“ಕೋಸ್ ಕೋಸ್ ಪರ್ ಬದ್ಲೆ ಪಾನಿ ಚಾರ್ ಕೋಸ್ ಪರ್ ಬಾನಿ” ಅರ್ಥಾತ್ ಒಂದೊಂದು ಕೋಸಗಲಕ್ಕೆ ನೀರಿನಲ್ಲಿ ಯಾವ ತರನಾದ ಬದಲಾವಣೆಯಾಗುತ್ತೋ ಅದೇ ರೀತಿಯಲ್ಲಿ ನಾಲ್ಕು ಕೋಸುದೂರಕ್ಕೆ ಭಾಷೆಯಲ್ಲಿ ಬದಲಾವಣೆಯಾಗುತ್ತೆ ಅಂತಾರೆ ತಿಳಿದವರು. ವಿವಿಧ ಭಾಷೆಯ ಜೊತೆ ಜನರ ಹಾವ ಭಾವ, ಆಹಾರ ಕ್ರಮ, ಸಂಪ್ರದಾಯಗಳು ಹಾಗೂ ವೇಷ ಭೂಷಣಗಳಲ್ಲೂ ವ್ಯತ್ಯಾಸವುಂಟಾಗುತ್ತದೆ. ಪ್ರತಿಯೊಂದು ಜನಾಂಗಕ್ಕೂ ಅವರದ್ದೇ ಆದ ಸಂಪ್ರದಾಯಗಳಿದ್ದು ಅದಕ್ಕೆ ತಕ್ಕಂತೆ ಅವರ ಉಡುಗೆ ತೊಡುಗೆಗಳಿರುತ್ತದೆ, ನಾವು ಅಂತಹ ತಾಣಗಳಿಗೆ ಭೇಟಿ ಮಾಡಿದಾಗಲಷ್ಟೆ ನಮಗೆ ಇಂತಹವುಗಳ ಬಗ್ಗೆ ಪ್ರತ್ಯಕ್ಷ ದರ್ಶನವಾಗಲು ಸಾಧ್ಯ. ಹಲವು ಮಂದಿ ಪ್ರವಾಸ ಮಾಡಿದ್ದೂ ಇದೆ ಮತ್ತೆ ಅಂತಹ ಉಡುಪುಗಳ ವೇಷ ತೊಟ್ಟು ಫೋಟೋ ಕ್ಲಿಕ್ಕಿಸ್ಸಿದ್ದೂ ಆಗಿರುತ್ತದೆ.ಇಷ್ಟಕ್ಕೇ ಮುಗಿಯಲಾರದು ಈ ಕಥೆ. ಇನ್ನೂ ನಮ್ಮ ಭಾರತೀಯ ಬುಡಕಟ್ಟು ಜನಾಂಗದ ಬಗ್ಗೆ ನಾವು ತಿಳಿಯುವಂತದ್ದು ಸಾಕಷ್ಟು ಇದೆ. ಇಲ್ಲಿ ಇಂತಹದೇ ಸಾಂಪ್ರದಾಯಿಕ ಜನಾಂಗಕ್ಕೆ ಸಂಬಂಧಿಸಿದ 25 ಸುಂದರ ಬಣ್ಣ ಬಣ್ಣದ ಭಾವಚಿತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ,ಇವ್ರುಗಳ ಪರಿಚಯದೊಂದಿಗೆ ನಿಮ್ಮ ಪ್ರಯಾಣವನ್ನು ಆರಂಭಿಸುತ್ತಿದ್ದೇವೆ..ಬನ್ನಿ ಹೊರಡೋಣ…
1.ಲಡಾಖಿ
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖಿ ಸಮುದಾಯದ ಹೆಣ್ಣು.
2.ಬೊಂಡ
ಒರಿಸ್ಸಾದ ಗುಡ್ಡ ಪ್ರದೇಶವಾದ ಮಾಲ್ಕಾನ್ಗಿರಿಗೆ ಸಂಬಂಧಿಸಿದ ಒಂದು ಜನಾಂಗ
3.ರಾಬರಿ
ಸುಂದರಿ ಕಸೂತಿ(embroidery) ಕೆಲಸ ಮಾಡುತ್ತಿರುವ ವಾಯವ್ಯ ಭಾರತೀಯ ಜನಾಂಗದ ಹೆಣ್ಣು.
4.ದ್ರೋಕ್ಪ
ನಿತ್ಯ ವಿವಾದಕ್ಕೆ ಕಾರಣವಾಗುತ್ತಿರುವ ಭಾರತ ಹಾಗೂ ಪಾಕಿಸ್ಥಾನದ ನಡುವಿನ ಪ್ರದೇಶವಾಗಿರುವ ಲಡಾಖ್ ನ 3 ಹಳ್ಳಿಗಳಲ್ಲಿ ವಾಸವಾಗಿರೋ ಈ ಜನಾಂಗವೇ ದ್ರೋಕ್ಪ.
5.ಬಂಜಾರ
ಭಾರತದ ಪಶ್ಚಿಮ ದಿಕ್ಕಿನಲ್ಲಿ ವಾಸವಾಗಿರೊ ಇವರುಗಳು ವಲಸೆ ಹೋಗುವ ಜನಾಂಗಕ್ಕೆ ಸೇರಿದವರಾಗಿದ್ದಾರೆ.ಇಲ್ಲಿರುವ ಭಾವ ಚಿತ್ರವು ಬಂಜಾರ ಹೆಣ್ಣಿನ ಉಡುಗೆಯನ್ನು ಪರಿಚಯಿಸುತ್ತದೆ.
6.ಗದಬ
ಆಂಧ್ರ ಪ್ರದೇಶದಲ್ಲಿರುವ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಒಡವೆಗಳನ್ನು ತೊಟ್ಟಿರುವ ಹೆಣ್ಣು.
7.ಇಮ್ಚುಂಗರ್ ನಾಗ
ನಾಗಾಲ್ಯಾಂಡ್ ಗೆ ಸೇರಿದ ಸಣ್ಣ ನಾಗ ಬುಡಕಟ್ಟು ಜನಾಂಗ.
8.ಧನೇತ ಜಾತ್
ಗುಜರಾತ್ ಹಾಗೂ ಕಚ್ ಪ್ರದೇಶದಲ್ಲಿ ವಾಸವಾಗಿರೋ ಒಂದು ಜನಾಂಗ ಜಾತ್. ಜಾತ್ ಹೆಣ್ಣು ತುಂಬಾ ದೊಡ್ದನೆಯ ಮೂಗಿನ ಒಡವೆಯನ್ನು ಧರಿಸಿರೋದನ್ನು ನೀವಿಲ್ಲಿ ನೋಡಬಹುದು.
9.ಛಡ್ವಾರ
ಗುಜರಾತ್ ನ ಛಡ್ವಾರ ಕ್ಕೆ ಸೇರಿರೋ ಹೊಸದಾಗಿ ಮದುವೆಯಾಗಿರೋ ಹೆಣ್ಣು ತನ್ನ ಸಾಂಪ್ರದಾಯಿಕ ಉಡುಗೆಯೊಂದಿಗೆ
10.ಧುರುಬ
ಒರಿಸ್ಸಾದ ಜನಾಂಗಕ್ಕೆ ಸೇರಿದ ಒಂದು ಯುವತಿ.
11.ಮೇಘ್ವಾಲ್
ಗುಜರಾತ್ ನ ಪಶ್ಚಿಮದ ಕೆಲವು ಭಾಗಗಳಲ್ಲಿ,ಮಾರ್ವರ್ ಹಾಗೂ ರಾಜಸ್ಥಾನ ದಲ್ಲಿ ವಾಸವಾಗಿರೋ ಜನಾಂಗವೇ ಈ ಮೇಘ್ವಾಲ್.ಇವರುಗಳ ಮುಖ್ಯ ಕಸುಬು ನೇಯ್ಗೆ ಯಾಗಿದ್ದು ಇವರುಗಳು ತೊಟ್ಟಿರೊ ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿರುವ ಉಡುಗೆಗಳೇ ಇದಕ್ಕೆ ಸಾಕ್ಷಿಯಾಗಿದೆ.
12.ದಿಮಾಸ
ಅಸ್ಸಾಂನಲ್ಲಿರುವ ಹಲವು ಬುಡಕಟ್ಟು ಜನಾಂಗಗಳಲ್ಲೊಂದಾಗಿರೊ ಈ ಜನಾಂಗವು ಜಟಿಂಗ ಹಬ್ಬವನ್ನಾಚರಿಸುತ್ತಿರುವ ದೃಶ್ಯ ಹಾಗೂ ಅವರು ತೊಟ್ಟಿರೋ ಉಡುಗೆಗಳ ಒಂದು ಚಿತ್ರಣ.
13.ಡೋಂಗ್ರಿಯ ಕೊಂಡ್
ಒರಿಸ್ಸಾದ ನಿಯಮ್ಗಿರಿ ಬೆಟ್ಟ ಪ್ರದೇಶದಲ್ಲಿ ವಾಸವಾಗಿರೋ ಜನಾಂಗ ಇದಾಗಿದೆ.
14.ಬೈಗ
ಮಧ್ಯ ಪ್ರದೇಶದಲ್ಲಿರುವ ಮಾಂಡ್ಲ ಹಾಗೂ ಬಾಲಘಾಟ್ ಜಿಲ್ಲೆಯಲ್ಲಿ ಮುಖ್ಯವಾಗಿ ವಾಸವಾಗಿರೋ ಈ ಬೈಗ ಜನಾಂಗಕ್ಕೆ ಸೇರಿರೋ ಈ ಜನ ನೋಡಲು ಸುಂದರವಾಗಿರುತ್ತಾರೆ.
15.ಗಡ್ದಿ
ಜಮ್ಮು ಕಾಶ್ಮೀರದ ಗುಡ್ಡಗಾಡಿನ ಬೇರೆ ಬೇರೆ ಪ್ರದೇಶದಲ್ಲಿ ವಾಸವಾಗಿರೋ ಜನಾಂಗ.
16.ಜೈಂತಿಯ/ಪ್ನಾರ್
ಮೆಘಾಲಯದ ಜೈಂತಿಯ ಬೆಟ್ಟ ಪ್ರದೇಶಕ್ಕೆ ಸೇರಿರೋ ಒಂದು ಜನಾಂಗ.
17.ಕೋಯ
ಫಸಲಿನ ಕೊಯ್ಲು ಸಂದರ್ಭದಲ್ಲಿ ಡ್ರಮ್ ಬಾರಿಸುತ್ತಿರೋ ಒರಿಸ್ಸಾದ ಕೋಯ ಜನಾಂಗಕ್ಕೆ ಸೇರಿದ ಮಂದಿ.
18.ಸಂಗ್ತಮ್ ನಾಗ
ನಾಗಾಲ್ಯಾಂಡ್ ನ ತ್ಯುನ್ಸಾಂಗ್ ಹಾಗೂ ಕಿಫೈರ್ ಜಿಲ್ಲೆಯಲ್ಲಿ ವಾಸವಾಗಿರೋ ಜನಾಂಗ.ಹೊರ್ನ್ ಬಿಲ್ಲ್ ಹಬ್ಬದ ಸಂಬ್ರಮದಲ್ಲಿರೊ ಮಹಿಳೆಯರು ಅಲ್ಲಿನ ಸಾಂಪ್ರದಾಯಿಕ ಉಡುಗೆಯಲ್ಲಿ.
19.ಗರೊ
ಖಾಸಿ ಜನಾಂಗದ ನಂತರ ಮೇಘಾಲಯದಲ್ಲಿ ವಾಸವಾಗಿರೊ 2 ನೇಯ ಅತೀ ದೊಡ್ದ ಬುಡಕಟ್ಟು ಜನಾಂಗ.
20.ಬೋಡೋ
ಹಿಂದಿನಿಂದಲೇ ಅಸ್ಸಾಂ ನಲ್ಲಿ ಅನೇಕ ವರ್ಷಗಳಿಂದ ವಾಸವಾಗಿರೊ ಜನಾಂಗ ಇದಾಗಿದ್ದು ಅಸ್ಸಾಂನಲ್ಲೇ ಅತ್ಯಂತ ಹಿರಿದಾದ ಬುಡಕಟ್ಟು ಪಂಗಡವಾಗಿದೆ.
21.ಲಿಂಬು
ನೇಪಾಳ್ ನ ಪ್ರಮುಖ ಬುಡಕಟ್ಟು ಜನಾಂಗವಾಗಿದ್ದರೂ ಇವರುಗಳು ಭಾರತದ ಸಿಕ್ಕಿಂ ಪ್ರದೇಶಗಳಲ್ಲಿ ಕಾಣಸಿಗುತ್ತಾರೆ.
22.ಖಾಸಿ
ಮೆಘಾಲಯದಲ್ಲೇ ಹುಟ್ಟಿರೋ ಜನಾಂಗವೆ ಖಾಸಿ.
23.ಭಿಲ್
ಇವರುಗಳು ಆದಿವಾಸಿಗಳಾಗಿದ್ದು ಭಾರತದ ಮಧ್ಯ ಭಾಗ ಹಾಗೂ ಪಶ್ಚಿಮ ಭಾಗಗಳಲ್ಲಿ ಕಾಣ ಸಿಗೋ ಜನಾಂಗ ವಾಗಿದೆ.
24.ಗೊಂಡ್
ಮಧ್ಯ ಪ್ರದೇಶ,ಮಹಾರಾಷ್ಟ್ರ,ಚತ್ತೀಸ್ಗಡ್,ಆಂಧ್ರಪ್ರದೇಶ ಹಾಗೂ ಒರಿಸ್ಸಾಗಳಲ್ಲಿ ಕಾಣಸಿಗೋ ಜನಾಂಗ ಇವರದ್ದಾಗಿದೆ.
25.ಒರಾನ್
ಒರಾನ್ ಅಥವಾ ಕುರುಖ ಜನಾಂಗವು ಭಾರತದ ಪೂರ್ವ ಹಾಗೂ ಮಧ್ಯ ಭಾಗದಲ್ಲಿ ಕಾಣ ಸಿಗುತ್ತಾರೆ.
- ಸ್ವರ್ಣಲತ ಭಟ್
POPULAR STORIES :
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
26 ವರ್ಷದ ಮಾಡೆಲಿಂಗ್ ಹುಡುಗಿ 62 ವರ್ಷದ ತಾತನನ್ನೇ ಯಾಕೆ ಮದುವೆಯಾದ್ಲು?
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?