ಒಲಿಂಪಿಕ್ಸ್: ದಾಖಲೆ ಬರೆದ ಭಾರತದ ಅವಿನಾಶ್ ಸಾಬ್ಲೆ

Date:

ಟೋಕಿಯೋ ಒಲಿಂಪಿಕ್ಸ್‌ನ 3000 ಮೀ ಸ್ಟೀಪಲ್‌ಚೇಸ್ ಪುರುಷರ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟು ಅವಿನಾಶ್ ಮುಕುಂದ್ ಸಬ್ಲೆ ತಮ್ಮದೇ ಆದ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ.

3000 ಮೀ ದೂರವನ್ನು 8:18.2 ನಿಮಿಷಗಳಲ್ಲಿ ಕ್ರಮಿಸುವುದರ ಮೂಲಕ ಅವಿನಾಶ್ ಮುಕುಂದ್ ಸಬ್ಲೆ ಈ ಹಿಂದೆ ತಾವು ನಿರ್ಮಿಸಿದ್ದ ದಾಖಲೆಯೊಂದನ್ನು ತಾವೇ ಮುರಿದುಕೊಂಡಿದ್ದಾರೆ. ಹಾಗೂ ಈ ಸುತ್ತಿನಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದರ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ.
ಮೊದಲ 1000 ಮೀ. ದೂರವನ್ನು 2:46.6 ನಿಮಿಷಕ್ಕೆ ತಲುಪಿದ ಅವಿನಾಶ್ ಸಬ್ಲೆ 2000 ಮೀಟರ್‌ನ್ನು 5:33.6 ನಿಮಿಷಕ್ಕೆ ತಲುಪಿದರು ಹಾಗೂ ಕೊನೆಯ ಮತ್ತು ಮೂರನೇ ಸುತ್ತಾದ 3000 ಮೀಟರ್ ದೂರವನ್ನು ಅವಿನಾಶ್ ಸಬ್ಲೆ 8:18.2 ನಿಮಿಷಗಳಲ್ಲಿ ಕ್ರಮಿಸಿ ಏಳನೇ ಸ್ಥಾನ ಪಡೆದುಕೊಂಡರು. ಈ ಮೂಲಕ ಅವಿನಾಶ್ ಸಬ್ಲೆ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಫೆಡರೇಷನ್ ಕಪ್ ಟೂರ್ನಿಯಲ್ಲಿ ತಾವು ನಿರ್ಮಿಸಿದ್ದ ದಾಖಲೆಯನ್ನು ತಾವೇ ಮುರಿದು ಹಾಕಿದ್ದಾರೆ.

ಫೆಡರೇಷನ್ ಕಪ್ ಟೂರ್ನಿಯಲ್ಲಿ ಅವಿನಾಶ್ ಸಬ್ಲೆ 3000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯನ್ನು 8:20.20 ನಿಮಿಷಗಳಲ್ಲಿ ಪೂರೈಸಿದ್ದರು. ಆದರೆ ಈಗ ಅದೇ ಅಂತರವನ್ನು 8:18.2 ನಿಮಿಷಗಳಲ್ಲಿ ಪೂರೈಸುವುದರ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದು ಹಾಕಿದ್ದಾರೆ.
ಅತ್ತ ಮಹಿಳಾ ಸಿಂಗಲ್ಸ್ ಆರ್ಚರಿ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ರಷಿಯನ್ ಒಲಿಂಪಿಕ್ಸ್ ಕಮಿಟಿಯ ಆಟಗಾರ್ತಿ ಕ್ಸೆನಿಯಾ ವಿರುದ್ಧ 6-5 ಅಂತರದಿಂದ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...