No menu items!
11.1 C
Munich
Wednesday, April 29, 2026

ಶಬರಿಮಲೆ ದೇವಸ್ಥಾನ ಮತ್ತೆ ಓಪನ್

Must read

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಬಾಗಿಲು ತೆರೆದಿದ್ದು, ಮತ್ತೊಮ್ಮೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಯ್ಯಪ್ಪ ದೇಗುಲದ ವಾರ್ಷಿಕ ಪಂಚಾಂಗದ ರೀತ್ಯ ಕನ್ನಿ ಮಾಸದ ಪೂಜೆಗಾಗಿ ಭಕ್ತರು ದೇಗುಲಕ್ಕೆ ತೆರಳಬಹುದಾಗಿದೆ. ಕೋವಿಡ್ 19 ಮಾರ್ಗಸೂಚಿ, ನಿಯಮಗಳು ಎಂದಿನಂತೆ ಜಾರಿಯಲ್ಲಿರಲಿವೆ. ಕೊರೊನಾ ಲಸಿಕೆ ಪ್ರಮಾಣ ಪತ್ರ ಕಡ್ಡಾಯವಾಗಿದ್ದು, ಇಲ್ಲದಿದ್ದರೆ ಪ್ರವೇಶ ಸಿಗುವುದಿಲ್ಲ ಎಂದು ನಿಯಮವಿದೆ.

ಈ ಬಾರಿ ಕೇವಲ 15,000 ಮಂದಿ ಭಕ್ತರಿಗೆ ಮಾತ್ರ ದೇಗುಲಕ್ಕೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 21ರ ತನಕ ಭಕ್ತರಿಗೆ ದೇಗುಲ ಮುಕ್ತವಾಗಿರುತ್ತದೆ. ಶಬರಿಮಲೆಗೆ ತೆರಳಲು ಬಯಸುವ ಭಕ್ತರು ಮುಂಚಿತವಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು, ಪ್ರವೇಶ ಖಾತ್ರಿಪಡಿಸಿಕೊಳ್ಳಬೇಕು. 48 ಗಂಟೆಗಳ ಮುಂಚಿನ ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ ಹೊಂದಿರಬೇಕು. 2020ರ ಅಕ್ಟೋಬರ್ 16ರಂದು ಕಠಿಣ ನಿಯಮಗಳೊಂದಿಗೆ ಶಬರಿಮಲೆ ದೇಗುಲಕ್ಕೆ ಪ್ರವೇಶಕ್ಕೆ ಅನುಮತಿ ಕಲ್ಪಿಸಲಾಗಿತ್ತು. ಕೇರಳದಲ್ಲಿ ಸದ್ಯ 1.99 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ದೇಶದ ಒಟ್ಟಾರೆ ಕೋವಿಡ್ ಪ್ರಕರಣಗಳ ಪೈಕಿ ಶೇ 68ರಷ್ಟು ಕೇರಳದಲ್ಲೇ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಗುರುವಾರದಂದು ಮಾಹಿತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಹಿಂದೆ ಮಾಸಿಕ ಆಚರಣೆಗಳಿಗಾಗಿ ದೇವಾಲಯವನ್ನು ತಿಂಗಳ ಕೆಲ ನಿರ್ದಿಷ್ಟ ದಿನಗಳಲ್ಲಿ ತೆರೆದರೂ ಕೋವಿಡ್-19 ನಿರ್ಬಂಧಗಳಿಂದಾಗಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಆದರೆ, ಜುಲೈ ತಿಂಗಳಲ್ಲಿ ತಿಂಗಳ ಐದು ದಿನಗಳ ಪೂಜೆ ನೆರವೇರಿಸಲು ದೇವಾಲಯದ ಬಾಗಿಲು ತೆರೆಯಲಾಗಿದೆ. ಆನ್‌ಲೈನ್ ಸರದಿಯನ್ನು ಅನುಸರಿಸಿ ದರ್ಶನಕ್ಕೆ ಕೇವಲ 5,000 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article