‘ಜವಬ್ದಾರಿಯಿಂದ ಸವಾರಿ ಮಾಡು ಮತ್ತು ಜವಬ್ದಾರಳಾಗಿರು’ ನನ್ನ 18ನೇ ವರ್ಷದ ಹುಟ್ಟುಹಬ್ಬಕ್ಕೆ ಅಪ್ಪ ಹೊಸ ಸ್ಕೂಟಿ ಉಡುಗೊರೆ ನೀಡಿ ಅದರ ಕೀಯನ್ನು ಕೈಲಿಟ್ಟು ಹೇಳಿದ ಮಾತು..!
ಸ್ಕೂಟಿಯನ್ನೇರಿ ಸವಾರಿ ಮಾಡುವ ಕನಸು ಚಿಕ್ಕಂದಿನಿಂದಲೂ ಇತ್ತು. ನನ್ನ ಗೆಳತಿ ಅವಳ ಟೀನೇಜ್ ನಲ್ಲಿ ಸ್ಕೂಟಿ ಓಡಿಸ್ತಾ ಇದ್ರೆ ನನಗೇನೋ ಜಲಸ್..ಒಂಥರಾ ಹೊಟ್ಟೆಕಿಚ್ಚು ಅಂತರಕ್ಕಾಗಿ ಅದು..!
ನಾನು 11ನೇ ತರಗತಿಗೆ ಬಂದಾಗ ಗೆಳತಿ ಅವಳ ಸ್ಕೂಟಿಯನ್ನು ರೈಡ್ ಮಾಡೋಕೆ ಕೊಟ್ಟಳು..! ಅದೇ ಮೊದಲು ಸ್ಕೂಟಿ ಓಡಿಸಿದ್ದು.
ಅವಳೇನೋ ಗಾಡಿ ಕೊಟ್ಟಳು ನಾನು ಖುಷಿಯಿಂದ ಟ್ರೈ ಮಾಡ್ದೆ ಆದ್ರೆ ಎಲ್ಲೋ ಒಂದು ಕಡೆ ಅಪ್ಪ ನೋಡಿ ಬಿಟ್ರೆ ಅನ್ನೋ ಭಯ..! ಡಿಎಲ್ ಆಗೋ ತನಕ ಸ್ಕೂಟಿ ನಿಷೇಧ ಅಂತ ದಿನಾ ಲೆಕ್ಚರ್ ಪಡೀತಾ ಇದ್ದೆ ನೋಡಿ.. ಪರವಾನಗಿ ಸಿಗೋ ಮೊದಲು..!
ಈಗ ಲೈಸೆನ್ಸ್ ಪಡೆದಿರುವ ನಾನು ಪಂಜರದಿಂದ ಹೊರಬಂದ ಹಕ್ಕಿ . ಫ್ರೀ ಬರ್ಡ್.
ಡಾಕ್ಟರ್ ಆಗಿ ಜನರಿಗೆ ಏನಾದ್ರೂ ಸಹಾಯ ಮಾಡ್ಬೇಕು ಅನ್ನೋ ಕನಸು ಮತ್ತು ಆಸೆಯಿಂದ ಮೆಡಿಕಲ್ ಎಂಟ್ರೆನ್ಸ್ ಕೋಚಿಂಗ್ ಗೆ ಹೋಗೋಕೆ ಶುರುಮಾಡಿದೆ. ಅಪ್ಪ ಕೊಡಿಸಿದ ನನ್ನ ಸ್ಕೂಟಿಯನ್ನು ಖುಷಿ ಖುಷಿಯಲಿ ರೈಡ್ ಮಾಡ್ತಾ ಕೋಚಿಂಗ್ ಗೆ ಹೋಗ್ತಿದ್ದೆ.!
ಒಂದುದಿನ ನನ್ನ ಕೋಚಿಂಗ್ ಕ್ಲಾಸ್ ದಾರಿಯಲ್ಲಿ ಆಟೋವಾಲನಿಗೆ ಕಾರೊಂದು ಗುದ್ದಿ ಪರಾರಿಯಾಗಿದ್ದ..! ಒಬ್ಬರೇ ಒಬ್ಬರು ಅವನಿಗೆ ಏನಾಯ್ತು ಅಂತ ನೋಡಲು ಬರಲಿಲ್ಲ..! ಅವನು ಕೆಳಗೆ ಬಿದ್ದು ಒದ್ದಾಡುತ್ತಿದ್ದ.ರಕ್ತ ಸುರಿಯುತ್ತಿತ್ತು..!
ನಾನು ಅವನಿಗೆ ಸಾಹಾಯ ಮಾಡಬೇಕೆಂದು ಕೊಂಡೆ. ಆದರೆ, ನನಗೆ ಕ್ಲಾಸ್ ಗೆ ತಡವಾಗಿದ್ರಿಂದ ಅವನನ್ನು ಬಿಟ್ಟು ಹೋದೆ..!
ಕೆಲವೇ ಕೆಲವು ಮೀಟರ್ ದೂರ ಹೋಗಿದ್ದೆ, ಬೇಜಾರಾಯ್ತು, ಕೆಟ್ಟ ಅನುಭವವಾಯ್ತು..! ಸ್ಕೂಟಿಯನ್ನು ನಿಲ್ಲಿಸಿ ಅವನನ್ನು ನೋಡಲು ವಾಪಸ್ಸು ಬಂದೆ..! ಅವನ ತಲೆಗೆ ಗಾಯವಾಗಿ ರಕ್ತಸ್ರಾವ ಆಗ್ತಿತ್ತು..! ಕೆಲವರು ಅವನನ್ನು ನೋಡಿದರೂ ಯಾವುದೇ ಸಹಾಯಕ್ಕೆ ಮಾತ್ರ ಬರಲಿಲ್ಲ..!
ನಾನು ಅವನ ತಲೆಗೆ ಟವೆಲ್ ಬಿಗಿಯಾಗಿ ಕಟ್ಟಿದೆ. ಗಾಯವನ್ನು ಕೈಗಳಿಂದ ಗಟ್ಟಿಯಾಗಿಡಿದಿಟ್ಟುಕೊಳ್ಳಲು ಹೇಳಿ ಸ್ಕೂಟಿಯಲ್ಲಿ ಕೂರಿಸಿಕೊಂಡೆ..! ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆ..!
ಮನೆಗೆ ಫೋನ್ ಮಾಡಿ, ನಾನು ಒಬ್ಬರಿಗೆ ಸಹಾಯ ಮಾಡುವ ಸಲುವಾಗಿ ಆಸ್ಪತ್ರೆಯಲ್ಲಿ ಇದ್ದೇನೆ ಎಂದು ಅಮ್ಮನಿಗೆ ಹೇಳಿದೆ..! ಅಮ್ಮ ನಂಬಲಿಲ್ಲ..! ಆರಾಮಾಗಿದ್ದಿ ತಾನೆ, ಆಸ್ಪತ್ರೆಯಲ್ಲಿ ಯಾಕಿದ್ದಿ ಅಂದ್ರು. ಕೆಲವು ಸಮಯದ ನಂತರ. ಅಪ್ಪನನ್ನು ಕಳುಹಿಸಿದರು. ಆಸ್ಪತ್ರೆಗೆ ಬಂದ ಅಪ್ಪ ಪರಿಸ್ಥಿತಿ ಅರ್ಥಮಾಡಿಕೊಂಡ್ರು, ಗಾಯಗೊಂಡ ಆಟೋವಾಲನಿಗೆ ಟ್ರೀಟ್ಮೆಂಟ್ ಗಂತ ಸ್ವಲ್ಪ ಹಣವನ್ನು ನೀಡಿದ್ರು.
ನನ್ನ ಕಡೆ ನೋಡಿ ” ನಾನು ಹೆಮ್ಮೆ ಪಡುತ್ತೇನೆ ಮಗಳೇ” ಅಂತ ಹೇಳಿದ್ರು..!
ಅವರನ್ನು ತಬ್ಬಿಕೊಂಡೆ, ನಂತರ ಕ್ಲಾಸ್ಗೆ ಹೊರಟೆ..! ದಾರಿಯಲ್ಲಿ ಯೋಚಿಸಿದೆ ನಾನೇನೋ ಜವಬ್ದಾರಿ ನಿಭಯಿಸಿದ್ದೇನೆ ಎಂದು ಚಕಿತಗೊಂಡೆ.
ಅಪ್ಪ ಹೇಳಿದ್ದ ಮಾತು…”ಜವಬ್ದಾರಿಯಿಂದ ಸವಾರಿ ಮಾಡು ಮತ್ತು ಜವಬ್ದಾರಳಾಗಿರು'” ಕಿವಿಯಲ್ಲಿ ಗುಯ್ ಗುಟ್ಟುತ್ತಿತ್ತು..! ಇವತ್ತಿಗೂ ಆ ಮಾತು ನೆನಪು ಮಾಡಿಕೊಳ್ಳುತ್ತೇನೆ ಸ್ಕೂಟಿ ಸ್ಟಾರ್ಟ್ ಮಾಡುವ ಮೊದಲು..!
“ಜವಬ್ದಾರಿಯಿಂದ ಸವಾರಿ ಮಾಡು ಮತ್ತು ಜವಬ್ದಾರಳಾಗಿರು”
- ರಘು ಭಟ್
POPULAR STORIES :
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
ಆಟೋ ಚಾಲಕರ ಸಾರಥ್ಯದಲ್ಲಿ …..Shankar Nag
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?
ಅರೆರೆ!ಇದೇನಿದು! ವಾಟ್ಸ್ ಆ್ಯಪ್‍ಗೆ ಇತಿಶ್ರೀ ಹಾಡೋ ಕಾಲ ಬಂತೇ????
ಶುರುವಾಯ್ತು ಮತ್ತೆ ಕನ್ನಡಿಗರ ಪರ್ವ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳು ಘರ್ಜಿಸುತ್ತಿವೆ..!
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!