ಸದ್ಯ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸುವ ಮೂಲಕ ಬಿಸಿಸಿಐ ವಿವಾದವನ್ನು ಹುಟ್ಟುಹಾಕಿದೆ. ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಹಿಂದೆ ಸರಿದಿದ್ದ ವಿರಾಟ್ ಕೊಹ್ಲಿಯನ್ನು ಸದ್ಯ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ಬಿಸಿಸಿಐ ವಜಾ ಮಾಡಿದೆ.
ಅಷ್ಟೇ ಅಲ್ಲದೆ ಈ ಹಿಂದೆ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುತ್ತೇನೆ ಎಂದಾಗ ಮತ್ತೊಮ್ಮೆ ಯೋಚಿಸಿ ಈ ನಿರ್ಧಾರವನ್ನು ಕೈಗೊಳ್ಳಬೇಡಿ ಎಂದು ಕೊಹ್ಲಿಯ ಮನವೊಲಿಸಲು ಪ್ರಯತ್ನಿಸಿದ್ದೆ ಎಂದು ಹೇಳಿಕೆಯನ್ನು ನೀಡಿದ್ದರು. ಹಾಗೂ ಈ ಮನವಿಗೆ ಒಪ್ಪಿಗೆ ನೀಡದ ವಿರಾಟ್ ಕೊಹ್ಲಿ ತಮ್ಮ ಸ್ವಇಚ್ಛೆಯಿಂದ ಭಾರತಕ್ಕೆ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿದರೂ ಎಂದು ಕೂಡ ಸೌರವ್ ಗಂಗೂಲಿ ಹೇಳಿದರು.
ಹೀಗೆ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಕುರಿತಾಗಿ ಹೇಳಿದ್ದ ಹೇಳಿಕೆಯನ್ನೇ ನಿಜ ಎಂದು ಹಲವಾರು ಮಂದಿ ನಂಬಿದ್ದರು. ಆದರೆ ಇದೀಗ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾದಾಗ ಬಿಸಿಸಿಐನಿಂದ ಯಾವುದೇ ರೀತಿಯ ತಡೆ ಬರಲಿಲ್ಲ ಎಂಬ ಸತ್ಯಾಂಶವನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಗೆ ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಮನವಿ ಮಾಡಿದ್ದೆ ಎಂಬ ಸೌರವ್ ಗಂಗೂಲಿ ಅವರ ಹೇಳಿಕೆ ಸುಳ್ಳು ಎಂಬುದನ್ನು ವಿರಾಟ್ ಕೊಹ್ಲಿ ನಿರೂಪಿಸಿದ್ದಾರೆ.