ಕನ್ನಡ ಚಿತ್ರರಂಗ ಈ ಹಿಂದೆ ಯಾವ ರೀತಿ ಅನ್ಯ ಭಾಷೆಗಳ ಚಿತ್ರಗಳಿಗೆ ಹೆದರುವುದಿಲ್ಲ, ನಾವು ಇತರೆ ಭಾಷೆಯ ಚಿತ್ರಗಳಿಗೆ ಪೈಪೋಟಿ ನೀಡಿ ಗೆಲ್ಲುತ್ತೇವೆ ಎಂದು ಹಲವಾರು ನಿರ್ದೇಶಕರು ಹಲವಾರು ಬಾರಿ ವಿಶ್ವಾಸದಿಂದ ಎದೆತಟ್ಟಿಕೊಂಡು ಹೇಳಿದ್ದಾರೆ. ಆದರೆ ರಿಯಾಲಿಟಿಗೆ ಬಂದರೆ ಈ ವಿಶ್ವಾಸ ಎಲ್ಲಿಯೂ ಕೂಡ ಕಾಣಿಸುವುದಿಲ್ಲ.
ತೆಲುಗು ಚಿತ್ರರಂಗ ಗಳ ಜೊತೆ ಚಿತ್ರವನ್ನು ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಬಂದಾಗ ಕರ್ನಾಟಕದ ಜನತೆ ತೆಲುಗು ಮತ್ತು ತಮಿಳು ಚಿತ್ರಗಳನ್ನು ನೋಡುತ್ತಾರೆ ಬದಲಾಗಿ ನಮ್ಮ ಚಿತ್ರಗಳನ್ನು ನೋಡುವುದಿಲ್ಲ ಎಂದು ಕಾರಣಗಳನ್ನು ಹೇಳಿ ಚಿತ್ರ ಬಿಡುಗಡೆಯಿಂದ ಕೈ ಎತ್ತಿದವರೇ ಹೆಚ್ಚು.
ಆದರೆ ರಿಯಾಲಿಟಿಗೆ ಬಂದರೆ ಕರ್ನಾಟಕದ ಜನತೆ ಮೊದಲು ಕನ್ನಡ ಚಿತ್ರವನ್ನು ನೋಡಿ ನಂತರ ತೆಲುಗು ಮತ್ತು ತಮಿಳು ಚಿತ್ರಗಳಿಗೆ ಪ್ರಾಶಸ್ತ್ಯವನ್ನು ನೀಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹೀಗಾಗಿ ತೆಲುಗು ಮತ್ತು ತಮಿಳು ಚಿತ್ರಗಳು ಬಿಡುಗಡೆಯಾದಾಗ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡದೆ ಕರ್ನಾಟಕದ ಜನತೆಯ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಬಹುದು.
ಇದೀಗ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಪುಷ್ಪ, ಆರ್ ಆರ್ ಆರ್, ರಾಧೆ ಶ್ಯಾಮ್ ಮತ್ತು ವಾಲಿಮೈ ಚಿತ್ರಗಳು ಹಿಂದಿಂದೆ ಬಿಡುಗಡೆಯಾಗುತ್ತಿವೆ. ಆದರೆ ಈ ಸಮಯದಲ್ಲಿ ಇಂತಹ ದೊಡ್ಡ ದೊಡ್ಡ ಚಿತ್ರಗಳಿಗೆ ಪೈಪೋಟಿ ನೀಡಲು ಕನ್ನಡದ ಯಾವುದೇ ದೊಡ್ಡ ಚಿತ್ರ ಕೂಡ ಮುಂದೆ ಬರುತ್ತಿಲ್ಲ. ಆದರೆ ಡಿಸೆಂಬರ್ 31ರಂದು ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಬಿಡುಗಡೆಗೆ ರೆಡಿ ಇತ್ತು. ಸದ್ಯ ಈ ಕನ್ನಡ ಚಿತ್ರವಾದರೂ ತೆಲುಗು ಮತ್ತು ತಮಿಳು ಚಿತ್ರಗಳಿಗೆ ಪೈಪೋಟಿ ನೀಡಲು ಸಜ್ಜಾಗಿದಯಲ್ಲ ಎಂದು ಅಭಿಮಾನಿಗಳು ಖುಷಿ ಪಟ್ಟಿದ್ದರು.
ಆದರೆ ಈ ಕೃಷಿಗೆ ಇದೀಗ ಚಿತ್ರತಂಡ ತಣ್ಣೀರು ಎರಚಿದ್ದು ಡಿಸೆಂಬರ್ 31ರಂದು ಬಿಡುಗಡೆ ಮಾಡದೇ ಹಿಂದೆ ಸರಿದಿದೆ. ಈ ಕುರಿತು ಚಿತ್ರದ ನಿರ್ಮಾಪಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರ ಮೂಲಕ ವಿಷಯವನ್ನು ತಿಳಿಸಿದ್ದಾರೆ. ಹೀಗಾಗಿ ತೆಲುಗು ಮತ್ತು ತಮಿಳು ಚಿತ್ರಗಳಿಗೆ ಪೈಪೋಟಿ ನೀಡಲು ಸಜ್ಜಾಗಿದ್ದ ಏಕೈಕ ಚಿತ್ರ ಕೂಡ ಇದೀಗ ಹಿಂದೆ ಸರಿದಿದ್ದು ಡಿಸೆಂಬರ್ ಮತ್ತು ಜನವರಿ ತಿಂಗಳಾದ್ಯಂತ ಕರ್ನಾಟಕದಲ್ಲಿ ತೆಲುಗು ತಮಿಳಿನ ಹವಾ ನಡೆಯುವುದು ಖಚಿತ..!