ಧೀರು ಭಾಯ್ ಅಂಬಾನಿ,ಜೆ.ಆರ್.ಡಿ.ಟಾಟ,ಲಕ್ಷ್ಮಿ ಮಿತ್ತಲ್,ಕಿಶೋರ್ ಬಯಾನಿ,ಬಿಲ್ ಗೇಟ್ಸ್,ಮಾರ್ಕ್ ಜುಕರ್ಬಗ್-ಈ ಎಲ್ಲಾ ಹೆಸರುಗಳೂ ಯಶಸ್ವೀ ಬ್ಯುಸಿನೆಸ್ ಮ್ಯಾನ್ ಜೊತೆಯಲ್ಲಿ ಕೇಳಿ ಬರುತ್ತಿದೆ.ಆದ್ರೆ,ಅವ್ರು ಈ ಹಂತಕ್ಕೆ ಬೆಳೆಯಲು ಏನು ಕಾರಣ?ಹೌದು! ಇದು ಅವರನ್ನು ಅವರೆ ಮತ್ತೆ ಮತ್ತೆ ಕಂಡುಕೊಳ್ಳಲು ಮಾಡಿದ ಪ್ರಯತ್ನವೆ ಇರಬೇಕು,ಇಂದು ಅವರನ್ನೆಲ್ಲಾ ಒಬ್ಬ ಪ್ರತಿಷ್ಟಿತ ಉದ್ಯಮಿಯ ಸಾಲಿನಲ್ಲಿ ನಿಲ್ಲಿಸಿರೋದು.ಇಲ್ಲಿ ಕೆಲವೊಂದು ಪ್ರಾಮುಖ್ಯ ಅಂಶಗಳನ್ನು ಕೊಡಲಾಗಿದೆ.ಇವುಗಳು ನಿಮ್ಮನ್ನು ಒಬ್ಬ ಪ್ರಭಾವೀ ಉದ್ಯಮಿಯನ್ನಾಗಿಸಲು ಸಹಕರಿಸಬಹುದು.
1.ಉತ್ಸಾಹ
ಉತ್ಸಾಹವಿಲ್ಲದೆ ಯಾವನೊಬ್ಬ ವ್ಯಕ್ತಿಯೂ ಇರಲಾರ.ಒಂದು ಬ್ಯುಸಿನೆಸ್ ಸೂಟು ಹಾಕಿಕೊಂಡು ಹಾಗೂ ಒಂದು ಫ್ಯಾನ್ಸಿ ಆಫೀಸ್ ನ್ನು ತೆರೆದು ಕುಳಿತಲ್ಲಿ ಮಾತ್ರ ಅವನು ತನ್ನ ಉತ್ಸಾಹ ತೋರಿದಂತಾಗದು.ನಿಮ್ಮಹೃದಯದಲ್ಲಿ ನಿಮ್ಮ ಗುರಿಯನ್ನು ತಲಪಿ, ಹಿಡಿದ ಕೆಲಸವನ್ನು ಸಾಧಿಸುವ ಛಲವಿರಬೇಕು.ನೀವು ಮಾಡಲಿಚ್ಛಿಸುವ ಕೆಲಸದ ಬಗ್ಗೆ, ಅಲ್ಲಿನ ಮಾರುಕಟ್ಟೆಯ ಇತಿ-ಮಿತಿಗಳ ಬಗ್ಗೆ,ಅಲ್ಲಿನ ಗ್ರಾಹಕರ ಅಭಿರುಚಿಯ ಬಗ್ಗೆ ಸರಿಯಾದ ಮಾಹಿತಿಯನ್ನರಿತುಕೊಂಡು ನಿಮ್ಮ ಕೆಲಸವನ್ನು ಆರಂಭಿಸಬೇಕು.ನಿಜವಾದ ಉದ್ಯಮವಿರುವುದು ನೀವು ನಿಮ್ಮನ್ನು ಜೀವನ ಪೂರ್ತಿ ಏನಾಗಿ ನೋಡಬೇಕೆಂದಿದ್ದೀರೋ ಅದನ್ನು ಯಾವ ರೀತಿಯಲ್ಲಿ ಆರಂಭಿಸುತ್ತೀರಿ ಎಂಬುದರ ಮೇಲೆ ಅವಲಂಬಿಸಿದೆ.
2.ದೃಢತೆ
ಯಶಸ್ಸು ಸುಲಭವಾಗಿ ಸಿಗುವಂಥದ್ದಲ್ಲ.ಕೆಲಸ ಮಾಡಲು ಆರಂಭಿಸುವುದಕ್ಕಿಂತಲೂ ಮೊದಲು ನಾವು ಮಾಡುವ ಕೆಲಸದ ಬಗ್ಗೆ ನಮಗೆ ದೃಢ ಸಂಕಲ್ಪ ವಿರಬೇಕು.ಧೈರ್ಯ ಹಾಗೂ ದೃಢತೆ ಎರಡೂ ಜೊತೆಗಾರರು.ನೀವು ಮಾಡುತ್ತಿರೋ ಕೆಲಸದಲ್ಲಿ ಅರ್ಧಕ್ಕೆ ನಿಂತು,ಬೇರೊಂದು ಕೆಲಸದ ಕಡೆಗೆ ತಿರುಗಿ ನೋಡುವಂತಿಲ್ಲ.ಛಲವೇ ಯಶಸ್ಸಿನ ನಿಜವಾದ ಗುಟ್ಟು.”ಮೊದಲು ನೀನು ಸೋತರೂ ಕೆಲಸವನ್ನು ಮತ್ತೆ ಮತ್ತೆ ಮುಂದುವರಿಸು” ಎಂಬ ಹಿರಿಯರ ಮಾತನ್ನು ನೆನಪಿಡಿ.
3.ಧೈರ್ಯ
“”Fortune Favours the brave”” ಎಂಬ ಗಾದೆಮಾತಿನಂತೆ ಧೈರ್ಯ ಶಾಲಿಗಳಿಗೆ ಅದೃಷ್ಟ ಒಲಿಯುವುದಂತೆ ಎಂದು ಹೇಳುತ್ತಾರೆ.ಧೈರ್ಯ ಎಂಬುದು ಕೇವಲ ಆಪತ್ತುಗಳ ನಡುವೆ ಬೆಳೆದು ನಿಲ್ಲುವುದಲ್ಲ,ಬದಲಾಗಿ ಸೋಲನ್ನು ಒಪ್ಪಿಕೊಳ್ಳುವಂತದ್ದು.ಒಂದು ಉದ್ಯಮಿಯಾಗಿ ನೀವು ಸಾಕಷ್ಟು ತೊಂದರೆಗಳನ್ನು ಸ್ವೀಕಾರ ಮಾಡುತ್ತಾ ಎಂತಹದೇ ಕೆಲಸವನ್ನಾದರೂ ಮಾಡಲು ಯಾವ ಸೀಮೆಯನ್ನಾದರೂ ದಾಟಲು ತಯಾರಿರಬೇಕು.ಆದ್ರೆ ನೀವು ಹೋಗುತ್ತಿರೋ ಹಾದಿ ಸರಿಯಾದ ಹಾದಿ ಯಾಗಿದೆಯೋ ,ಇಲ್ಲವೋ ಅನ್ನೋದನ್ನು ಗುರುತಿಸುವ ಸಾಮರ್ಥ್ಯವೂ ನಿಮಗಿರಬೇಕು.ಸಮಯಕ್ಕೆ ತಕ್ಕಂತೆ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಬೇಕು ಅಂದ್ರೆಮತ್ತೆ-ಮತ್ತೆ ನಿಮ್ಮನ್ನು ನೀವೇ ಕಂಡು ಕೊಳ್ಳಬೇಕು.ಎಲ್ಲಾದಕ್ಕೂ ಮಿಗಿಲಾಗಿ ನಿಮ್ಮತಪ್ಪುಗಳಿಂದ ನೀವೆ ಕಲಿತುಕೊಳ್ಳುವ ಧೈರ್ಯ ನಿಮಗಿರಬೇಕು.
4.ಹೊಂದಾಣಿಕೆ
ಚಾರ್ಲ್ಸ್ ಡಾರ್ವಿನ್ ವಿಜ್ನಾನಿಯ ವಿಕಾಸ ವಾದದ ಪ್ರಕಾರ “ಯಾವನು ಹೊಂದಾಣಿಕೆಯಿಂದಿರುತ್ತಾನೋ ಅವನೇ ಉಳಿಯುತ್ತಾನೆ ಹಾಗೂ ಅಭಿವೃದ್ದಿ ಹೊಂದುತ್ತಾನೆ.”ನೀವು ಯಶಸ್ಸಿ ನ ರುಚಿ ನೋಡುವುದಕ್ಕೆ ಮೊದಲು ನೀವು ಇಲ್ಲಿ ಉಳಕೊಳ್ಳುವುದನ್ನು ಕಲಿಯಬೇಕು.ನೀವು ನಿಮ್ಮ ಉದ್ಯಮೆಯಲ್ಲಿ ಎಲ್ಲಿಯವರೆಗೆ ಪರಿಸ್ತಿಥಿಗಳಿಗೆ ಹಾಗೂ ಜನಗಳಿಗೆ ಹೊಂದಿಕೊಂಡು ಹೋಗಲು ಕಲಿಯುತ್ತೀರೋ ಆವಾಗ ನೀವು ನಿಮ್ಮ ಇರುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತೀರಿ.ಇದಕ್ಕೆ ಇನ್ನೊಂದು ಉದಾಹರಣೆ ಚಿನ್ನ-ಒಂದು ತೀರ ಮೆತ್ತನೆಯ ನುಣುಪಾದ ಲೋಹ.ಇದಕ್ಕಿರೋ ಗುಣದಿಂದಾಗಿಯೇ ಇದು ಇಂದಿನವರೆಗೂ ತನ್ನ ಬೆಲೆಯನ್ನು ವಿಶೇಷ ವಾಗಿ ಹೆಚ್ಚಿಸಿಕೊಂಡಿದೆ. ಬದಲಾವಣೆಗೆ ಹೊಂದಿಕೊಳ್ಳೋ ಸಾಮರ್ಥ್ಯ ನಿಮಗಿರಬೇಕು.ಮೃದು ಸ್ವಭಾವವೇ ನಮ್ಮನ್ನು ವಿಕಾಸದತ್ತ ಕೊಂಡೊಯ್ಯುತ್ತದೆ.
5.ದೃಷ್ಟಿಕೋನ
ನೀವು ಈಗ ತೀರ ಬುದ್ದಿವಂತರಾಗಬೇಕಾದ ಸಮಯ,ಇದರೊಂದಿಗೆ ನೀವು ಮಾಡುವ ಕೆಲಸದ ಬಗ್ಗೆಗಿನ 100 ಯೋಜನೆಗಳು ನಿಮ್ಮತಲೆಯಲ್ಲಿ ಓಡುತ್ತಿರಬೇಕು. ಪೂರ್ವ ಯೋಜನೆ ಯಿಲ್ಲದ ಯಾವುದೇ ಕೆಲಸವೂ ಖಾಲಿ ಹಾಳೆಯಲ್ಲಿ ಸುಮ್ಮ ಸುಮ್ಮನೆ ಗೀಚಿದಂತೆ.ಏನನ್ನಾದರೂ ಮಾಡಬೇಕೆಂದಿದ್ದಾಗ ನೀವು ಅದಕ್ಕಾಗಿ ಮೊದಲೇ ತಯಾರಿ ನಡೆಸಬೇಕು.ಇದಕ್ಕೆ ಸಂಬಂಧಿಸಿದಂತೆ ನಿಮಗೊಂದು ಉದಾಹರಣೆ;ನೀವು ಮೀನು ಹಿಡಿಯಲು ನದಿ ಅಥವಾ ಸಮುದ್ರದ ಕಡೆಗೆ ಹೋಗಬೇಕೆಂದಿರುವಿರಿ,ಇದಕ್ಕಾಗಿ ನೀವು ಯೋಜನೆ A ಹಾಗೂ ಯೋಜನೆ Bಯನ್ನು ರೂಪಿಸುತ್ತೀರಿ.ಯೋಜನೆ A ಅನ್ವಯ ಮೀನುಗಾರಿಕೆಗೆ ಅಗತ್ಯವಿರುವ ಸಾಮಗ್ರಿಗಳಾದ ಗಾಳ,ಕೋಲು ಎಲ್ಲವನ್ನೂ ನಿಮ್ಮ ಜೊತೆ ಒಯ್ಯುತ್ತೀರಿ ಅಂತೆಯೇ, ಯೋಜನೆ B ಅನ್ವಯ ಮಳೆಬಂದಲ್ಲಿ ಏನು ಮಾಡಬೇಕು? ಎಂಬುದಕ್ಕೂ ಮುಂಜಾಗ್ರತೆ ವಹಿಸುತ್ತೀರಿ.ಯೋಜನೆ B ಇಲ್ಲದೆ ನಿಮ್ಮ ಮೀನುಗಾರಿಕೆ ಯಶಸ್ವಿ ಯಾಗಲು ಸಾಧ್ಯವೇ?ಖಂಡಿತವಾಗಿಯೂ ಇಲ್ಲ.ಅದೇ ತರದಲ್ಲಿ ನಿಮ್ಮ ಉದ್ಯೋಗದಲ್ಲಿ ನಿಮಗೆ ಯಶಸ್ಸು ಬೇಕಾದಲ್ಲಿ ಯೋಜನೆ B ಅಗತ್ಯ.
ನಿಮ್ಮ ಯಶಸ್ಸನ್ನು ನೀವೇ ಕಂಡುಕೊಳ್ಳಬೇಕು,ಇದರ ಹೊರತಾಗಿ ಬೇರೆ ಯಾವ ಮಾಯ ಮಂತ್ರಗಳಿಂದಲೂ ನೀವು ಗೆಲ್ಲಲಾರಿರಿ.ನೀವು ಜನ ಸಂಪರ್ಕದಿಂದಾಗಲೀ,ಹಣದ ವಿಷಯದಲ್ಲಾಗಲೀ ಅಥವಾ ನಿಮ್ಮದೇ ಆತ್ಮ ಬಲದಿಂದಾಗಲೀ ನಿಮ್ಮ ಬುದ್ದಿವಂತಿಕೆಯನ್ನು ಹೆಚ್ಚಿಸಲು ಸಾಧ್ಯ ಆದ್ರೂ ಇದಕ್ಕೆಲ್ಲಾ ಕಾರಣವಾದ ಸಂಗತಿಗಳು ಮಾತ್ರ ಕಡೇವರೆಗೂ ನಿಮ್ಮಲ್ಲಿ ಒಂದು ಸಣ್ಣ ರಹಸ್ಯವಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ.
- ಸ್ವರ್ಣಲತ ಭಟ್
POPULAR STORIES :
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!