ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಟೆಸ್ಟ್ ಮ್ಯಾಚ್ ಗಳಿಂದ ಸನ್ಯಾಸ ಸ್ವೀಕರಿಸಿ,ದೂರ ಉಳಿದ ಮೇಲೆ ಜಾಹೀರಾತಿನ ಪ್ರಪಂಚಕ್ಕೆ ತೆರಳಿ ಭಾರೀ ಹೆಸರು ಮಾಡಿದ್ದರು,ಆದ್ರೆ ಅವ್ರ ಪಾಲಿನ ದುರಾದೃಷ್ಟವೆಂಬಂತೆ ಈಗ ಇಲ್ಲೂ ಅವ್ರಿಗೆ ನಿರಾಶೆ ಕಾದಿದೆ ನೋಡಿ.!ಹೌದು!ಅವ್ರ ಜೊತೆ ಜಾಹಿರಾತಿಗಾಗಿ ಕರಾರು ಮಾಡಿಕೊಂಡಿದ್ದ ಸ್ಪಾರ್ಟನ್ ಸ್ಫೋರ್ಟ್ಸ್ ಕಂಪನಿಯು ಅವರಿಗೆ ಸಲ್ಲಬೇಕಾಗಿದ್ದ ಸುಮಾರು 20 ಕೋಟಿ ರೂಪಾಯಿಗಳಷ್ಟು ಮೊತ್ತದ ವ್ಯವಹಾರದಲ್ಲಿ ಮೋಸವೆಸಗಿದೆ.
ಮಾಧ್ಯಮಕ್ಕೆ ಬಂದ ವರದಿ ಪ್ರಕಾರ,ಆಸ್ಟ್ರೆಲಿಯಾ ಕಂಪನಿಯಾದ ಸ್ಪಾರ್ಟನ್ ಸ್ಫೋರ್ಟ್ಸ್,ಧೋನಿಯವರ ಜೊತೆ ಸುಮಾರು 13 ಕೋಟಿಗೂ ಹೆಚ್ಚಿನ ವ್ಯವಹಾರಕ್ಕಾಗಿ ಒಪ್ಪಂದ ಮಾಡಿಕೊಂಡಿತ್ತು,ಹಾಗೂ ಈ ಒಪ್ಪಂದವು 3 ವರುಷಗಳ ಅವಧಿಯದ್ದಾಗಿತ್ತು.ಇದರ ಪ್ರಕಾರ ಕಂಪನಿಯು ಧೋನಿಯವರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಪೇಮೆಂಟ್ ಮಾಡಬೇಕಾಗಿತ್ತು,ಇದಲ್ಲದೆ ಕಂಪನಿಯು ಧೋನಿಯವರ ಬ್ಯಾಟ್ ಮೇಲೆಯೂ ಒಪ್ಪಂದ ಮಾಡಿಕೊಂಡಿತ್ತು,ಹಾಗಾಗಿ ಕಂಪನಿಯಿಂದ ಬರಬೇಕಾಗಿದ್ದ ಒಟ್ಟು ಮೊತ್ತವು 20 ಕೋಟಿ ರೂಪಾಯಿಗೂ ಹೆಚ್ಚಿನದ್ದಾಗಿದೆ ಎಂದು ಹೇಳಲಾಗುತ್ತಿದೆ.
ಧೋನಿಯವರಿಗೆ ಕಾನೂನು ಸಲಹೆ ನೀಡುವ ಸಂಸ್ಥೆಯಾಗಿರೋ ರೀತಿ ಸ್ಫೋರ್ಟ್ಸ್ ನ ಸಲಹೆಗಾರರಾದ ಕುಣಾಲ್ ಶರ್ಮಾ ಹೇಳೋ ಪ್ರಕಾರ,ಸ್ಪಾರ್ಟನ್ ಸ್ಫೋರ್ಟ್ಸ್ ಇಲ್ಲಿಯತನಕ ಧೋನಿಯವರಿಗೆ ಕೇವಲ ನಾಲ್ಕು ಹಂತದ ಪೇಮೆಂಟ್ ಅಷ್ಟನ್ನೇ ಮಾಡಿರುವುದು,ಹಾಗೂ ಡೀಲ್ 2013 ರಲ್ಲಿ ಆಗಿತ್ತು,ಅದ್ರೆ, 2016 ರ ತನಕ ಕಂಪನಿಯು ಕೇವಲ ನಾಲ್ಕು ಹಂತದ ಪೇಮೆಂಟ್ ಗಳನ್ನಷ್ಟೇ ಮಾಡಿದೆ ಎಂದು ಹೇಳುತ್ತಾರೆ.
ಇಲ್ಲಿ ಯಾವುದೂ ಸರಿಯಾಗಿಲ್ಲ,ಎಲ್ಲಾ ಸಮಸ್ಯೆಯೂ ಆದಷ್ಟು ಬೇಗನೆ ಪರಿಹಾರವಾಗುವಂತಾಗಬೇಕು ಎಂದು ರೀತಿ ಸ್ಫೋರ್ಟ್ಸ್ ನ ಮಾಲಿಕರಾದ ಅರುಣ್ ಪಾಂಡೆ ಹೇಳುತ್ತಾರೆ.
ಈ ವಿಷಯವಾಗಿ ಸ್ಪಾರ್ಟನ್ ಸ್ಫೋರ್ಟ್ಸ್ ಗೆ ಕರೆ ಮಾಡಲಾಗಿದೆಯಾದರೂ, ಅಲ್ಲಿಂದ ಯಾವುದೇ ತರಹದ ಪ್ರತಿಕ್ರಿಯೆ ಇದುವರೆಗೂ ಬಂದಿಲ್ಲ.
- ಸ್ವರ್ಣಲತ ಭಟ್
POPULAR STORIES :
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…
ಸಾಹಸ ಸಿಂಹನ 201 ನೇ ಚಿತ್ರ- ಆಗಸ್ಟ್ 15 ಕ್ಕೆ ಆಡಿಯೋ ರಿಲೀಸ್
ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?