ಕೆಜಿಎಫ್ 2 ಕಲೆಕ್ಷನ್ ಟಾರ್ಗೆಟ್ ಕೇಳಿದ್ರೆ ಬೆಚ್ಚಿ ಬೀಳ್ತೀರ!

Date:

ಕೆಜಿಎಫ್ ಇದೊಂದು ಚಿತ್ರ ಇಡೀ ಭಾರತೀಯ ಚಿತ್ರರಂಗವನ್ನೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಕೆಜಿಎಫ್ ಯಾವ ಮಟ್ಟಿಗೆ ಸದ್ದು ಮಾಡಿತು ಎಂಬುದನ್ನು ಬಿಡಿಸಿ ಹೇಳುವ ಅಗತ್ಯವೇ ಇಲ್ಲ, ಏಕೆಂದರೆ ಕೆಜಿಎಫ್ ಮಾಡಿರುವ ಸಾಧನೆ ಮತ್ತು ಮುಟ್ಟಿರುವ ಎತ್ತರದ ಕುರಿತು ತಿಳಿಯದೆ ಇರುವವರು ಯಾರು ಇಲ್ಲ.

 

ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿರುವ ಕೆಜಿಎಫ್ ಭಾಗ 1 ಕನ್ನಡ ಚಿತ್ರರಂಗದಲ್ಲಿ ಎಂದಿಗೂ ಮರೆಯಲಾಗದ 1ದೊಡ್ಡ ಮೈಲಿಗಲ್ಲು. ಇದೀಗ ಇದರ ಮುಂದುವರೆದ ಭಾಗ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಮುಗಿದಿದ್ದು ಚಿತ್ರಮಂದಿರಕ್ಕೆ ದಾಪುಗಾಲಿಡುವುದು ಬಾಕಿ ಇದೆ. ಹೀಗಿರುವಾಗಲೇ ಈ ಚಿತ್ರದ ಆಡಿಯೋ ಹಕ್ಕನ್ನು ಭಾರತದ ಪ್ರತಿಷ್ಠಿತ ಆಡಿಯೋ ಕಂಪೆನಿ ಲಹರಿ – ಟಿ ಸಿರೀಸ್ ಸಂಸ್ಥೆ ಖರೀದಿಸಿದೆ. ಹೀಗೆ ಈ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಕೆಜಿಎಫ್ ಚಾಪ್ಟರ್ 2 ಬಗ್ಗೆ ಮಾತನಾಡುವ ವೇಳೆ ಈ ಚಿತ್ರ ಎಷ್ಟು ಮೊತ್ತವನ್ನು ಕಲೆಕ್ಟ್ ಮಾಡಲಿದೆ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

 

ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದರೆ ನೂರು ಇನ್ನೂರು ಕೋಟಿಯಲ್ಲ ಅದರ ತಾಕತ್ತು ಏನಿದ್ದರೂ 600 ಕೋಟಿ ಕಳಿಸುವಷ್ಟು ಎಂದು ಲಹರಿ ವೇಲು ಹೇಳಿದ್ದಾರೆ. ಹೌದು ಕೆಜಿಎಫ್ ಚಾಪ್ಟರ್ 2 600 ಕೋಟಿ ಗಳಿಕೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಲಹರಿ ವೇಲು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಲಹರಿ ವೇಲು ಅವರ ಈ ವಿಶ್ವಾಸದ ಮಾತುಗಳನ್ನು ಕೇಳಿದ ಕನ್ನಡ ಚಲನಚಿತ್ರರಂಗದ ಪ್ರೇಕ್ಷಕರು ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿರುವುದಂತೂ ನಿಜ.

Share post:

Subscribe

spot_imgspot_img

Popular

More like this
Related

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...