ನಟಿ ಲೀಲಾವತಿ ಮತ್ತು ವಿನೋದ್ ರಾಜ್ ನೆಲಮಂಗಲ ಬಳಿಯ ತಮ್ಮ ತೋಟದ ಮನೆಯಲ್ಲಿ ವಾಸವಿದ್ದರು. ಹೀಗೆ ನಟಿ ಲೀಲಾವತಿ ಬಚ್ಚಲು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ನಂತರ ಪ್ರಜ್ಞೆ ತಪ್ಪಿದ ಲೀಲಾವತಿ ಹತ್ತು ಹದಿನೈದು ನಿಮಿಷಗಳ ಕಾಲ ಎದ್ದು ಸಹಾಯಕ್ಕೆ ಯಾರಾದರೂ ಇದ್ದೀರಾ ಎಂದು ಕೂಗಿ ಕೂಗಿ ಕರೆದಿದ್ದಾರೆ. ಆದರೆ ಲೀಲಾವತಿಯವರು ಒಳಗಡೆಯಿಂದ ಬಾಗಿಲು ಹಾಕಿಕೊಂಡ ಕಾರಣ ಅವರ ಕೂಗು ಹೊರಗಿನವರಿಗೆ ಕೇಳಿಸಲೇ ಇಲ್ಲ.
ನಂತರ ಸುಮಾರು ಮುಕ್ಕಾಲು ಗಂಟೆ ಅಲ್ಲೇ ನೋವನ್ನು ಅನುಭವಿಸಿದ ನಂತರ ಹೇಗೋ ಮಾಡಿ ತಾವೇ ಬಾಗಿಲು ತೆರೆದುಕೊಂಡು ಹೊರಬಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣವೇ ಅವರ ಮಗ ವಿನೋದ್ ರಾಜ್ ಲೀಲಾವತಿಯವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸದ್ಯ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಲೀಲಾವತಿಯವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ ಎಂದು ವಿನೋದ್ ರಾಜ್ ಹಂಚಿಕೊಂಡಿದ್ದಾರೆ.