ಶನಿವಾರದಿಂದ ಆರಂಭಗೊಂಡು ಸೆಪ್ಟೆಂಬರ್ 13ರವರೆಗೂ ಬೆಸ್ಕಾಂ ನೆಲದಡಿ ಕೇಬಲ್ ಕಾಮಗಾರಿ ಕೈಗೊಂಡಿರುವುದರಿಂದ ಬೆಂಗಳೂರಿನ ಕೆಲವೆಡೆ ವಿದ್ಯುತ್ ವ್ಯತ್ಯಯವಾಗುವುದಾಗಿ ತಿಳಿಸಿದೆ.
ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದಾಗಿ ತಿಳಿಸಿದೆ. ಬೆಳಿಗ್ಗೆ 10ರಿಂದ ಸಂಜೆ 5ರ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬಾಪೂಜಿನಗರ, ಪಂತರಪಾಳ್ಯ, ಇಂಡಸ್ಟ್ರಿಯಲ್ ಟೌನ್, ಸಿದ್ದಿವಿನಾಯಕ ಲೇಔಟ್, ಐಟಿಐ ಲೇಔಟ್, ಕಾಮಾಕ್ಷಿಪಾಳ್ಯ ಕೈಗಾರಿಕಾ ಪ್ರದೇಶ, ಕೆಎಸ್‌ಜಿ ಎಸ್ಟೇಟ್, ಪೇಟೆ ಚೆನ್ನಪ್ಪ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವುದಾಗಿ ತಿಳಿದುಬಂದಿದೆ.
ಬ್ಯಾಡರಹಳ್ಳಿ, ಅಂಜನಾ ನಗರ, ಬಿಇಎಲ್ ಲೇಔಟ್, ಗಿಡದಕೋನೇನಹಳ್ಳಿ, ಮುದ್ದಿನಪಾಳ್ಯ, ಬಿಡಿಎ 8 ಹಾಗೂ 9ನೇ ಹಂತ, ರೈಲ್ವೆ ಲೇಔಟ್, ಉಪಕಾರ್ ಲೇಔಟ್, ಗೊಲ್ಲರಹಟ್ಟಿ, ಮಾಡರ್ನ್ ಲೇಔಟ್, ಕೆಬ್ಬೆಹಳ್ಳ, ಶ್ರೀನಿವಾಸನಗರ, ಹೆಗ್ಗನಹಳ್ಳಿ ಮುಖ್ಯ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುವುದು.
ವಸಂತ ವಲ್ಲಭ ನಗರ, ಶಾರದ ನಗರ, ಮಾರುತಿ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಜರಗನಹಳ್ಳಿ, ಎಂಎಸ್ ಲೇಔಟ್, ರಾಜಮ್ಮ ಗಾರ್ಡೆನ್, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಜೆಪಿ ನಗರ 2ನೇ ಹಂತ, ಕತ್ತರಿಗುಪ್ಪೆ, ಬನಶಂಕರಿ ಮೂರನೇ ಹಂತ.
ಲಾಲ್‌ಬಾಗ್ ರಸ್ತೆ, ಬಚ್ಚೇಗೌಡ್ ಕಾಂಪೌಂಡ್, ನಂದಿನಿ ಅಪಾರ್ಟ್‌ಮೆಂಟ್,ಲಕ್ಷ್ಮಿ ರಸ್ತೆ, ಕುಮಾರಸ್ವಾಮಿ ನಗರ, ವಿಠ್ಠಲ್ ನಗರ, ತ್ಯಾಗರಾಜನಗರ, ಬಿಬಿಎಂಪಿ ಸ್ವಿಮ್ಮಿಂಗ್ ಪೂಲ್, ಜೆಸಿ ರಸ್ತೆ, ಕುವೆಂಪು ನಗರ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುವುದು ಎಂದು ಬೆಸ್ಕಾಂ ಮಾಹಿತಿ ನೀಡಿದೆ.