ಠೀವಿ ಇಂದ ತಗೊಳ್ಳಿ ಟಿವಿ

0
62

ದೊಡ್ಡ ಪರದೆಯುಳ್ಳ ಟಿವಿಗಳನ್ನು ಅಥವಾ ಪ್ರೊಜೆಕ್ಟರ್‍ಗಳನ್ನು ಬಳಸಿ ರೂಮನ್ನು ಸಿನಿಮಾ ಟಾಕೀಸಾಗಿ ಪರಿವರ್ತಿಸುವುದು ಇತ್ತೀಚಿನ ಟ್ರೆಂಡ್. ನೀವು ವಾಸಿಸುವ ಕೋಣೆಯಲ್ಲಿ(ಲಿವಿಂಗ್ ರೂಮ್) 150 ಇಂಚು ಸ್ಕ್ರೀನ್ ಅಳತೆಯುಳ್ಳ ಟಿವಿ ಅಥವಾ ಪ್ರಾಜೆಕ್ಟರ್ ತಂದಿಟ್ಟರೆ ಅದರ ಗಮ್ಮತ್ತೇ ಬೇರೆ. ಖುಷಿಯಾದ ಸಂಗತಿಯೇನಂದರೆ, ದಿನೇ ದಿನೇ ಇಂತಹ ಟಿವಿಗಳ ಬೆಲೆಯೂ ಕುಗ್ಗುತ್ತಿವೆ. ಹೀಗಾಗಿ ಇವುಗಳ ಬಳಕೆಯೂ ಜಾಸ್ತಿಯಾಗಿದೆ. ಆದರೆ, ಇಂತಹ ಟಿವಿ ಅಥವಾ ಪ್ರೊಜೆಕ್ಟರ್‍ಗಳು ಎಲಾ ರೂಮುಗಳಿಗೆ ಸರಿಹೊಂದುವುದಿಲ್ಲ. ಹಾಗಂತ ಜಾಸ್ತಿ ಹಣ ವ್ಯಹಿಸುವ ಅಗತ್ಯವೂ ಇಲ್ಲ. ಜಸ್ಟ್ ನಿಮ್ಮ ರೂಮನ್ನೇ ಸ್ವಲ್ಪ ಮಾರ್ಪಾಡುಗೊಳಿಸಿದರೆ, ನಿಮ್ಮ ರೂಮ್ ಥಿಯೇಟರ್ ಆಗುವುದರಲ್ಲಿ ಸಂಶಯವೇ ಇಲ್ಲ.
ಮಾರುಕಟ್ಟೆಯಲ್ಲಿ ಈ ರೀತಿಯ ಮಾದರಿಗಳು ಹೆಚ್ಚಾಗಿಬಿಟ್ಟಿವೆ. ಹೀಗಾಗಿ ಯಾವುದನ್ನು ಆಯ್ಕೆ ಮಾಡುವುದು ಎನ್ನುವುದು ನಿಮ್ಮಲ್ಲಿ ಗೊಂದಲ ಮೂಡುವದಂತೂ ಸಹಜ. ಆಥವಾ ಸರಿಯಾದ ಮಾಡೆಲ್‍ಗಳನ್ನು ಕೊಂಡುಕೊಳ್ಳದಿದ್ದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬೀಳುವದಂತೂ ಗ್ಯಾರಂಟಿ. ಹೀಗಾಗಿ ಬಳಸುವ ಮುನ್ನ ಈ ನಾಲೆಡ್ಜ್ ಇದ್ದರೆ ಉತ್ತಮ.
ರೂಮ್‍ನ ಅಳತೆ ಮತ್ತು ದೃಷ್ಟಿಕೋನದ ಆಯ್ಕೆ-
ಪ್ರತಿಯೋಂದು ಟಿವಿ ಪ್ರಾಜೆಕ್ಟರ್‍ಗಳಿಗೆ ನಿರ್ದಿಷ್ಟವಾದ ‘ಥ್ರೋ ರೇಷಿಯೋ’ ಇರುತ್ತದೆ. ಇದು ನಿಗದಿತ ಅಂತರದಿಂದ ಸ್ಕ್ರೀನ್ ಎಷ್ಟರ ಮಟ್ಟಿಗೆ ಕಾಣುತ್ತದೆ ಎನ್ನುವ ಲೆಕ್ಕಾಚಾರ. ಆಪ್ಟಿಕಲ್ ಝೂಮ್‍ನಿಂದ ಥ್ರೋ ರೇಷಿಯೋವಿನ ಗುಣಮಟ್ಟವೂ ಹೆಚ್ಚುತ್ತದೆ. ಹೀಗಾಗಿ ನೀವು ಸರಿಯಾದ ಥ್ರೋ ರೇಷಿಯೋ ಇರುವ ಸ್ಕ್ರೀನ್ ಅಥವಾ ಪ್ರಾಜೆಕ್ಟರ್‍ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಟಿವಿಯ/ ಪ್ರಾಜೆಕ್ಟೆರ್‍ಗಳ ಥ್ರೋ ರೇಷಿಯೋ ಎಷ್ಟಿದೆ ಎಂಬುದನ್ನು ಟಿವಿ ಬಾಕ್ಸ್ ನಲ್ಲಿರುವ ಯುಸರ್ಸ್ ಮ್ಯಾನುವಲ್ ಪುಸ್ತಕದಲ್ಲಿ ಪಡೆಯಬಹುದು ಅಥವಾ ಇಂಟರ್‍ನೆಟ್‍ನಲ್ಲೂ ಹುಡುಕಬಹುದು. ಒಮ್ಮೆ ನಿಮಗೆ ಆ ರೇಷಿಯೋ ಸಿಕ್ಕಲ್ಲಿ ಉಳಿದ ಕೆಲಸಗಳು ಸುಲಭ.
ಪ್ರೊಜೆಕ್ಷನ್ ಇಮೇಜ್ ಅಳತೆಯನ್ನು ನೀವು ಲೆಕ್ಕ ಹಾಕಲು ಮೊದಲಿಗೆ ರೋಮಿನ ಗೋಡೆಯ ಅಂತರ ಹಾಗೂ ಪ್ರಾಜೆಕ್ಟರ್ ನ ಅಂತರದ ಜೊತೆಗೆ ಥ್ರೋ ರೇಷಿಯೋವನ್ನು ಭಾಗಿಸಬೇಕು.
ಉದಾ: ನಿಮ್ಮ ಪ್ರೊಜೆಕ್ಟರ್ ಅನ್ನು ಸ್ಕ್ರೀನ್ ಅಂತರದಿಂದ 10 ಅಡಿ ದೂರದಲ್ಲಿಟ್ಟು, ನಿಮ್ಮ ಸ್ಕ್ರೀನ್ ರೇಷಿಯೋ 1.8-2.22 ಆದಲ್ಲಿ, ನಿಮಗೆ ಪರದೆಯಲ್ಲಿ ಕಾಣುವ ವಸ್ತುಗಳು 54-66 ಇಂಚುಗಳದ್ದಾಗಿರುತ್ತವೆ.
ಗೋಡೆಯ ಮೇಲೆ ಬಿಂಬಿಸುವಿಕೆ ಅಥವಾ ಸ್ಕ್ರೀನ್ ಬಳಸುವುದು:
ನೀವು ಪ್ರೊಜೆಕ್ಟರ್‍ಗಳ ಮೂಲಕ ಗೋಡೆಯ ಮೇಲೆ ಚಿತ್ರ ಬಿಂಬಿಸುವುದಾದರೂ ಸ್ಕ್ರೀನ್‍ನಲ್ಲಿ ಕಾಣುವಂತೆ ಗೋಡೆಯ ಮೇಲೆ ಕಾಣುವುದಿಲ್ಲ. ಇದಕ್ಕೆ ಕಾರಣ ಗೋಡೆ ಸಮವಾಗಿರುವುದಿಲ್ಲ. ಇದರ ಜೊತೆಗೆ ಇತ್ತೀಚಿಗೆ ಬರುವ ಪರದೆಗಳಲ್ಲಿ ಕಪ್ಪು ಬಾರ್ಡರ್ ಇರುತ್ತವೆ. ಈ ಬಾರ್ಡರ್‍ಗಳಿಂದ ಚಿತ್ರದ ಕಾಂಟ್ರಾಸ್ಟ್ ಹೆಚ್ಚಲಿದ್ದು, ನೋಡುಗರ ಕಣ್ಣು ಸೆಳೆಯುತ್ತವೆ.
ಡಿಎಲ್‍ಪಿ, ಎಲ್‍ಸಿಡಿ, ಮತ್ತು ಎಲ್‍ಈಡಿ:
ಪ್ರೊಜೆಕ್ಷನ್‍ಗೆ ಮೂರು ವಿಧವಾದ ಸ್ಕ್ರೀನ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಡಿಜಿಟಲ್ ಲೈಟ್ ಪ್ರಾಸೆಸ್ಸಿಂಗ್ (ಡಿಎಲ್‍ಪಿ)ಯಲ್ಲಿ ಚಿಪ್ಪೊಂದನ್ನು  ಅಳವಡಿಸಲಾಗಿರುತ್ತದೆ. ಈ ಚಿಪ್‍ನಲ್ಲಿ ಅತೀ ಸೂಕ್ಷ್ಮ ಕನ್ನಡಿಗಳು ಮತ್ತು ತಿರುಗುವ ಬಣ್ಣದ ಚಕ್ರವಿರುತ್ತದೆ. ಈ ಕನ್ನಡಿಗಳು ಮತ್ತು ತಿರುಗುವ ಚಕ್ರಗಳಿಂದ ಪರದೆಯಲ್ಲಿ ಚಿತ್ರ ಕಾಣಿಸುತ್ತದೆ. ಇಂತಹ ಡಿಎಲ್‍ಪಿ ಪ್ರಜೆಕ್ಟರ್‍ಗಳಿಗೆ ಯಾವುದೇ ಫಿಲ್ಟರ್‍ಗಳು ಬೇಕಾಗುವುದಿಲ್ಲ. ಇದರ ಜೊತೆಗೆ ಪ್ರತಿಕ್ರಿಯೆಯ ಅವಧಿ ಕೂಡ ಹೆಚ್ಚಿರುತ್ತದೆ. 3ಡಿ ಪಿಚ್ಚರ್‍ಗಳೂ ಇದರಲ್ಲಿ ನೋಡಬಹುದು . ಆದರೆ ಡಿಎಲ್‍ಪಿಗಳ ಲ್ಯಾಂಪ್ ಲೈಫ್ ಕೇವಲ 2000-5000 ಗಂಟೆಯದ್ದಾಗಿರುತ್ತದೆ. ಬಳಿಕ ಸ್ಕ್ರೀನ್‍ನಲ್ಲಿ ಬಣ್ಣದ ಬ್ಯಾಂಡ್‍ಗಳು ಗೋಚರಿಸುತ್ತವೆ ಎಂದು ಅನೇಕ ಬಳಕೆದಾರರು ದೂರು ನೀಡಿದ್ದಾರೆ.
ಡಿಎಲ್‍ಪಿ ಗೆ ಹೋಲಿಸಿದರೆ, ಎಲ್‍ಸಿಡಿ ಸ್ಕ್ರೀನ್‍ಗಳ ಬೆಲೆ ಕಡಿಮೆ. ಆದರೆ ಡಿಎಲ್‍ಪಿಗಿಂತ ಹೆಚ್ಚು ಬಾಳಿಕೆ ಬರುತ್ತವೆ. ಸಿಂಗಲ್ ಚಿಪ್ ಮತ್ತು ಡಬಲ್ ಚಿಪ್ ಎಂದು ಎರಡು ವಿಧಗಳಲ್ಲಿ ಎಲ್‍ಸಿಡಿ ಸ್ಕ್ರೀನ್‍ಗಳು ಲಭ್ಯವಿದ್ದು, ನಿಮ್ಮ ಜೇಬಿಗೆ ತಕ್ಕ ಹಾಗೆ ಈ ಸ್ಕ್ರೀನ್ ಆಯ್ಕೆ ಮಾಡಿಕೊಳ್ಳಬಹುದು. ಸಿಂಗಲ್ ಚಿಪ್‍ಗಳಿಗೆ ಹೋಲಿಸಿದರೆ, ಡಬಲ್ ಚಿಪ್ ಸ್ಕ್ರೀನ್‍ಗಳ ಗುಣಮಟ್ಟ , ಕಡಿಮೆ ನಾಯ್ಸ್ ಲೆವೆಲ್, ಮತ್ತು ಸಿನಿಮಾ ನೋಡುವುದಕ್ಕೆ ಅತ್ಯಾರ್ಷಕದಾಗಿರುತ್ತವೆ.
ಇನ್ನು ಎಲ್‍ಈಡಿ ಸ್ಕ್ರೀನ್‍ಗಳ ವಿಚಾರಕ್ಕೆ ಬಂದರೆ ಇದರಲ್ಲಿ ಎಲ್‍ಈಡಿ ಬಲ್ಬ್‍ಗಳಿರುತ್ತವೆ. ಈ ಬಲ್ಬ್‍ಗಳು ಕಡಿಮೆ ವಿದ್ಯುತ್ ಬಳಸುವುದರ ಜೊತೆಯಲ್ಲಿ ಸ್ಕ್ರೀನ್‍ಗಳ ಬಣ್ಣವೂ ಅತ್ಯಾರ್ಷಕವಾಗಿರುತ್ತವೆ. ಈ ಸ್ಕ್ರೀನ್‍ಗಳ ಬಾಳಿಕೆಯೂ ಜಾಸ್ತಿಯಾಗಿದೆ(ಸುಮಾರು 20,000 ಗಂಟೆಗಳು). ಹೀಗಾಗಿ ಗ್ರಾಹಕರು ಈ ಸ್ಕ್ರೀನ್‍ಗಳನ್ನೇ ಬಳಸುವುದು ಉತ್ತಮ. ಆದರೆ, ಈ ಸ್ಕ್ರೀನ್‍ಗಳು ಕಡಿಮೆ ಪ್ರತಿಫಲನ ಹೊಂದಿರುವುರಿಂದ ನಿಮ್ಮ ರೂಮಿನಲ್ಲಿ ಬೆಳಕಿನ ಅಭಾವವಿದ್ದಲ್ಲಿ ಈ ಸ್ಕ್ರೀನ್‍ಗಳ ಬಳಕೆ ಸೂಕ್ತವಲ್ಲ.
ಪಿಕೋ ಪ್ರೊಜೆಕ್ಟರ್‍ಗಳು-
ಹೆಸರೇ ಸೂಚಿಸುವ ಹಾಗೆ ಪಿಕೋ ಪ್ರಾಜೆಕ್ಟರ್‍ಗಳು ಕಡಿಮೆ ಗಾತ್ರ ಹೊಂದಿರುತ್ತವೆ. ಇವುಗಳನ್ನು ಬೇಕಾದ್ದೆಡೆ ಕೊಂಡೊಯ್ಯಬಹುದು, ಜತೆಗೆ ನಿಮ್ಮ ಮೊಬೈಲ್, ಟ್ಯಾಬ್‍ಗಳಿಗೆ ಅಳವಡಿಸಬಹುದು. ಕೆಲ ಕ್ಯಾಮೆರಾಗಳಿಗೂ ಅಳವಡಿಸುವ ಸೌಲಭ್ಯವಿರುತ್ತದೆ. ಇದರ ಸ್ಕ್ರೀನ್ ಎಲ್‍ಈಡಿ ಇಂದ ಕೂಡಿದ್ದರಾಗಿದ್ದರೂ, ಮಾಮೂಲಿ ಎಲ್‍ಈಡಿ ಯಲ್ಲಿ ಬರುವ ಕ್ವಾಲಿಟಿ ಇದರಲ್ಲಿ ಸಿಗುವುದಿಲ್ಲ. ಇವುಗಳು ಏನಿದ್ದರೂ ಕಡಿಮೆ ಗಾತ್ರದ ರೂಮುಗಳಿಗೆ ಸೀಮಿತ. ಇದರಲ್ಲಿನ ಇನ್ನೊಂದು ವಿಧದಲ್ಲಿ 60 ಇಂಚು ಸ್ಕ್ರೀನ್ ಸೌಲಭ್ಯವಿದ್ದು, ಇದಕ್ಕೆ ಒಂದಕ್ಕಿಂತಾ ಹೆಚ್ಚು ಉಪಕರಣಗಳನ್ನು ಜೋಡಿಸಬಹುದು. ಇವುಗಳು ಆಟವಾಡಲು ಎಲ್ಲಿಗೆ ಬೇಕಾದಲ್ಲಿ ತೆಗೆದುಕೊಂಡು ಹೋಗಲು ಉತ್ತಮ. ಈ ಉಪಕರಣ ಬ್ಯಾಟರಿ ಚಾಲಿತದ್ದಾಗಿರುತ್ತದೆ.
ಬಾಕ್ಸ್: ಸ್ಕ್ರೀನ್ ಅಳವಡಿಸುವಲ್ಲಿ ಆಗುವ ಕೆಲವು ದೋಷಗಳು:
1. ಕೀಸ್ಟೋನ್-
ಇದು ಸ್ಕ್ರೀನ್ ಅಳವಡಿಸುವಲ್ಲಿ ಬಳಸಲಾಗುವ ಸೈಂಟೀಫಿಕ್ ಟರ್ಮ್. ಪ್ರಾಜೆಕ್ಟರ್ ಲಂಬಾಕಾರದಲ್ಲಿ ಕೂಡಿಸದಿದ್ದಲಿ ಪರದೆಯ ಮೇಲೆ ಬರುವ ಚಿತ್ರವೂ ಸಹ ಆಯೂತಾಕಾರದಲ್ಲಿ ಕೂಡಿರುವುದಿಲ್ಲ. ಇದಕ್ಕೆ ಡಿಜಿಟಲ್ ಸ್ಕ್ರೀನ್ ದೋಷವೆನ್ನುತ್ತಾರೆ. ಬಹಳಷ್ಟು ಸ್ಕ್ರೀನ್‍ಗಳು ಉದ್ದ ಮತ್ತು ಅಗಲ ರೇಖೆಗಳ ಡಿಜಿಟಲ್ ಕೀ ಸ್ಟೋನ್ ಕರೆಕ್ಷನ್ ಕೊಡುತ್ತವೆ.
2. ಲ್ಯಾಂಪ್ ಲೈಫ್-
ಸ್ಕ್ರೀನ್ ಆಯ್ಕೆ ಮಾಡಿಕೊಳ್ಳುವಾಗ ಅದರ ಲ್ಯಾಂಪ್ ಲೈಫ್‍ನ ಬಗ್ಗೆ ಅರಿವಿರಬೇಕು. ಲ್ಯಾಂಪ್ ಲೈಫ್ ಎಂದರೆ ಎಷ್ಟರ ಮಟ್ಟದಲ್ಲಿ ಬಾಳಿಕೆ ಬರುತ್ತದೆ ಎಂಬುದರ ಅರ್ಥವಾಗಿರುತ್ತದೆ. ಕಡಿಮೆ ಲ್ಯಾಂಪ್ ಲೈಫ್ ಆದಲ್ಲಿ ನೀವು ಪದೇ ಪದೇ ಒಳಗಿನ ಲ್ಯಾಂಪನ್ನು ನೀವು ಬದಲಾಯಿಸಬೇಕಾಗಬಹುದು. ಇದರಿಂದ ನಿಮ್ಮ ಕಿಸೆಗೆ ಕತ್ತರಿ ಬೀಳುವುಸದಂತೂ ಗ್ಯಾರಂಟಿ ಹೀಗಾಗಿ ಜಾಸ್ತಿ ಅವಧಿಯಿರುವ ಲ್ಯಾಂಪ್ ಅನ್ನೇ ಸೂಕ್ತ ಮಾಡಿಕೊಳ್ಳಿ.
3. ಲೆಟರ್ ಬಾಕ್ಸಿಂಗ್-
ಇದು ಚಿತ್ರ ನಿರ್ಮಿಸುವಾಗ ಬಳಸುವ ಟರ್ಮ್. ಕೆಲವು ಸ್ಕ್ರೀನ್‍ಗಳು ಕ್ಯಾಮೆರಾದಲ್ಲಿ ಸೆರೆಹಿಡಿಯುವಾಗ ನಿರ್ಧಿಷ್ಟ ಕ್ರಮದ ರೇಷಿಯೋಗಳನ್ನು ಬಳಸುತ್ತವೆ. ಕೆಲವು ಜಾಸ್ತಿ ಬಳಸಿದರೆ ಇನ್ನು ಕೆಲವು ಶಾಟ್‍ಗಳು ಕಡಿಮೆ ರೇಷಿಯೋ ಬಳಸುತ್ತವೆ. ಹೀಗೆ ಕಡಿಮೆ ರೇಷಿಯೋ ಬಳಸಿದ ಚಿತ್ರಗಳಲ್ಲಿ ಮೇಲೆ ಕೆಳಗೆ ಕಪ್ಪು ಬಾರ್‍ಗಳು ಕಾಣುತ್ತವೆ. ಇವುಗಳನ್ನು ಲೆಟರ್ ಬಾಕ್ಸಿಂಗ್ ಎಂದು ಕರೆಯಲಾಗುತ್ತದೆ.
4. ಆ್ಯಸ್ಪೆಕ್ಟ್ ರೇಷಿಯೋ:
ಇದು ಚಿತ್ರದ ಉದ್ದ ಮತ್ತು ಅಗಲದ ಅಂತರ. ಇದು ಎರಡು ಕೋಲೋನ್(:)ಗಳಲ್ಲಿ ಬರೆಯಲಾಗುಯತ್ತದೆ. ಉದಾ: 16:9 ಎಂದು ಬಳಸಿದರೆ ಸ್ಕ್ರೀನ್‍ನ ಅಗಲ16 ಇಂಚು ಆದಲ್ಲಿ ಉದ್ದ 9 ಇಂಚು ಆಗಿರುತ್ತದೆ.
5. 3ಎಲ್‍ಸಿಡಿ:
ಮೂರು ಎಲ್‍ಸಿಡಿಗಳ ಸೌಲಭ್ಯ ಸ್ಕ್ರೀನ್ ಹೊಂದಿದ್ದರೆ ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳನ್ನು ಪ್ರತ್ಯೇಕಿಸುತ್ತದೆ. ಇವುಗಳಲ್ಲಿ ಉಜ್ವಲಿಸುವ ಬೆಳಕನ್ನು ಪ್ರಿಸಂಗಳಲ್ಲಿ ಸೆರೆಹಿಡಿದು, ಉತ್ತಮ ಗುಣಮಟ್ಟದ ಚಿತ್ರವನ್ನು ಮಾರ್ಪಾಡು ಮಾಡಲಾಗುತ್ತದೆ.
6. ಏಕದ್ವಾರ ಪರಿಣಾಮ(ಸಿಂಗಲ್ ಡೋರ್ ಎಫೆಕ್ಟ್):
ನೀವು ಪ್ರಾಜೆಕ್ಟರ್‍ನ ತುಂಬಾ ಹತ್ತಿರದಲ್ಲಿ ಕುಳಿತಿದ್ದರೆ, ಸ್ಕ್ರೀನ್‍ನಲ್ಲಿ ಕೊಂಚ ಅಡಚಣೆಯಾಗುತ್ತದೆ. ಇದಕ್ಕೆ ಏಕದ್ವಾರ ಪರಿಣಾಮ ಎಂದು ಕರೆಯಲಾಗುತ್ತದೆ.
7. ಆರ್ಟಿಫ್ಯಾಕ್ಟ್ಸ್:
ಇದು ಸಹ ಒಂದು ವೈಜ್ಞಾನಿಕ ಪದವಾಗಿದೆ. ಸರಿಯಾದ ರೀತಿಯಲ್ಲಿ ವೈರ್‍ಗಳನ್ನು ಅಳವಡಿಸಲಾಗಿಲ್ಲವೆಂದರೆ, ಕಡಿಮೆ ರೆಸಲ್ಯೂಷನ್, ಟ್ರಾನ್ಸ್‍ಮಿಷನ್‍ಗಳಲ್ಲಿನ ತೊಂದರೆಗಳಿಂದಾಗಿ ಸ್ಕ್ರೀನ್‍ನಲ್ಲಿ ಲೋಪದೋಷಗಳು ಉಂಟಾಗಿದ್ದಲ್ಲಿ ಆರ್ಟಿಫ್ಯಾಕ್ಟ್ ಎಂದು ಕರೆಯಲಾಗುತ್ತದೆ.

  •  ವಿಶು

POPULAR  STORIES :

ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ

ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??

ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!

ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?

ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?

ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!

ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!

LEAVE A REPLY

Please enter your comment!
Please enter your name here