ಅಪ್ಪುನ ಇಷ್ಟ ಪಡುವವರು ಯಾರೂ ಏಕ್ ಲವ್ ಯಾ ನೋಡಲ್ಲ!

Date:

‘ಏಕ್ ಲವ್ ಯಾ’ ಇದೊಂದು ಪ್ರೇಮ್ ನಿರ್ದೇಶನದ ಚಿತ್ರ. ಈ ಹಿಂದೆ ಪ್ರೇಮ್ ನಿರ್ದೇಶಿಸುತ್ತಿದ್ದ ಚಿತ್ರಗಳು ಯಾವ ಮಟ್ಟಿಗೆ ಪ್ರಮೋಷನ್ ಪಡೆದುಕೊಳ್ಳುತ್ತಿದ್ದವೆಂದರೆ ಯಾವ ಟಿವಿ, ಇಂಟರ್ ನೆಟ್ ಇಲ್ಲದೆ ಇದ್ದರೂ ಸಹ ಕೇವಲ ಹಾಡುಗಳಿಂದಲೇ ಕರ್ನಾಟಕದಾದ್ಯಂತ ಹೈಪ್ ಹುಟ್ಟು ಹಾಕುತ್ತಿದ್ದವು. ಆದರೆ ಈ ಏಕ್ ಲವ್ ಯಾ ಚಿತ್ರ ಮಾತ್ರ ಅದಕ್ಕೆ ತದ್ವಿರುದ್ಧ. ಏಕೆಂದರೆ ಇಷ್ಟು ದಿನಗಳ ಕಾಲ ಹಾಡಿನ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದ ಪ್ರೇಮ್ ಈ ಚಿತ್ರದಲ್ಲಿ ಹಾಡಿನ ಮೂಲಕವೇ ಇಡೀ ರಾಜ್ಯದ ವೈರತ್ವವನ್ನು ತನ್ನ ಮೈಮೇಲೆಳೆದುಕೊಂಡಿದ್ದಾರೆ.

ಇಡೀ ನಾಡೇ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನೋವಿನಲ್ಲಿರುವ ನಮ್ಮ ಚಿತ್ರತಂಡದಿಂದ ಎಣ್ಣೆ ಸಾಂಗ್ ಮಾಡಿದ್ದೀವಿ ಎಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಹಾಡನ್ನು ಬಿಡುಗಡೆ ಮಾಡಲಾಯಿತು. ಇಲ್ಲಿಯೂ ಬುದ್ಧಿವಂತಿಕೆ ಮೆರೆದ ಚಿತ್ರತಂಡ ಕಾರ್ಯಕ್ರಮ ಆರಂಭವಾಗುವ ಮುನ್ನ ವೇದಿಕೆಯ ಮೇಲೆ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಇಟ್ಟು ನಮನವನ್ನು ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಿತು.

 

ಇನ್ನು ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಹಾಡಿಗೂ ಮುನ್ನ ಕೂಡ ಪುನೀತ್ ರಾಜ್ ಕುಮಾರ್ ಅವರ ಕುರಿತು ವಿಶೇಷವಾಗಿ ಪ್ರೇಮ್ ಅವರ ಧ್ವನಿಯಲ್ಲಿ ಕೆಲ ಸಾಲುಗಳನ್ನು ಹೇಳಿಸಲಾಗಿದೆ. ಹೀಗೆ ತಾವು ಹಾಡು ಬಿಡುಗಡೆ ಮಾಡುವ ಸಂಭ್ರಮದ ನಡುವೆಯೇ ಪುನೀತ್ ರಾಜಕುಮಾರ್ ಅವರಿಗೆ ನಮನವನ್ನು ಸಲ್ಲಿಸುವ ಕೆಲಸವನ್ನೂ ಏಕ್ ಲವ್ ಯಾ ಚಿತ್ರತಂಡ ಮಾಡಿದೆ. ಆದರೆ ಇದನ್ನೆಲ್ಲ ಮಾಡಿದ್ದು ಕೇವಲ ತೋರಿಕೆಗೋಸ್ಕರನಾ? ಎಂಬ ಪ್ರಶ್ನೆ ಇದೀಗ ಕರ್ನಾಟಕದಾದ್ಯಂತ ಇರುವ ಸಿನಿಪ್ರೇಕ್ಷಕರಲ್ಲಿ ಕಾಡುತ್ತಿದೆ.

 

 

ಇದಕ್ಕೆ ಕಾರಣ ಅಪ್ಪು ಫೋಟೋವನ್ನಿಟ್ಟು ಹಾಡು ಬಿಡುಗಡೆ ಮಾಡಿದ ವೇದಿಕೆಯ ಮೇಲೆಯೇ ಶಾಂಪೇನ್ ( ಮದ್ಯದ ಬಾಟಲ್ ) ಓಪನ್ ಮಾಡಿ ಚಿತ್ರತಂಡದವರು ಸಂಭ್ರಮಿಸಿದ್ದಾರೆ. ನಿರೂಪಕ ಅಕುಲ್ ಬಾಲಾಜಿ ಮೊದಲು ಶಾಂಪೇನ್ ಬಾಟಲಿ ಓಪನ್ ಮಾಡಿ ನಂತರ ವೇದಿಕೆಯ ಮೇಲಿದ್ದ ಕೆಲ ಹುಡುಗಿಯರು, ನಾಯಕಿ ರಚಿತಾ ರಾಮ್ ಮತ್ತು ರಕ್ಷಿತಾ ಪ್ರೇಮ್ ಅವರಿಗೂ ನೀಡಿದ್ದರು. ಹೀಗೆ ಅಗಲಿದ ಪ್ರೀತಿಯ ಅಪ್ಪು ಫೋಟೋವನ್ನು ವೇದಿಕೆಯ ಮೇಲಿಟ್ಟು ಅದರ ಮುಂದೆಯೇ ಈ ಚಿತ್ರ ತಂಡದವರು ಎಣ್ಣೆ ಪಾರ್ಟಿ ಮಾಡಿದ್ದರು.

 

ಈ ದೃಶ್ಯವನ್ನು ನೋಡಿದ ಇಡೀ ಕರ್ನಾಟಕದ ಜನತೆ ಇದು ಪುನೀತ್ ರಾಜ್ ಕುಮಾರ್ ಅವರಿಗೆ ಏಕ್ ಲವ್ ಯಾ ಚಿತ್ರತಂಡ ಮಾಡಿರುವ ಅಪಮಾನ ನಾವು ಯಾವುದೇ ಕಾರಣಕ್ಕೂ ಈ ಚಿತ್ರವನ್ನು ನೋಡುವುದಿಲ್ಲ ಮತ್ತು ನಮ್ಮ ಕುಟುಂಬದಲ್ಲಿಯೂ ಯಾರಿಗೂ ನೋಡಲು ಬಿಡುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ.

ಅಷ್ಟೇ ಅಲ್ಲದೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೂ ಕಾಮೆಂಟ್ ಮಾಡುತ್ತಿರುವ ವೀಕ್ಷಕರು ಪುನೀತ್ ರಾಜ್ ಕುಮಾರ್ ಅವರನ್ನು ಇಷ್ಟಪಡುವವರು ಈ ಚಿತ್ರವನ್ನು ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನಗಳಿಂದ ಏಕ್ ಲವ್ ಯಾ ಚಿತ್ರತಂಡ ಹುಟ್ಟು ಹಾಕಿಕೊಂಡು ಬಂದಿದ್ದ ನಿರೀಕ್ಷೆ ಮಾಡಿದ ಈ ಒಂಫು ಪಾಪದ ಕೆಲಸದಿಂದ ನೆಲಕಚ್ಚಿದೆ.

 

ಓರ್ವ ದೊಡ್ಡ ನಟನಿಗೆ ವೇದಿಕೆಯ ಮೇಲೆ ನಮನವನ್ನು ಸಲ್ಲಿಸಿ ಅದೇ ವೇದಿಕೆಯ ಮೇಲೆ ಮದ್ಯದ ಬಾಟಲ್ ಓಪನ್ ಮಾಡುವಷ್ಟು ಬೇಜವಾಬ್ದಾರಿತನವನ್ನು ಚಿತ್ರತಂಡ ತೋರಿಸಬಾರದಿತ್ತು. ಮೊದಲಿಗೆ ನಮನವನ್ನು ಸಲ್ಲಿಸಿ ನಂತರ ಅದೇ ವೇದಿಕೆಯ ಮೇಲೆ ಮದ್ಯದ ಬಾಟಲ್ ಓಪನ್ ಮಾಡಿದರೆ ಜನರು ಅದು ಗೊತ್ತಿಲ್ಲದೆ ತಪ್ಪು ಎಂದು ಹೊಟ್ಟೆಗೆ ಹಾಕಿಕೊಳ್ಳುವಷ್ಟು ದಡ್ಡರೇನಲ್ಲ ಬಿಡಿ ಎಂದು ನೆಟ್ಟಿಗರು ಚಿತ್ರತಂಡದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಆ ವಿಜಯ್ ಮಲ್ಯನೇ ನೋಡಬೇಕು ಅಷ್ಟೇ…

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...