ವರ್ಷದ ಪುಟ್ಟ ನಕ್ಷತ್ರವಾಗಿದ್ದ, ಬದುಕಿ ಬಾಳಬೇಕಿದ್ದ ಮಗು ಸಮನ್ವಿ, ಈ ಪ್ರಪಂಚವನ್ನೇ ಬಿಟ್ಟು ಹೋಗಿದೆ. ಈ ಘಟನೆ ಸಂಭವಿಸಿದ್ದು, ನನ್ನಮ್ಮ ಸೂಪರ್ ಸ್ಟಾರ್ ವೀಕ್ಷಕರಿಗೆ ಮತ್ತು ಆಕೆಯ ಅಭಿಮಾನಿಗಳಿಗೆ ಬಹಳ ನೋವನ್ನು ತಂದಿದೆ. ಸಮನ್ವಿ ಎಲ್ಲರ ಮೆಚ್ಚಿನ ಸ್ಪರ್ಧಿಯಾಗಿದ್ದಳು.
ಈಕೆಯ ತಾಯಿ ಅಮೃತಾ. ಅಮೃತಾ ಅವರು ಮಗಳು ಸಮನ್ವಿ ಜೊತೆ ಶಾಪಿಂಗ್ ಗೆ ಎಂದು ಹೋಗುವಾಗ, ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿ ಬಳಿ ಈ ದುರ್ಘಟನೆ ನಡೆದಿದೆ. ಅಮ್ಮ ಮಗಳು ಇಬ್ಬರು ಸಹ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಆಗ ಒಂದು ಟಿಪ್ಪರ್ ಲಾರಿ ಬಂದು ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಸಮನ್ವಿ ಇಹಲೋಕ ತ್ಯಜಿಸಿದ್ದಾಳೆ. ಅಮೃತಾ ಅವರಿಗೆ ಗಾಯಗಳಾಗಿದ್ದು ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಇಂದು ಸಮನ್ವಿ ಅಂತಿಮ ವಿಧಿ ವಿಧಾನಗಳು ನಡೆದಿದೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಟಿಪ್ಪರ್ ಲಾರಿ ಡ್ರೈವರ್ ಅನ್ನು ಬಂಧಿಸಿದ್ದು, ಆತನನ್ನು ತೀವ್ರವಾಗಿ ವಿಚಾರಿ ಸಿದಾಗ, ಒಂದು ಆಟೋವನ್ನು ಓವರ್ ಟೇಕ್ ಮಾಡಲು ಹೋಗಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿರುವುದಾಗಿ ಆತ ಒಪ್ಪಿಕೊಂಡಿ ದ್ದಾನೆ. ಆತನ ಹೆಸರು ಮುಂಚೆಗೌಡ. ಪೊಲೀಸರು ಆತನನ್ನು ಬಂಧಿಸಿ, ಮುಂದಿನ ಕೆಲಸಗಳನ್ನು ಮಾಡುತ್ತಾರೆ. ಒಂದು ಆಟೋ ಓವರ್ ಟೇಕ್ ಮಾಡಲು ಹೋಗಿ ಆ ಪುಟ್ಟ ಕಂದಮ್ಮನ ಪ್ರಾಣವೇ ಹೋಗಿದೆ. ಇದು ಎಂತಹ ವಿಪರ್ಯಾಸ.