ಒಂದು ಕಡೆ ನಮ್ಮ ಸಿನಿಮಾಗಳು ಚೆನ್ನಾಗೆ ಪದರ್ಶನ ಕಂಡ್ರು, ನಮ್ಮ ಸಿನಿಮಾಗಳಿಂತ ಒಮ್ಮೊಮ್ಮೆ ಬೇರೆ ಭಾಷೆಯ ಚಿತ್ರಗಳಿಗೆ ಅಧಿಕ ಬಿಲ್ಡಪ್ ಕೊಟ್ಟು ನಮ್ಮ ಪ್ರೇಕ್ಷಕರೆ ಆ ಸಿನಿಮಾವನ್ನ ನೋಡುವಂತೆ ಮಾಡಿ ಬಿಡುತ್ತಾರೆ.. ಹೀಗಾಗೆ ಕನ್ನಡದ ಸಿನಿಮಾಗಳಿಗಿಂತ ಇಲ್ಲಿ ಬೇರೆ ಭಾಷೆಯ ಚಿತ್ರಗಳ ಬಗ್ಗೆ ಕಾತುರತೆಗಳು ಹೆಚ್ಚಾಗಿ ಬಿಡುತ್ತೆ…
ಹೀಗಾಗೆ ಅದೆಷ್ಟೋ ಸಿನಿಮಾಗಳು ನಮಲ್ಲಿ ತಮ್ಮ ಹವಾವವನ್ನ ಉಳಿಸಿಕೊಂಡಿವೆ.. ಸದ್ಯಕ್ಕೆ ಮತ್ತೆ ಕರ್ನಾಟಕದಲ್ಲೆ ಹೆಚ್ಚು ಸುದ್ದಿಯಾಗ್ತಿರೋ ಸಿನಿಮಾವೆಂದ್ರ ಅದು ಕಬಾಲಿ…
ಈ ಬಾರಿ ಕಬಾಲಿ ಫೀವರ್ ಎಲ್ಲೆಡೆ ಹಬ್ಬಿದ್ದು, ಯಾವಾಗ ಜುಲೈ 15 ಬರಲಿದೆ ಅನ್ನೋ ಹಾಗೆ ಮಾಡಿದೆ ಈ ಸೂಪರ್‍ಸ್ಟಾರ್‍ನ ಅಭಿಮಾನಿಗಳಿಗೆ.. ಹಾಗಿದ್ರೆ ಕಬಾಲಿಗೆ ಟಾಂಗ್ ಕೊಡುವ ಕನ್ನಡದ ಸಿನಿಮಾ ಇದೇ ಟೈಮ್‍ಗೆ ರಿಲೀಸ್ ಆಗಲ್ವ..? ನಿರ್ಮಾಪಕರೆ ಕಬಾಲಿಯ ಎದುರು ತಮ್ಮ ಸೋಲನ್ನ ಒಪ್ಪಿಕೊಂಡು ಬಿಡ್ತಾರ..? ಅಕಸ್ಮತ್ ರಿಲೀಸ್ ಮಾಡಿದ್ರೆ ಆ ಚಿತ್ರವನ್ನ ನಮ್ಮವರೆ ಸೋಲಿಸಿ ಬಿಡ್ತಾರಾ..? ಇಂತಹ ಪ್ರಶ್ನೆ ನಿಮಲ್ಲಿ ಮೂಡುವುದು ಸಹಜ..
ನಿಮಗೆ ನೆನಪಿರಬಹುದು.. ಈ ಹಿಂದೆ ಬಾಹುಬಲಿ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಇದೇ ರೀತಿ ಕ್ರೇಜ್ ನಮ್ಮ ಚಿತ್ರರಂಗದಲ್ಲೂ ಇತ್ತು, ಆಗ ಬಾಹುಬಲಿಯೊಂದಿಗೆ ಅಖಾಡಕ್ಕೆ ಇಳಿದ ಚಿತ್ರವೇ ರಂಗಿತರಂಗ..
ಬಾಹುಬಲಿಯ ಕಂಬಂಧ ಬಾಹು ಎಷ್ಟೇ ದೊಡ್ಡದಿದ್ರು ಹೊಸಬರೆ ಸೇರಿ ಮಾಡಿದ ರಂಗಿತರಂಗ ಬಾಹುಬಲಿಯ ಎದುರು ಹೋರಾಡಿ ಗೆದ್ದು ಬಿಟ್ಟಿತ್ತು.. ಯಾಕಂದ್ರೆ ಚಿತ್ರಕಥೆ, ನಿರ್ದೇಶನ, ಹಾಡುಗಳು, ನಟರು ಎಲ್ಲವು ಪ್ರೇಕ್ಷಕನನ್ನ ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು..
ಈಗ ಕಬಾಲಿ ಸಿನಿಮಾ ಬರ್ತಿದೆ.. ಈ ಕಬಾಲಿಯ ಎದುರು ರಂಗಿತರಂಗದ ಹಾಗೆ ಖಡಕ್ಕಾಗಿ ಅಖಾಡಕ್ಕೆ ನಮ್ಮ ಸಿನಿಮಾವೊಂದು ಯಾಕೆ ಇಳಿಯ ಬಾರದು ಅಲ್ವ..?
ಜುಲೈ 15ಕ್ಕೆ ಕಬಾಲಿ ಜೊತೆಗೆ ಬರಬಹುದಾದ ಸಿನಿಮಾ ಯಾವುದು ಅಂತಾ ಯೋಚಿಸಿದ್ರೆ, ಕಣ್ಣ ಮುಂದೆ ಸಿಗೋದು ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2..
ಸದ್ಯಕ್ಕೆ ಈ ಸಿನಿಮಾ ಕೂಡ 600 ರಿಂದ 800 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಅದು ಕನ್ನಡ ಸೇರಿದಂತೆ ತಮಿಳಿನಲ್ಲೂ.. ಅಕಸ್ಮತ್ ಈ ಚಿತ್ರ ಬರಲಿಲ್ಲವೆಂದ್ರೆ ಹೊಸಬರ ಸಿನಿಮಾಗಳಂತು ಬರೋದು ಕಾಮನ್.. ಆ ಚಿತ್ರಗಳಾದ್ರು ಕಬಾಲಿಯ ಕಬಂಧ ಬಾಹುವಿನಿಂದ ತಪ್ಪಿಸಿಕೊಂಡು ಗೆದ್ದು ಬಿಡ್ಲಿ.. ಹಂಗಂತ ನಾವಿಲ್ಲ ತಲೈವಾ ವಿರೋಧಿಗಳಲ್ಲ.. ಕಬಾಲಿ ಕೂಡ ಗೆಲ್ಲಬೇಕಾದ ಅನಿವಾರ್ಯತೆ ಸದ್ಯಕ್ಕೆ ತಲೈವಾ ತಲೆ ಮೇಲಿದೆ.. @ ದಿ ಎಂಡ್ ಸಿನಿ ಪ್ರಭು ಕೈ ಹಿಡಿಯೋದು ಮಾತ್ರ ಒಂದೊಳ್ಳೆ ಸಧಭಿರುಚಿಯ ಚಿತ್ರವನ್ನಷ್ಟೆ ಏನಂತ್ತೀರಾ..?
- ಅಶೋಕ್ ರಾಜ್
POPULAR STORIES :
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ
ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!