಯಸೇವನೆಯಿಂದ ದೂರವಿಡಿ
ಮಧ್ಯದಿಂದ ಮಾನವ ಶರೀರವು ರಿಲ್ಯಾಕ್ಸ್ ಆಗುವುದೇನೋ ನಿಜ ಆದರೆ ಅದರಿಂದ ನಿಮ್ಮಗಂಟಲಿನ ಸ್ನಾಯುಗಳೂ ತುಂಬಾ ರಿಲ್ಯಾಕ್ಸ್ ಆಗಿ ನಾಲಿಗೆಯು ಉಸಿರಾಡುವ ಗಾಳಿಯ ವಿರುದ್ದ ಹೊರಳುತ್ತದೆ ಇದರಿಂದ ಗೊರಕೆ ಗ್ಯಾರಂಟಿ
4.ಗಾಢ ಕಪ್ಪು ಬಣ್ಣದ ಗೆರೆಗಳಿರುವ ಕಿಟಿಕಿ ಪರದೆಯನ್ನು ರೂಮಿನ ಕಿಟಿಕಿಗಳಿಗೆ ಅಳವಡಿಸಿ
ಗಾಢ ಕಪ್ಪು ಬಣ್ಣದಲ್ಲಿರುವ ಕೆಲವೊಂದು ದಪ್ಪ ಗೆರೆಗಳು ನೈಸರ್ಗಿಕ ಹಾಗೂ ಕೃತಕ ಬೆಳಕುಗಳನ್ನು ತಡೆಗಟ್ಟಿ ಸುಂದರ ನಿದ್ದೆಯ ಪರಿಪೂರ್ಣತೆಯತ್ತ ನಮ್ಮನ್ನು ಕೊಂಡೊಯ್ಯುತ್ತದೆ.
5.ಶವರ್ ಬಾತ್ ತೆಗೆದುಕೊಳ್ಳಲು ಹೇಳಿ
ಮಲಗುವುದಕ್ಕೆ ಮುನ್ನ ತೆಗೆದುಕೊಳ್ಳೊ ಸುದೀರ್ಘ ಬೆಚ್ಚಗಿನ ಶವರ್ ನೀರ ಸ್ನಾನವು ಮೈಮನಗಳನ್ನು ಮುದಗೊಳಿಸುವುದಲ್ಲದೆ ಕಿರಿದಾಗಿರುವ ಮೂಗಿನ ನಾಳಗಳನ್ನು ತೆರವುಗೊಳಿಸುತ್ತದೆ.ಇದರಿಂದ ಗೊರಕೆ ಬರೋ ಸಾಧ್ಯತೆಗಳಿಲ್ಲ.
6. ಉಪ್ಪುಬಿಸಿನೀರ (ಸ್ಟೀಮ್) ಹಬೆ ತೆಗೆದುಕೊಳ್ಳಲು ಸೂಚಿಸಿ
ಕುದಿಯುವ ನೀರಿಗೆ ಉಪ್ಪನ್ನು ಹಾಕಿ ಅದರ ಹಬೆಯನ್ನು ತೆಗೆದು ಕೊಳ್ಳುವುದರಿಂದಲೂ ಮೂಗಿನ ನಾಳಗಳು ತೆರೆಯಲ್ಪಟ್ಟು ಉಸಿರಾಡಲು ಅನುಕೂಲವಾಗುತ್ತದೆ.ಗೊರಕೆಯಿಂದ ಆರಾಮ.
7.ಇಯರ್ ಪ್ಲಗ್ ಉಪಯೋಗಿಸಿ.
ಗೊರಕೆ ಹೊಡೆಯುಯುವವರಿಂದ ಮುಕ್ತಿ ಪಡೆಯುವ ತೀರ ಹಳೆಯ ಮಂತ್ರ ಇಯರ್ ಪ್ಲಗ್.ಇದರ ಉಪಯೋಗದಿಂದ ಕೇವಲ ಗೊರಕೆಯನ್ನಷ್ಟೆ ಅಲ್ಲ ಬದಲಾಗಿ ಬೆಳಗ್ಗಿನ ಅಲರಾಂ ಹಾಗೂ ಡಿಂಗ್ ಡಾಂಗ್ ಕಾಲಿಂಗ್ ಬೆಲ್ಲ್ ನಿಂದಲೂ ತಪ್ಪಿಸಿಕೊಳ್ಳಬಹುದು.
“ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ” ಅಂತೆ.ಆದರೆ ಈ ಮಾತು ಕೇವಲ ಗೊರಕೆಧಾರಿಗಳಿಗೇ ಅನ್ವಯಿಸುತ್ತದೇನೋ..ನಮಗೆ ಇವರೆ ದೊಡ್ದ ಚಿಂತೆ ಇನ್ನು ಸಂತೆಗೆ ಹೋಗಿ ನಿದ್ದೆ ಮಾಡೋದು ಕನ್ಸೇ ಸರಿ ಅಂದ್ರೂನು ಕನ್ಸೂ ಬೀಳೊಕೂ ಈ ನಿದ್ದೆ ಬೇಕಲ್ವೇ???
- ಸ್ವರ್ಣಲತ ಭಟ್
POPULAR STORIES :
`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’
ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!
ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!
ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!
7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ
ಮೂಢನಂಬಿಕೆ ಆಚರಣೆ ಕಾಯಿದೆ ಜಾರಿಗೆ ಬರುವುದೇ..?
ಸ್ನೇಹ ಸಂಪತ್ತು… ಫ್ರೆಂಡ್ಶಿಪ್ ಅಂದ್ರೆ ಅದೆಂಥಾ ತ್ಯಾಗ..!
ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?