ಬಿಎಂಟಿಸಿ(BMTC)ಯ ಬಹು ವರ್ಷಗಳ ಕನಸಿನ ಯೋಜನೆ ಇಂದು ಸಾಕಾರಗೊಂಡಿದೆ. ದೇಶದಲ್ಲೇ ಮೊದಲ BS6 ಇಂಜಿನ್ ಡೀಸೆಲ್ ಬಸ್ಗಳಿಗೂ ಇಂದು ಚಾಲನೆ ಸಿಕ್ಕಿದೆ. ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj Bommai) ಅವರು ಸ್ಮಾರ್ಟ್ ಸಿಟಿ ಯೋಜನೆ(Smart City Plan) ಅಡಿಯಲ್ಲಿ 90 ಮಿನಿ ಎಲೆಕ್ಟ್ರಿಕ್ ಬಸ್ಗಳಿಗೆ ವಿಧಾನಸೌಧದ ಮುಂದೆ ಚಾಲನೆ ನೀಡಿದರು.
ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು(Sriramulu) ಬಸ್ನಲ್ಲಿ ಪ್ರಯಾಣ ಮಾಡುವ ಮೂಲಕ ಚಾಲನೆ ನೀಡಿದರು. ಬಿಎಸ್ 6 ಡೀಸೆಲ್ ಬಸ್(Diesel Bus)ಗಳನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪರಿಚಯ ಮಾಡಲಾಗಿದೆ. ಪರಿಸರ ಮಾಲಿನ್ಯ ಕಡಿಮೆ ಇರುವ, ಅತಿ ಕಡಿಮೆ ಹೊಗೆ ಹೊರಸೂಸುವ ಬಸ್ಗಳಾಗಿವೆ. ಈ ಬಸ್ನಲ್ಲಿ 33 ಆಸನಗಳ ವ್ಯವಸ್ಥೆ ಇದೆ.
ಈ ಹಿಂದೆ ಸರ್ಕಾರ ಬಜೆಟ್ ನಲ್ಲಿ ನೀಡಿದ್ದ ಅನುದಾನದಲ್ಲಿ 535 BS6 ಡೀಸೆಲ್ ಬಸ್ ಖರೀದಿ ಮಾಡಲಾಗಿದೆ. ಈಗಾಗಲೇ 40 ಎಲೆಕ್ಟ್ರಿಕ್, 150 BS6 ಡೀಸೆಲ್ ಬಸ್ಸುಗಳು ಬಿಎಂಟಿಸಿ ಸಂಸ್ಥೆ ಸೇರಿವೆ. ಫೆಬ್ರವರಿ ವೇಳೆಗೆ ಉಳಿದ ಎಲ್ಲಾ ಹೊಸ ಬಸ್ಸುಗಳು ತನ್ನ ಸಂಚಾರ ಆರಂಭಿಸಲಿವೆ.