RRR ಮುಂದೂಡಿಕೆ: ಪ್ರೇಕ್ಷಕರಿಗೆ 10 ಕೋಟಿ ಕೊಡಬೇಕಿದೆ ನಿರ್ಮಾಪಕ!

Date:

2022ರ ಹೊಸ್ತಿಲಲ್ಲೇ ಬಿಗ್​ ಬಜೆಟ್(Big Budget)​ ಸಿನಿಮಾ ಜನವರಿ 7ರಂದು ‘ಆರ್​​ಆರ್​ಆರ್​​'(RRR) ರಿಲೀಸ್ ಆಗಬೇಕಿತ್ತು. ಎಲ್ಲವೂ ಅಂದುಕೊಂಡತೆ ಆಗಿದ್ದರೆ, ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ‘ಆರ್​​ಆರ್​ಆರ್​’ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ ನಡೆಯಬೇಕಿತ್ತು.

ಇನ್ನೇನು ಕೇವಲ 4 ದಿನದ ಬಳಿಕ ‘ಆರ್​​ಆರ್​ಆರ್​’ ಸಿನಿಮಾ ವಿಶ್ವಾದಾದ್ಯಂತ ಅದ್ಧೂರಿಯಾಗಿ ತೆರೆಕಾಣಬೇಕಿತ್ತು. ಆದರೆ, ಕೊರೋನಾ(Corona) ಅಬ್ಬರಕ್ಕೆ ಇದೀಗ ಎಲ್ಲವೂ ನಿಂತಲ್ಲೇ ನಿಂತಿದೆ. ‘ಆರ್​ಆರ್​ಆರ್​’ ರಿಲೀಸ್​ ದಿನಾಂಕ ಮುಂದೂಡಿಕೆಯಾಗಿದೆ. ಒಂದೂವರೆ ತಿಂಗಳ ಹಿಂದಿನಿಂದಲೇ ಚಿತ್ರತಂಡ ಅದ್ಧೂರಿಯಗಿ ಪ್ರಚಾರ ಮಾಡಿಕೊಂಡು ಬಂದಿದೆ. ಇದೊಂದು ಪ್ಯಾನ್​ ಇಂಡಿಯಾ(Pan India) ಸಿನಿಮಾ ಆಗಿರುವುದರಿಂದ ಪ್ರತಿ ರಾಜ್ಯಕ್ಕೂ ತೆರಳಿ ಪ್ರಚಾರ ಮಾಡಬೇಕು.ಅದರಂತೆ ಎಲ್ಲ ಕಾರ್ಯವೂ ನಡೆಯುತ್ತಿತ್ತು. ಆದರೆ, ಚಿತ್ರತಂಡ ಕೊಟ್ಟ ಶಾಕ್​ನಿಂದ ಸಿನಿರಸಿಕರಿಗೆ ಭಾರೀ ನಿರಾಸೆಯಾಗಿದೆ. ಹೊಸ ವರ್ಷದಲ್ಲೇ ಸಂಕಷ್ಟ ಎದುರಾದರೆ ಮುಂದೆ ಹೇಗೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲ ಕಡೆ ಚಿತ್ರದ ಮುಂಗಡ ಟಿಕೆಟ್​(Pre Ticket Booking) ಕೂಡ ಸೇಲ್​ ಆಗಿತ್ತು. ಆದರೆ, ಈಗ ‘ಆರ್​​ಆರ್​ಆರ್​’​​ ರಿಲೀಸ್​ ಡೇಟ್​ ಅಧಿಕೃತವಾಗಿ ಮುಂದೂಡಿಕೆ(RRR Release Date Postponed)ಯಾಗಿದೆ. ಈ ವಿಚಾರ ಸಿನಿಮಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇದರ ಜೊತೆಗೆ ಇದೀಗ ಪ್ರೇಕ್ಷಕರಿಗೆ ‘ಆರ್​ಆರ್​ಆರ್​’ ಸಿನಿಮಾದ ನಿರ್ಮಾಪಕರು 10 ಕೋಟಿ ರೂಪಾಯಿಗಳನ್ನು ವಾಪಸ್​ ನೀಡಬೇಕಾಗಿದೆ.

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...