ಸ್ಫೋಟದಲ್ಲಿ ದುರ್ಮರಣ ಹೊಂದಿದವರಿಗೆ ಜಮೀರ್ ಪರಿಹಾರ

Date:

ಮೂವರ ಜೀವ ಬಲಿ ಪಡೆದಿರುವ ಹೊಸ ತರಗುಪೇಟೆಯ ನಿಗೂಢ ಸ್ಫೋಟದ ಮೂಲ ಪತ್ತೆಗೆ ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಪೋಟದ ಮೂಲ ಪತ್ತೆಗೆ ಗುಪ್ತಚರ ಇಲಾಖೆ ಅಧಿಕಾರಿಗಳ ಆಗಮನವಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಪಟಾಕಿಯಿಂದಲೂ ಸ್ಫೋಟ ಸಂಭವಿಸಿಲ್ಲ. ಸಿಲಿಂಡರ್ ಸ್ಫೋಟವೂ ಅಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಲ್ಲ. ಯಾವ ಸ್ಫೋಟಕ ವಸ್ತುಗಳಿಂದಲೇ ಈ ಅವಘಡ ಸಂಭವಿಸಿರಬಹುದು ಎಂಬುದರ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ಸ್ಫೋಟಕಗಳಿಂದಲೇ ಈ ಅವಘಡ ಸಂಭವಿಸಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರು ತಿಳಿಸಿದ್ದಾರೆ.

 

ನಿಗೂಢ ಸ್ಫೋಟದ ಬಗ್ಗೆ ಮಾಹಿತಿ ಪಡೆಯಲು ಗುಪ್ತಚರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಂಪ್ರೆಸರ್ ಸ್ಫೋಟವೂ ಅಲ್ಲ, ಸಿಲಿಂಡರ್ ಸ್ಫೋಟವೂ ಅಲ್ಲ ಎಂಬುದು ಖಚಿತವಾಗುತ್ತಿದ್ದಂತೆ, ಇದರ ಮೂಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

 

ಟ್ರಾನ್ಸ್ ಪೋರ್ಟ್ ಗೋದಾಮಿನಲ್ಲಿದ್ದ ಮನೋಹರ್, ಪಂಚರ್ ಶಾಪ್ ಮಾಲೀಕ ಅಸ್ಲಾಂ ಪಾಷಾ ಹಾಗೂ ಫಯಸ್ ಎಂಬುವರು ಸಾವನ್ನಪ್ಪಿದ್ದು, ಮೃತರಿಗೆ ತಲಾ ಎರಡು ಸಾವಿರ ರೂ. ಪರಿಹಾರ ನೀಡುವುದಾಗಿ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಮೀರ್, ಮೃತರಿಗೆ ಪರಿಹಾರ ಜತೆಗೆ ಗಾಯಾಳುಗಳಿಗೆ ಚಿಕಿತ್ಸೆ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕು. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಜತೆಗೆ ಪರಿಹಾರ ಕೊಡಬೇಕು ಎಂದು ಶಾಸಕ ಜಮೀರ್ ಅಹಮದ್ ಖಾನ್ ಸರ್ಕಾರವನ್ನು ಒತ್ತಾಯಸಿದ್ದಾರೆ.

ಅತಿ ಅಪಾಯಕಾರಿ ಸ್ಫೋಟಕ ವಸ್ತು ಸ್ಫೋಟಿಸಿದಂತೆ ಕಾಣುತ್ತಿಲ್ಲ. ಕಡಿಮೆ ಅಪಾಯದ ಹೆಚ್ಚು ಪ್ರಮಾಣದ ಸ್ಪೋಟಕ ಸಂಭವಿಸಿರುವ ಸಾಧ್ಯತೆಯಿದೆ. ಬಾಂಬ್ ನಿಷ್ಕ್ರಿಯ ದಳ, ವಿಧಿ ವಿಜ್ಞಾನ ತಜ್ಞರು ಸ್ಪೋಟದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟಕ್ಕೆ ಮೂಲ ಕಾರಣವಾಗಿರುವ ಸ್ಫೋಟಕ ಪತ್ತೆ ಮಾಡಲಾಗುತ್ತಿದೆ ಎಂದು ಹೆಚ್ಚವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

 

ಮಧ್ಯಾಹ್ನ 12. 15 ರ ಸುಮಾರಿನಲ್ಲಿ ನೂ ತರಗು ಪೇಟೆಯಲ್ಲಿರುವ ಟ್ರಾನ್ಸ್ ಪೋರ್ಟ್ ಗೋಡನ್ ನಲ್ಲಿ ದೊಡ್ಡ ಸದ್ದು ಕೇಳಿ ಬಂಬಿದ್ದು, ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಮೂವರ ದೇಹಗಳು ಮೇಲಕ್ಕೆ ಹಾರಿವೆ. ಅಕ್ಕ ಪಕ್ಕದ ಮನೆಯ ಕಿಟಿಕಿ ಬಾಗಿಲು ಕೂಡ ಸಂಪೂರ್ಣ ಪುಡಿಯಾಗಿವೆ. ಆರಂಭದಲ್ಲಿ ಇದೊಂದು ಸಿಲಿಂಡರ್ ಸ್ಫೋಟ ಎಂದೇ ವಿಸಲಾಗಿತ್ತು, ಆನಂತರ ಪಟಾಕಿ ಗೋಡನ್ ಎಂದು ಹೇಳಲಾಗಿತ್ತು. ಆದರೆ, ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು, ಗ್ಯಾಸ್ ಸಿಲಿಂಡರ್ ಹಾಗೂ ಪಟಾಕಿ ಸ್ಫೋಟವನ್ನು ಅಲ್ಲಗಳೆದಿದ್ದರು. ಇದೀಗ ಸ್ಫೋಟದ ಮೂಲ ಪತ್ತೆ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಬಿ.ಜೆಡ್ ಜಮೀರ್ ಅಹಮದ್ ಖಾನ್ ಭೇಟ ನೀಡಿ ಪರಿಶೀಲನೆ ನಡೆಸಿದರು.

 

ನಿನ್ನೆಯಷ್ಟೇ ದೇವರಚಿಕ್ಕನಹಳ್ಳಿ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಸಂಭವಿಸಿದ ನಿಗೂಢ ಸ್ಪೋಟದಲ್ಲಿ ಮೂವರು ಸಾವನ್ನಪ್ಪಿರುವುದು ಬೆಂಗಳೂರಿನಲ್ಲಿ ಸಾವಿನ ವಘಡಗಳು ಸಂಭವಿಸುತ್ತಲೇ ಇವೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...