ಇಂಗ್ಲೆಂಡ್ ಸರಣಿಯಿಂದ ಆವೇಶ್ ಖಾನ್ ಔಟ್

Date:

ಯುವ ವೇಗಿ ಆವೇಶ್ ಖಾನ್ ಭಾರತ-ಇಂಗ್ಲೆಂಡ್ ಪ್ರವಾಸ ಸರಣಿಯಿಂದ ಹೊರ ಬಿದ್ದಿದ್ದಾರೆ. ಕೌಂಟಿ XI ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಖಾನ್ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವುದರಿಂದ ಅವರು ಟೆಸ್ಟ್‌ ಸರಣಿಯಿಂದ ಹೊರ ನಡೆಯಬೇಕಾಗಿ ಬಂದಿದೆ. ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿ ಆಗಸ್ಟ್ 4ರಿಂದ ಸೆಪ್ಟೆಂಬರ್‌ 14ರ ವರೆಗೆ ನಡೆಯಲಿದೆ.

ಐದು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಭಾರತೀಯ ತಂಡ ಸದ್ಯ ಇಂಗ್ಲೆಂಡ್‌ನಲ್ಲಿದೆ. ಇದಕ್ಕೂ ಮುನ್ನ ಇಂಡಿಯನ್ಸ್ ಮತ್ತು ಕೌಂಟಿ ಸೆಲೆಕ್ಟ್ XI ಮಧ್ಯೆ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದೆ. ಜುಲೈ 20-22ರ ವರೆಗೆ ಈ ಪಂದ್ಯ ನಡೆಯಲಿದೆ. ಅಭ್ಯಾಸ ಪಂದ್ಯದ ಆರಂಭಿಕ ದಿನದಾಟದ ವೇಳೆ ಆವೇಶ್ ಖಾನ್ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.
ಡರ್‌ಹ್ಯಾಮ್‌ನಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಖಾನ್‌ ಎಡ ಹೆಬ್ಬೆರಳಿಗೆ ಗಾಯವಾಗಿ ಮುರಿತಕ್ಕೊಳಗಾಗಿದೆ. ಅಭ್ಯಾಸ ಪಂದ್ಯದಲ್ಲಿ ಆವೇಶ್ ಖಾನ್ ಅವರು ಕೌಂಟಿ ಸೆಲೆಕ್ಟ್ XI ತಂಡದ ಪರ ಆಡಿದ್ದರು. ಇಂಗ್ಲೆಂಡ್‌ನ ಹಲವಾರು ಆಟಗಾರರು ಕೋವಿಡ್-19 ಐಸೊಲೇಶನ್‌ಗೆ ತೆರಳಿದ್ದರಿಂದ ಖಾನ್ ಆಂಗ್ಲ ತಂಡದ ಪರ ಕಣಕ್ಕಿಳಿದಿದ್ದರು.


ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಆವೇಶ್ ಪ್ರವಾಸ ಸರಣಿಯಿಂದ ಹೊರ ಬಿದ್ದಿರುವ ಸಂಗತಿಯನ್ನು ತಿಳಿಸಿದೆ. ಗಾಯಕ್ಕೀಡಾಗಿರುವ ಖಾನ್ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳುವುದರಲ್ಲಿದ್ದಾರೆ. ವೈದ್ಯಕೀಯ ತಂಡ ಅವರನ್ನು ಉಪಚರಿಸುತ್ತಿದೆ ಎಂದು ಬಿಸಿಸಿಐ ಟ್ವೀಟ್‌ನಲ್ಲಿ ತಿಳಿಸಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...