ದೆಹಲಿ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ದೆಹಲಿಯನ್ನು ಒಂದು ಭಿಕ್ಷುಕ ಮುಕ್ತ ಸಿಟಿಯನ್ನಾಗಿ ಪರಿವರ್ತಿಸುವ ಯೋಜನೆಯತ್ತ ದೆಹಲಿ ಸರಕಾರ ಮುನ್ನುಗ್ಗುತ್ತಿದೆ.ಇದಕ್ಕೆ ಸಂಬಂಧಿಸಿದಂತೆ ಪೂರ್ವ ತಯಾರಿಗಳು ಭರದಿಂದ ಸಾಗುತ್ತಿವೆ.ಬಹುಶಃ ಈ ಜುಲೈ ತಿಂಗಳಾಂತ್ಯದೊಳಗೆ ಭಿಕ್ಷುಕರಿಗೆ ಆಶ್ರಯ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು.ಸರಕಾರದ ಒಬ್ಬ ಹಿರಿಯ ಅಧಿಕಾರಿಯ ಪ್ರಕಾರ ಈ ಕಾರ್ಯಕ್ರಮದ ಉದ್ದೇಶವೇನೆಂದರೆ,ರಾಜಧಾನಿ ದೆಹಲಿಯ ಅನೇಕ ಪ್ರವಾಸೀ ತಾಣಗಳಲ್ಲಿ ಪ್ರವಾಸಿಗರಿಗೆ ಭಿಕ್ಷೆಗಾಗಿ ಕಾಟ ಕೊಡುವ ಭಿಕ್ಷುಕರನ್ನು ಸ್ಥಳಾಂತರಿಸಿ,ದೆಹಲಿಯನ್ನು ಸುಂದರ ಪ್ರವಾಸಿ ತಾಣವನ್ನಾಗಿಸುವುದಾಗಿದೆ.
ಮೊದಲ ಹಂತದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾದ ಸಂದೀಪ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಈ ರೀತಿಯಾಗಿ ಹೇಳಿದರು.“ಈ ಯೋಜನೆಯ ಅಂಗವಾಗಿ ದೆಹಲಿ ಪೋಲಿಸ್ ಇಲಾಖೆಯ ಜೊತೆಗೆ ಉಳಿದ 7 ತಂಡಗಳನ್ನು ನೇಮಿಸಲಾಗಿದ್ದು,ಇವರುಗಳು ಭಿಕ್ಷುಕರಿಗೆ ಆಶ್ರಯ ಕೊಡುವತ್ತ ಗಮನ ಹರಿಸುತ್ತಿದ್ದಾರೆ,ಹಾಗೂ ಈ ಕಾರ್ಯಕ್ರಮಗಳನ್ನು ವೀಡಿಯೋ ಮಾಡಲಾಗಿದ್ದು,ಸಂದರ್ಭ ಬಂದಲ್ಲಿ ಇದು ಮೊಬೈಲ್ ಟ್ರಯಲ್ ಕೋರ್ಟ್ ನಲ್ಲಿ ಒಂದು ಸಾಕ್ಷಿಯಾಗಿ ಪರಿಣಮಿಸಬಹುದು,ಮಾತ್ರವಲ್ಲ,”ನಮಗೆ ತಿಳಿದು ಬಂದ ವಿಷಯ ವೇನೆಂದರೆ,ಅನೇಕ ಭಿಕ್ಷುಕರು ತಾವುಗಳು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದರು,ಅದನ್ನು ಸಾಬೀತು ಪಡಿಸಲು ಯಾವ ಸಾಕ್ಷಿಗಳೂ ನಮ್ಮ ಬಳಿ ಇರಲಿಲ್ಲವಾದ್ದರಿಂದ ಇವರುಗಳು ಆ ಕೋರ್ಟ್ ನಿಂದ ಪಾರಾಗಿದ್ದಾರೆ.” ಎನ್ನುತ್ತಾರೆ.
2009 ರ ಕಾಮನ್ ವೆಲ್ತ್ ಗೇಮ್ಸ್ ಗಿಂತಲೂ ಮೊದಲು,ಇದೇ ತರನಾದ ಎರಡು ಮೊಬೈಲ್ ಕೋರ್ಟ್ಗಳನ್ನು ಸ್ಥಾಪಿಸಲಾಗಿತ್ತು ಮೊಬೈಲ್ ಕೋರ್ಟ್ ಒಂದು ಸಂಚಾರಿ ನ್ಯಾಯಾಲಯವಾಗಿದ್ದು ಇದರಲ್ಲಿ ಸಣ್ಣ ಸಣ್ಣ ಕೇಸುಗಳ ವಿಚಾರಣೆಯನ್ನು ಆ ವ್ಯಕ್ತಿಗಳಿರೋ ಸ್ಥಳಗಳಿಗೆ ತೆರಳಿ ಮಾಡಲಾಗುವುದು.
ಸಧ್ಯಕ್ಕೆ ಭಿಕ್ಷುಕರನ್ನು ಹಿಡಿಯಲು 25 ವ್ಯಾನ್ ಗಳಿವೆ.ಆ ಬಳಿಕ ಇವರನ್ನು ಕಿಂಗ್ಸ್ ವೇ ಕ್ಯಾಂಪ್ ನಲ್ಲಿರೊ Metropolitan Magistrate ಮುಂದೆ ಒಪ್ಪಿಸಲಾಗುತ್ತದೆ,ಅಲ್ಲಿ ವಿಚಾರಣೆಯ ಬಳಿಕ ಅವರನ್ನು ದೆಹಲಿಯ ವಾಯವ್ಯ ಭಾಗದಲ್ಲಿರುವ ಲಾಂಪುರ್ ನ 11 ಬೆಗ್ಗರ್ಸ್ ಹೋಮ್ ಗೆ ಕೊಂಡೊಯ್ಯಲಾಗುತ್ತದೆ,ಇಲ್ಲಿ ಸರಿ ಸುಮಾರು 3,000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಿಕ್ಷುಕರಿದ್ದಾರೆ.
ಈ ಯೋಜನೆಯ ಮುಖ್ಯ ಉದ್ದೇಶವು ಭಿಕ್ಷುಕರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸುವುದಲ್ಲದೆ,ಅವರಿಗೆ ಬೇರೆ ಬೇರೆ ವಿಷ್ಯಗಳಲ್ಲಿ ತರಭೇತಿ ನೀಡುವುದೂ ಆಗಿರುತ್ತದೆ.ಉದಾಹರಣೆಗಾಗಿ,ಸರಕಾರದಿಂದ ಅನುಮತಿ ಪಡೆದ N.G.O ಗಳಿಂದ ಹೆಂಗಸರಿಗೆ ಹೊಲಿಗೆ ಹಾಗೂ ನೇಯ್ಗೆ ಯಲ್ಲಿ ತರಭೇತಿ ನೀಡಲಾಗುವುದು ಇನ್ನು ಬಾಕಿ ಉಳಿದ ಪುನರ್ವಸತಿ ಯೋಜನೆಗಳಿಗೆ ತಯಾರಿ ನಡೆಸಲಾಗುತ್ತಿದ್ದು ಇದು ಜುಲೈ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದೆ.ಒಟ್ಟು 75,000 ಭಿಕ್ಷುಕರಲ್ಲಿ 30% ಭಿಕ್ಷುಕರು, 18 ವಯಸ್ಸಿಗೂ ಕಡಿಮೆಯವರು,ಉಳಿದ 40% ರಲ್ಲಿ ಹೆಂಗಸರಾಗಿದ್ದು,ಇವರುಗಳು ಇನ್ನೂ ದೆಹಲಿಯಲ್ಲಿದ್ದಾರೆ ಎಂದು ಇಲಾಖೆಯ ಮಾಹಿತಿಯನ್ವಯ ತಿಳಿದು ಬಂದಿದೆ.
POPULAR STORIES :
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!
ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!
ಮುಂಬೈನ ಮರೀನ್ ಡ್ರೈವ್‍ನಲ್ಲಿರೋ ಕಲ್ಲುಗಳೇಕೆ ಹೀಗಿವೆ ಗೊತ್ತಾ.?