ಸಂಕ್ರಾಂತಿ ಪೂಜೆ ಮಾಡ್ತಿದ್ದ ಸ್ವಾಮೀಜಿಗೆ ಹೃದಯಾಘಾತ

Must read

ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಮಹಾಗಾಂವ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ನದಿಯಲ್ಲಿ ಸಂಕ್ರಾಂತಿ ಸ್ನಾನ ಮಾಡುವ ವೇಳೆಯಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.

ಮಕರ ಸಂಕ್ರಾಂತಿ ಪ್ರಯುಕ್ತ ಶಹಾಬಾದ ತಾಲೂಕಿನ ಹೊನಗುಂಟಾ ಗ್ರಾಮದ ಭೀಮಾ -ಕಾಗಿಣ ನದಿಯ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀಗಳಿಗೆ ಹೃದಯಾಘಾತವಾಗಿದೆ.

ಕೂಡಲೇ ಅವರನ್ನು ನದಿಯಿಂದ ಹೊರಗೆ ಕರೆ ತರುವಷ್ಟರಲ್ಲಿ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ. 58 ವರ್ಷದ ಶ್ರೀಗಳ ಹಠಾತ್ ನಿಧನಕ್ಕೆ ಭಕ್ತರು ಕಂಬನಿ ಮಿಡಿದಿದ್ದಾರೆ.

- Advertisement -spot_img

More articles

- Advertisement -spot_img

Latest article