ಪುನೀತ್ ನೋಡಲು ಯಾಕೆ ಬರಲಿಲ್ಲ ಎಂಬ ಕಾರಣ ಬಿಚ್ಚಿಟ್ಟ ಶಕೀಲಾ

Date:

ಕನ್ನಡಿಗರ ಪಾಲಿಗೆ ಈ ವರ್ಷದ ಅತಿ ಕೆಟ್ಟ ದಿನ ಯಾವುದು ಎಂದು ಕೇಳಿದರೆ ಎಲ್ಲರ ಬಾಯಲ್ಲೂ ಬರುವ ಒಂದೇ ಉತ್ತರ ಅಕ್ಟೋಬರ್ 29. ಹೌದು, ಅಂದು ಕನ್ನಡದ ಟಾಪ್ ನಟ ಪುನೀತ್ ರಾಜ್ ಕುಮಾರ್ ಕನ್ನಡಿಗರನ್ನೆಲ್ಲ ಅಗಲಿದ ದಿನ. ತೆಲುಗಿನ ಎನ್ಟಿಆರ್, ಬಾಲಕೃಷ್ಣ ರೀತಿಯ ದೊಡ್ಡ ದೊಡ್ಡ ಸ್ಟಾರ್ ನಟರು ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆಯಲು ಬಂದಿದ್ದರು. ಆದರೆ ಹಲವಾರು ಸೆಲೆಬ್ರಿಟಿಗಳು ಆ ದಿನದಂದು ಬರದೇ ಇರುವುದಕ್ಕೆ ಈಗೀಗ ಕಾರಣಗಳನ್ನು ತಿಳಿಸಲು ಆರಂಭಿಸಿದ್ದಾರೆ. ಅದರಲ್ಲಿ ನಟಿ ಶಕೀಲಾ ಕೂಡ ಒಬ್ಬರು. ಹೀಗೆ ಪುನೀತ್ ರಾಜ್ ಕುಮಾರ್ ನಿಧನದ ಕುರಿತು ಮಾತನಾಡಿರುವ ನಟಿ ಶಕೀಲಾ ಅಂದು ತಾವು ಬೆಂಗಳೂರಿಗೆ ಬರಲು ಆಗದೆ ಇದ್ದಿದ್ದರೆ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಶಕೀಲಾ ಕೇವಲ ತೆಲುಗು-ತಮಿಳು ಭಾಷೆಗಳಲ್ಲಿ ಮಾತ್ರ ನಟಿಸಿಲ್ಲ. ಕನ್ನಡದ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಜೊತೆನೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಶಕೀಲಾ ಪವರ್‌ಸ್ಟಾರ್ ಪುನೀತ್ ಅಗಲಿಕೆಯ ಸುದ್ದಿ ಕೇಳಿ ಶಾಕ್ ಆಗಿದ್ದರು. ಆದರೆ, ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಕೊನೆಯ ಬಾರಿ ಅಪ್ಪು ಮೃತದೇಹ ನೋಡಲು ಯಾಕೆ ಬಂದಿಲ್ಲ ಎಂಬ ಕಾರಣವನ್ನೂ ಶಕೀಲಾ ನೀಡಿದ್ದಾರೆ. ” ನನಗೆ ತುಂಬಾನೇ ಬೇಜಾರುಗುತ್ತಿದೆ. ಪುನೀತ್ ರಾಜ್‌ಕುಮಾರ್ ಅಗಲಿದ ದಿನ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ. ಆ ವೇಳೆ ನನ್ನ ಆರೋಗ್ಯ ಸರಿಯಿರಲಿಲ್ಲ. ಆ ದಿನ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ” ಎಂದು ಶಕೀಲಾ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...