ಈ ಭೂಮಿ ನಮ್ಮದು,ನಮ್ಮ ಜನ್ಮಭೂಮಿ,ಕರ್ಮ ಭೂಮಿ,ನಮ್ಮ ಭಾರತ.ನಮ್ಮ ಕಣ ಕಣದಲ್ಲಿ ಹರಿಯುತ್ತಿರುವ ರಕ್ತವೂ ಸಹ ನಾನೊಬ್ಬ ಭಾರತೀಯ ಎಂಬುದನ್ನು ಸಾರಿ ಸಾರಿ ಹೇಳುತ್ತದೆ.ಇಂತಹ ನಮ್ಮಭಾರತೀಯರ ಮನೋಭಾವನೆಗೆ ವಿರುದ್ದವಾಗಿ ಯಾರಾದ್ರೂ ನೀನು ಭಾರತೀಯನಾ?ಎಂದು ಕೇಳಿದಾಗ ನಮಗೆ ಹೇಗನ್ನಿಸಬೇಡ?ನೀವೆ ಹೇಳಿ..ಇಂತಹದ್ದೇ ಒಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡ ಒಬ್ಬ ಮಣಿಪುರಿ ಯುವತಿಯ ಪರಿಸ್ಥಿತಿ ಬಗ್ಗೆ ತಿಳಿಯೋಣ ಬನ್ನಿ.
ದೆಹಲಿಯ ಐ.ಜಿ.ಐ ಏರ್ ಪೋರ್ಟ್ ನಲ್ಲಿ ಮೋನಿಕಾ ಎಂಬ ಮಣಿಪುರಿ ಯುವತಿಗೆ ಇಮ್ಮಿಗ್ರೇಷನ್ ಆಫೀಸರ್ ನ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂತು.
ಅದೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹಲವು ಸಂದೇಹಗಳು ,ಇಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ಆ ಯುವತಿ ಪಾಪ! ಏನು ತಾನೇ ಮಾಡಿಯಾಳು?ಶಾಂತಚಿತ್ತಳಾಗಿಯೇ ಇದ್ದು, ಅಲ್ಲಿಂದ ಹೊರಟ ಬಳಿಕ ಆ ಇಡೀ ಘಟನೆಯನ್ನು ಫೇಸ್ ಬುಕ್ ಮೂಲಕ ತಿಳಿಸಿದಳು.ಆಕೆಯ ಈ ಪೋಸ್ಟ್ ನೋಡ ನೋಡುತ್ತಿದ್ದಂತೆ ವೈರಲ್ ಆಗಿಯೇ ಹೋಯ್ತು.
ಇದಕ್ಕಾಗಿ ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಕ್ಷಮೆಯಾಚಿಸಿದ್ರು.ಇಮ್ಮಿಗ್ರೇಷನ್ ತನ್ನ ಬಳಿ ಇಲ್ಲವೆಂದೂ ಹಾಗೂ ಈ ವಿಷಯವಾಗಿ ಟ್ವೀಟ್ ಮಾಡಿ ಗೃಹ ಮಂತ್ರಿ ರಾಜ್ ನಾಥ್ ಸಿಂಗ್ ಜೊತೆ ಮಾತಾಡುತ್ತೇನೆ ಎಂದು ಆಶ್ವಾಸನೆ ಇತ್ತರು.
ಮೋನಿಕಾ ಪ್ರಕಾರ ಈ ಘಟನೆ ಶನಿವಾರ ದೆಹಲಿಯ ಐ.ಜಿ.ಐ ಏರ್ ಪೋರ್ಟ್ ನ ಟಿ-3 ಟರ್ಮಿನಲ್ ನಲ್ಲಿ ನಡೆಯಿತು.ಅವ್ರು ಇಮ್ಮಿಗ್ರೇಷನ್ ಡೆಸ್ಕ್ ತಲಪುತ್ತಿದ್ದಂತೆ ಆಫೀಸರ್ ಕೇಳಿದ್ರು. ಖಂಡಿತವಾಗಿಯೂ ನೀನು ಭಾರತೀಯಳು ತಾನೇ? ಆದರೆ ಭಾರತೀಯಳಂತೆ ಯಾಕೋ ಕಾಣಿಸುತ್ತಿಲ್ಲ
ಮತ್ತೆ ಆಕೆಯ ಮೇಲೆ ಪ್ರಶ್ನೆಗಳ ಸುರಿಮಳೆ-ನೀನು ಎಲ್ಲಿಯವಳು?ಆ ಯುವತಿಯು ತನ್ನನ್ನು ಮಣಿಪುರದ ನಿವಾಸಿ ಅನ್ನುತ್ತಿದ್ದಂತೆ,ಆ ಅಫೀಸರ್ ಮತ್ತೊಮ್ಮೆ ಕೇಳುತ್ತಾರೆ-ನೀನು ಭಾರತೀಯಳೇ ಆಗಿದ್ದಲ್ಲಿ ನಮ್ಮ ಭಾರತದಲ್ಲಿ ಎಷ್ಟು ರಾಜ್ಯಗಳಿವೆ ಎಂದು ಹೇಳು?ಪಕ್ಕದ ಕೌಂಟರ್ ನಲ್ಲಿದ್ದ ಲೇಡಿ ಆತನ ಪ್ರಶ್ನೆಗಳಿಗೆ ಬಿದ್ದು ಬಿದ್ದು ನಗುತ್ತಿದ್ದಳು.ಈಕೆಗೆ ಈತನ ಪ್ರಶ್ನೆಗೆ ಉತ್ತರಿಸದೆ ಬೇರೆ ಹಾದಿಯಿರಲಿಲ್ಲ.ಅಷ್ಟಕ್ಕೇ ಸುಮ್ಮನಾಗದ ಆ ಅಧಿಕಾರಿ ಹಾಗಿದ್ದಲ್ಲಿ ನಿಮ್ಮ ಮಣಿಪುರದ ಅಕ್ಕ ಪಕ್ಕದ ರಾಜ್ಯಗಳ ಹೆಸರನ್ನು ತಿಳಿಸು ಎಂದನಂತೆ.ಆಕೆಯ ತಾಳ್ಮೆ ತಪ್ಪುತ್ತಾ ಹೋಯಿತು,ಆತನ ಪ್ರಶ್ನೆಗೆ ಆಕೆ ಯಾವ ಉತ್ತರವನ್ನೂ ನೀಡಲಿಲ್ಲ.ಬದಲಾಗಿ ಮೋನಿಕಾ ಈ ಅಧಿಕಾರಿಯ ಬಳಿ ನನಗೆ ಲೇಟ್ ಆಗುತ್ತಿದೆ,ಹೋಗಲು ಅನುಮತಿ ಕೊಡಿ ಅನ್ನುತ್ತಿದ್ದಂತೆ,ಆ ಅಧಿಕಾರಿಯು ನಿಮ್ಮ ಏರ್ ಕ್ರಾಫ಼್ಟ್ ಏನೂ ನಿಮ್ಮನ್ನು ಬಿಟ್ಟು ಹೋಗಲಾರದು,ನೀವು ಆರಾಮವಾಗಿ ನನ್ನ ಪ್ರಶ್ನೆಗೆ ಉತ್ತರಿಸಿ ಎಂದರಂತೆ.
ಆ ಕ್ಷಣದಲ್ಲಿ ಆಕೆಗೆ ಈ ಅಧಿಕಾರಿಯು ನನಗೆ ನನ್ನ ಭಾರತೀಯತೆಯ ಬಗ್ಗೆ ತಿಳಿಸುವ ಒಂದು ಮಿಷನ್ ನಲ್ಲಿ ಇರುವಂತೆಯೂ ಹಾಗೂ ಒಂದು ತಮಾಷೆಯ ಸನ್ನಿವೇಷವನ್ನು ಸೃಶ್ಟಿ ಮಾಡುತ್ತಿರುವಂತೆಯೂ ತೋರುತ್ತಿತ್ತು ಅನ್ನುತ್ತಾಳೆ.
ಈ ತರದಲ್ಲಿ ಚಿತ್ರ ವಿಚಿತ್ರ ಪ್ರಶ್ನೆಗಳಿಂದ ತೊಂದರೆಗೊಳಗಾದ ಆ ಯುವತಿ ಈ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಫೇಸ್ ಬುಕ್ ನ ಪೋಸ್ಟ್ ಮೂಲಕ ಅಪೀಲ್ ಮಾಡಿದ್ಲು.
ಸ್ನೇಹಿತರೇ!ಪ್ರಶ್ನಿಸಬೇಕಾದವರನ್ನೇ ಪ್ರಶ್ನಿಸದೆ,ಅಂತಹವರನ್ನು ನಮ್ಮ ದೇಶದೊಳಗೆ ನುಸುಳಲು ಎಡೆ ಮಾಡಿಕೊಟ್ಟಿರೋ ಇಂತಹ ಅಧಿಕಾರಿಗಳು,ಅಮಾಯಕರಾದ ನಮ್ಮ ಜನಗಳಿಗೇ ತೊಂದರೆ ಕೊಟ್ಟು ಚಿತ್ರ ವಿಚಿತ್ರ ಸನ್ನಿವೇಷಗಳನ್ನು ಸೃಷ್ಟಿ ಮಾಡುತ್ತಿರೋ ಇಂತಹ ಅಧಿಕಾರಿಗಳಿಗೆ ಏನನ್ನಬೇಕೋ?ನಿಜವಾಗಲೂ ಇವರುಗಳು ಯಾವ ರೀತಿಯ ಕ್ಷಮೆಗೂ ಯೋಗ್ಯರಲ್ಲ ಎಂಬುದು ನಮ್ಮ ಅನಿಸಿಕೆ.
- ಸ್ವರ್ಣಲತ ಭಟ್
POPULAR STORIES :
ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!