ಹೆಂಗಸರು ತಮ್ಮ ಕಾಲಿನ ಸೌಂದರ್ಯಕ್ಕಾಗಿ ಅನೇಕ ರೀತಿಯ ಹೈಹೀಲ್ಸ್ ಚಪ್ಪಲ್ ಗಳ ಮೊರೆ ಹೋಗುತ್ತಾರೆ. ಹೈಹೀಲ್ಸ್ ಧರಿಸುವುದು ಸುರಕ್ಷಿತವಲ್ಲ ಅಂತ ಯಾರೂ ಇದುವರೆಗೂ ಹೇಳಿರಲಾರರು. ಹಲವು ವಿಶೇಷ ಸಂದರ್ಭಗಳಿಂದ ಆರಂಭಿಸಿದರೆ ಪಾರ್ಟಿ,ಡಿನ್ನರ್,ಹಲವು ತರನಾದ ನೃತ್ಯಗಳಲ್ಲಿ ಮತ್ತು ದೈನಂದಿನ ಉದ್ಯೋಗಕ್ಕೆ ಹೋಗೋ ಮಹಿಳೆಯರೂ ಈ ಹೈ ಹೀಲ್ಸ್ ನ್ನೇ ತನ್ನ ಸೌಂದರ್ಯವನ್ನು ಇಮ್ಮಡಿಸುವ ಒಂದು ಸಾಧನವೆಂದು ಪರಿಗಣಿಸಿದ್ದಾರೆ. ಹೈಹೀಲ್ಸ್ ನಿಂದ ನೀವು ಸುಂದರವಾಗೇನೋ ಕಾಣಬಹುದು ಆದರೆ ದುಡ್ಡು ಕೊಟ್ಟು ಕೊಳ್ಳೋ ಈ ಸಾಧನಕ್ಕೆ ನೀವು ಯಾವ ತರನಾದ ಬೆಲೆ ಕೊಡಬೇಕಾಗಬಹುದು ಎಂಬುದು ನಿಮಗೆ ಗೊತ್ತೇ?
ನೀವು ಬೆನ್ನೆಲುಬು,ಸೊಂಟ,ಕಾಲಿನ ಗಂಟುಗಳು,ಮೊಣ ಕಾಲು,ಪಾದ ಹಾಗೂ ಹಿಮ್ಮಡಿಗಳ ನಿರಂತರ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.ಈ ನಿಟ್ಟಿನಲ್ಲಿ ತಜ್ನರ ಅಭಿಪ್ರಾಯಗಳನ್ನು ನಿಮಗೆ ತಿಳಿಸುವ ಒಂದು ಸಣ್ಣ ಪ್ರಯತ್ನದತ್ತ ನಾವು….
ಹೈ ಹೀಲ್ಸ್ ಹೇಗೆ ನಿಮ್ಮ ಶರೀರಕ್ಕೆ ಹಾನಿ ಮಾಡುತ್ತದೆ ಎಂದು ಗೊತ್ತಾ??
ಸಾಮಾನ್ಯವಾಗಿ ನಾವು ನಡೆಯುವಾಗ, ನಿಂತಾಗ, ಬಗ್ಗಿದಾಗಲೆಲ್ಲಾ ನಮ್ಮ ದೇಹದ ಭಾರವು ಹೆಚ್ಚಾಗಿ ನಮ್ಮ ಕಾಲು ಗಳ ಮೇಲೆ ಬೀಳಲಾರಂಭಿಸುತ್ತದೆ. ಹೈ ಹೀಲ್ಸ್ ಧರಿಸಿದಾಗ ನಮ್ಮ ಕಾಲುಗಳು ನಡೆಯಲು ಹೆಚ್ಚಿನ ಪ್ರಯಾಸಪಡುತ್ತವೆ. ಕಾಲುಗಳು ನಮ್ಮ ಶರೀರದ ಸಮತೋಲನವನ್ನು ಕಾಪಾಡಲು ಶ್ರಮಪಡುತ್ತಿದ್ದಂತೆ, ನಮ್ಮ ಸೊಂಟ, ಬೆನ್ನು, ಕಾಲಿನ ಗಂಟುಗಳು ಮತ್ತು ಮೊಣಕಾಲಸ್ನಾಯು(calf muscle)ಗಳ ಸಮತೋಲನ ತಪ್ಪುತ್ತದೆ. ಇದರಿಂದಾಗಿ ದಿನ ಮುಕ್ತಾಯವಾಗುತ್ತಿದ್ದಂತೆ, ಸ್ನಾಯು ಸೆಳೆತ ಹಾಗೂ ಸುಸ್ತು ಶುರುವಾಗುತ್ತದೆ. ಹೆಚ್ಚಾಗಿ ಹೈ ಹೀಲ್ಸ್ ಬಳಸುವವರಲ್ಲಿ ಮೊಣಕಾಲ ಸ್ನಾಯುಗಳ ಸೆಳೆತ ಹಾಗೂ ಹಿಗ್ಗುವಿಕೆ ಉಂಟಾಗುತ್ತದೆ. ಮೊಣಕಾಲ ಸ್ನಾಯುವನ್ನು ಕಾಲ್ಫ್ ಅಥವಾ ಗ್ಯಾಸ್ಟ್ರೋಸ್ನೇಮಿಯಸ್(gastrocnemius)ಸ್ನಾಯುಗಳು ಅಂತಲೂ ಹೇಳಲಾಗುತ್ತದೆ. ಇವುಗಳು ನಮ್ಮ ಕಾಲಿನ ಗಂಟಿನ ಹಿಂದೆ ಸ್ವಲ್ಪ ಕೆಳಭಾಗದಲ್ಲಿರುವ 2 ದೊಡ್ಡ ಸ್ನಾಯುಗಳಾಗಿದ್ದು, ಇವುಗಳು ಸಂಕುಚಿತಗೊಂಡಾಗ ಕಾಲು ಹಾಗೂ ಪಾದ ಗಳಿಂದ ರಕ್ತವನ್ನು ಉಚ್ಚಧಮನಿಗೆ ಪ್ರವಹಿಸುತ್ತಾ ಅಲ್ಲಿಂದ ಹೃದಯಕ್ಕೆ ತಲಪುವಂತೆ ಮಾಡುತ್ತದೆ. ಅದಕ್ಕಾಗಿ ಇದನ್ನು ಬಾಹ್ಯ ಅಥವಾ 2 ನೇ ಹೃದಯ ಅಂತಲೂ ಕರೆಯಲಾಗುತ್ತದೆ.
ಇಲ್ಲಿ ನೋವಿನ ಅನುಭವ ಆದ್ರೆ ಮುಗೀತು, ಪರಿಣಾಮ ಗಂಭೀರ.ಇಲ್ಲಿರೋ ತಜ್ನರ ವರದಿಯನ್ನು ಗಮನಿಸಿ.
ಚಿತ್ರದಲ್ಲಿ ದೇಹದ ಸಂಪೂರ್ಣ ಒತ್ತಡವು ನಮ್ಮ ಕಾಲಿನ ಗಂಟಿನ ಮೇಲೆ ಬಿದ್ದಿರುವುದನ್ನು ನೋಡಬಹುದು
ಹೈ ಹೀಲ್ಸ್ ಉಪಯೋಗಿಸುವುದಕ್ಕೆ ಮುನ್ನ ಹಾಗೂ ಆಮೇಲೆ ಕಾಲುಗಳ ಸ್ನಾಯುಗಳನ್ನು ಸ್ಟ್ರೆಚ್ ಮಾಡುತ್ತಿರಬೇಕು,ಹೈ ಹೀಲ್ಸ್ ನ ಎತ್ತರದ ಮಿತಿ ಗರಿಷ್ಟ 2 ಇಂಚ್ ಗೆ ಒಳಪಟ್ಟಿರಬೇಕು, ಮಧ್ಯಾಹ್ನದ ಸಮಯದಲ್ಲಿ ಕಾಲಿನ ಸ್ನಾಯುಗಳು ವಿಕಸನಗೊಂಡಿರುತ್ತವೆ, ಅಂತಹ ಸಮಯದಲ್ಲಿ ಹೈಹೀಲ್ಸ್ ಶೂಸ್ ಖರೀದಿಸಿ, ಉದ್ದನೆಯ ತುದಿಗಳುಳ್ಳ ಶೂಸ್ ನ್ನು ಖರೀದಿಸಬೇಡಿ, ಪ್ರತಿ ನಿತ್ಯ ನಿಮ್ಮ ಚಪ್ಪಲ್ಗಳನ್ನು ಬದಲಿಸುತ್ತಿರಿ, ಹೆಚ್ಚು ಅವಧಿಯವರೆಗೆ ಹೀಲ್ಸ್ ನ್ನು ಉಪಯೋಗಿಸಬೇಡಿ..ಇವಿಷ್ಟನ್ನು ಮಾಡಿದಲ್ಲಿ ನೀವು ತಾತ್ಕಾಲಿಕವಾಗಿ ಹೈ ಹೀಲ್ಸ್ ನ ತೊಂದರೆಯಿಂದ ಪಾರಾಗಬಹುದು.
ನಿಜ! ಹೈಹೀಲ್ಸ್ ಗಳಿಂದಾಗೋ ದೋಷಗಳನ್ನು ಸಂಪೂರ್ಣವಾಗಿ ನಿವಾರಿಸುವುದು ಅಸಾಧ್ಯ, ಆದರೆ ಅವುಗಳ ನಿರಂತರ ಬಳಕೆಯನ್ನು ನಾವು ತಪ್ಪಿಸಿದಲ್ಲಿ ಇಂತಹ ಅಪಾಯಗಳಿಂದ ಸಣ್ಣ ಮಟ್ಟಿಗಾದ್ರೂ ಪಾರಾಗಲು ಖಂಡಿತ ಸಾಧ್ಯ.
- ಸ್ವರ್ಣಲತ ಭಟ್
POPULAR STORIES :
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
26 ವರ್ಷದ ಮಾಡೆಲಿಂಗ್ ಹುಡುಗಿ 62 ವರ್ಷದ ತಾತನನ್ನೇ ಯಾಕೆ ಮದುವೆಯಾದ್ಲು?
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?