ಅದು 2009, ನವೆಂಬರ್ 7. ಮುಂಬೈನ 13 ವರ್ಷ ಬಾಲಕ ಸಂತೋಷ್ ಪ್ರಭಾಕರ್ ಅಪ್ಪನ ಜೊತೆ ಬೈಕೇರಿ ಅದೆಲ್ಲಿಗೋ ಹೊರಟು ಬಿಟ್ಟಿದ್ದ..! ಪುಟ್ಟ ಕಣ್ಣುಗಳಲ್ಲಿ ನೂರಾರು ಕನಸು ಕಂಡಿದ್ದ ಆ ಬಾಲಕನಿಗಾಗಲೀ, ಅಥವಾ ಅವನ ತಂದೆಯಾಗಲೀ ಇವತ್ತು ಹೀಗಾಗುತ್ತೆ ಅಂತೆ ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ..! ಅಂತೆಯೇ ಆ ಟ್ರಕ್ ಡ್ರೈವರ್, ಓನರ್ ಕೂಡ..! ಹೌದಲ್ವಾ, ಅಪಘಾತ ಹೇಳಿ ಕೇಳಿ ಸಂಭವಿಸುತ್ತದೆಯೇ? ಇಲ್ಲ, ಗ್ರಹಚಾರ. ಹಿರಿಯರೊಂದು ಮಾತು ಹೇಳ್ತಾರೆ, ಸಾವಿನ ಗಳಿಗೆಯಾದ್ರೂ ತಪ್ಪಬಹುದು. ಆದರೆ, ನೋವು ತಿನ್ನುವ ಗಳಿಗೆ ತಪ್ಪಲ್ಲ..! ಹೌದು, ಅವತ್ತು ಯಮ ಸ್ವರೂಪದಲ್ಲಿ ಬಂದಿದ್ದ ಟ್ರಕ್‍ಗೆ ಇವರ ಬೈಕಿಗೆ ಬಡಿದಿತ್ತು. ಕೆಳಕ್ಕೆ ಬಿದ್ದ 13ರ ಪೋರ ಸಂತೋಷ್‍ನ ಎಡ ಕಾಲಿನ ಮೇಲೆ ಟ್ರಕ್ ಹಾದು ಹೋಗಿ ಕಾಲು ಕಳೆದುಕೊಂಡ..! ಅಪ್ಪ ಸಿಂಗೇರಿಗೆ ಗಂಭೀರ ಗಾಯಗಳಾದರೂ ಅವರು ಚೇತರಿಸಿಕೊಂಡರು..!
ಪ್ರಕರಣ ದಾಖಲಾಯಿತು, ಮೋಟರ್ ಅಪಘಾತ ಹಕ್ಕುಗಳ ನ್ಯಾಯಾಧೀಕರಣ ಟ್ರಕ್ ಮಾಲೀಕ ಮತ್ತು ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿ ಸೇರಿ ಪರಿಹಾರ ನೀಡುವಂತೆ ಸೂಚಿಸಿತು..! ಪ್ರಕರಣ ನ್ಯಾಯಲಯದಲ್ಲಿ ತನುಖೆಯಾಗಿ ಸಂತೋಷ್ ಪ್ರಭಾಕರ್ ಎಂಬ ಅಂದಿನ 13ರ ಬಾಲಕ, ಇಂದಿನ 20ರ ತರುಣನಿಗೆ 50 ಲಕ್ಷ ಪರಿಹಾರ ಹಣ ಕೈ ಸೇರಲು 7 ವರ್ಷ ಬೇಕಾಯಿತು..! ಹೌದು, 7ವರ್ಷದ ಹಿಂದಿನ ಅಪಘಾತದಲ್ಲಿ ಕಾಲುಕಳೆದುಕೊಂಡು ಸಂತೋಷ್‍ಗೆ ಈಗ 50,18,979 ರೂಪಾಯಿ ಪರಿಹಾರ ಹಣ ಸಿಕ್ಕಿದೆ..! ಅಂತೆಯೇ ಇನ್ನೊಂದು ತೀರ್ಪಿನಂತೆ ಅವತ್ತು ಗಾಯಗೊಂಡಿದ್ದ ಸಂತೋಷ್ ತಂದೆ ಸಿಂಗೇರಿಗೆ 9,69,334 ರೂಪಾಯಿ ಹಣ ಪರಿಹಾರ ರೂಪದಲ್ಲಿ ದೊರೆತಿದೆ..! ವಿಷ್ಯಾ ಏನಪ್ಪಾ ಅಂದ್ರೆ ಅಪಘಾತಕ್ಕೀಡಾಗಿ ಶಾಶ್ವತ ಅಂಗವಿಕಲತೆ ಅನುಭವಿಸುವಂತಾಗಿರುವ ಹುಡುಗನಿಗೆ ಸಿಗಬೇಕಾದ ಪರಿಹಾರದ ಹಣ ಸಿಗಲು 7 ವರ್ಷ ಬೇಕಾಯಿತೇ?
POPULAR STORIES :
ಕಬಾಲಿಗೆ ಕನ್ನಡದಲ್ಲಿ ಟಾಂಗ್ ಕೊಡುವ ಸಿನಿಮಾ ಯಾವುದು.?
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ಸಲ್ಮಾನ್ ಗಿದೋ ಬಿಸಿ ಬಿಸಿ ಕಜ್ಜಾಯ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ