ದಿ ಅನ್ ಟೋಲ್ಡ್ ಸ್ಟೋರಿ… ಈ ಹೆಸರನ್ನ ನೀವು ಕೇಳಿರ್ತಿರಿ.. ಸದ್ಯಕ್ಕೆ ಈ ಚಿತ್ರ ಜೋರಾದ ಸುದ್ದಿಯನ್ನ ಮಾಡ್ತಿದೆ.ಇನ್ನೆರಡು ತಿಂಗಳಲ್ಲಿ ರಿಲೀಸ್ ಆಗಲಿರೋ ಈ ಚಿತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಜೀವನದ ಕುರಿತಾಗಿ ತಿಳಿಸಲಾಗುತ್ತೆ. ಈಗಾಗ್ಲೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನ ಮಾಡಿದ ಸಾಕಷ್ಟು ಮಂದಿಯ ಜೀವನ ಚಲನಚಿತ್ರವಾಗಿ ಬಂದಿದೆ. ಮಹೇಂದ್ರ ಸಿಂಗ್ ಧೋನಿಯ ಬದುಕಿನ ಕುರಿತಾದ ಈ ಚಿತ್ರವೂ ಭರ್ಜರಿ ಸಕ್ಸಸ್ ಪಡೆಯುವ ವಿಶ್ವಾಸದಲ್ಲಿದೆ.
ಧೋನಿ ಬದುಕಿನಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿಲ್ಲ. ರೈಲ್ವೆ ಕಲೆಕ್ಟರ್ ಆಗಿದ್ದ ಧೋನಿ ಕ್ರಿಕೆಟರ್ ಆಗಿ ಬೆಳೆದು ಬಂದ ಕಥೆಯೊಟ್ಟಿಗೆ ಧೋನಿಯ ಲವ್ ಕುರಿತಾದ ಸೀನ್ ಗಳು ಈ ಚಿತ್ರದಲ್ಲಿ ಬರಲಿದೆ. ಅದ್ರಲ್ಲೂ ಧೋನಿ ಈವರೆಗೆ ಯಾರಿಗೂ ಹೇಳದೆ ,ಗುಟ್ಟಾಗಿ ಇಟ್ಟುಕೊಂಡಿದ್ದ ಫಸ್ಟ್ ಲವ್ ಕುರಿತಾದ ವಿಷಯಗಳು ತೆರೆಯ ಮೇಲೆ ಅಪ್ಪಳಿಸಲಿದೆ.
ಈ ಚಿತ್ರದಲ್ಲಿ ಮಾಹಿಯ ದುರಂತ ಕಥೆಯೊಂದನ್ನ ಹೇಳಲಾಗಿದೆ. ಇದು ಅತ್ಯಂತ ಭಾವನಾತ್ಮಕವಾಗಿರೋ ಕಥೆಯಾಗಿ ಕಾಣಿಸಿಕೊಳ್ಳಲಿದೆ.ಮಹೇಂದ್ರ ಸಿಂಗ್ ಧೋನಿ ಈ ವಿಷಯವನ್ನ ಯಾರಿಗೂ ತಿಳಿಸದೇ ಇರೋದ್ರಿಂದ ಈ ಚಿತ್ರಕ್ಕೆ ಧೋನಿ ದಿ ಅನ್ ಟೋಲ್ಡ್ ಸ್ಟೋರಿ ಅಂತಾ ಹೆಸರನ್ನ ಇಡಲಾಗಿದೆ. ಧೋನಿಯ ಮೊದಲ ಪ್ರೀತಿಯ ಕುರಿತಾಗಿಯೇ ಈ ಚಿತ್ರ ಸಾಗುತ್ತೆ. ಇದೇ ಈ ಸಿನಿಮಾದ ಪ್ರಮುಖ ಹೈಲೇಟ್ಸ್ ಆಗಿದೆ.
20 ವರ್ಷದವರಿದ್ದಾಗ ಧೋನಿ ಒಂದು ಹುಡುಗಿಯನ್ನ ಇಷ್ಟ ಪಡ್ತಾರೆ. ಆ ಹುಡಿಯ ಹೆಸರು ಪ್ರಿಯಾಂಕಾ ಝಾ. ನಾವು ಅಂದುಕೊಂಡಂತೆ ಧೋನಿ, ಸಾಕ್ಷಿ ಸಿಂಗ್ ಅವರನ್ನ ಮೊದಲು ಇಷ್ಟಪಟ್ಟಿರಲಿಲ್ಲ. ಆದ್ರೆ ಪ್ರೀತಿ ದುರಂತದಲ್ಲಿ ಅಂತ್ಯಗೊಂಡಾಗ ಮಾಹಿ ಸಾಕ್ಷಿಸಿಂಗ್ ಅವರನ್ನ ಮದುವೆಯಾಗಲು ಒಪ್ಪಿಕೊಳ್ತಾರೆ, 2003 ರಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತ ಎ ತಂಡವನ್ನ ಕೂಡಿಕೊಳ್ತಾರೆ. ಆ ವೇಳೆಯಲ್ಲಿ ಕ್ರಿಕೆಟ್ ಆಡೋದಕ್ಕೆ ಮಹೇಂದ್ರ ಸಿಂಗ್ ಧೋನಿ ಬೇರೆ ಬೇರೆ ಕಡೆಗಳಲ್ಲಿ ಹೋಗುತ್ತಾ ಇರುತ್ತಾರೆ. ಈ ವೇಳೆಯಲ್ಲಿ ತಮ್ಮ ಪ್ರಥಮ ದರ್ಜೆಯ ಕ್ರಿಕೆಟ್ ಪಂದ್ಯವನ್ನ ಮುಗಿಸಿ ಬರುವಷ್ಟರಲ್ಲಿ ಪ್ರಿಯಾಂಕಾ ಝಾ ಆಕ್ಸಿಟೆಂಡ್ ನಲ್ಲಿ ನಿಧನವನ್ನ ಹೊಂದಿರ್ತಾರೆ. ಇದೇ ಕಥೆಯನ್ನ ಆಧರಿಸಿ ಇಡೀ ಸಿನಿಮಾ ಸಾಗುತ್ತೆ.
ಮಹೇಂದ್ರ ಸಿಂಗ್ ಜೀವನದ ಕುರಿತಾದ ಅದೆಷ್ಟೋ ಸಂಗತಿಗಳು ಈ ಚಿತ್ರದಲ್ಲಿ ಬರಲಿದೆ. ಇನ್ಯಾವ ವಿಷಯಗಳು ಈ ಚಿತ್ರದಲ್ಲಿ ಸೇರಿದೆ ಅನ್ನೋದನ್ನ ನೋಡೋದಕ್ಕೆ ಎಂ.ಎಸ್.ಧೋನಿ ಅನ್ ಟೋಲ್ಡ್ ಸ್ಟೋರಿ ಬಿಡುಗಡೆಯಾಗೋ ವರೆಗೂ ಕಾಯಲೇ ಬೇಕು.
- ಶ್ರೀ
POPULAR STORIES :
ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!