ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಆಟಗಾರ ಕೃಷ್ಣಪ್ಪ ಗೌತಮ್ ಇತ್ತೀಚೆಗಷ್ಟೇ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕುಟುಂಬಕ್ಕೆ ನೂತನ ಸದಸ್ಯನ ಆಗಮನವಾಗುತ್ತಿರುವುದರ ಕುರಿತು ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಹೌದು, ಕ್ರಿಕೆಟಿಗ ಕೃಷ್ಣಪ್ಪ ಗೌತಮ್ ಮತ್ತು ಅವರ ಪತ್ನಿ ಅರ್ಚನಾ ಸುಂದರ್ ತಂದೆ ತಾಯಿ ಆಗುತ್ತಿರುವ ಖುಷಿಯ ವಿಚಾರವನ್ನು ಕೃಷ್ಣಪ್ಪ ಗೌತಮ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಂದಷ್ಟು ಫೋಟೋಗಳನ್ನು ಅಪ್ ಲೋಡ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿಯನ್ನು ಧರಿಸಿ ಕೃಷ್ಣಪ್ಪ ಗೌತಮ್ ಮತ್ತು ಅರ್ಚನಾ ಸುಂದರ್ ಫೋಟೋಗೆ ಪೋಸ್ ನೀಡಿದ್ದಾರೆ.
ಹೀಗೆ ಖುಷಿಯ ವಿಚಾರವನ್ನು ಹಂಚಿಕೊಳ್ಳುತ್ತಾ ಫೋಟೋಗಳನ್ನು ಅಪ್ಲೋಡ್ ಮಾಡಿರುವ ಕೃಷ್ಣಪ್ಪ ಗೌತಮ್ ತಮ್ಮ ಕುಟುಂಬಕ್ಕೆ ನೂತನ ಸದಸ್ಯರ ಆಗಮನವಾಗುತ್ತಿದ್ದು 2022ರ ಜನವರಿ ವೇಳೆಗೆ ತಮ್ಮ ಮಗುವಿನ ಆಗಮನವಾಗಲಿದೆ ಎಂಬ ವಿಚಾರವನ್ನು ಕೂಡ ಬರೆದುಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೆ ಶ್ರೀಲಂಕಾ ವಿರುದ್ಧ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೃಷ್ಣಪ್ಪ ಗೌತಮ್ ಕೇವಲ ಒಂದೇ ಒಂದು ವಿಕೆಟ್‌ನ್ನು ಪಡೆದಿದ್ದರು.