ಬೆಂಗಳೂರು : ಬೆಂಗಳೂರಿನ ಅವೆನ್ಯೂ ರಸ್ತೆಯ ಖಾದಿ ಭಂಡಾರ್ ಮಳಿಗೆಯಲ್ಲಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಂಚೆಗಳನ್ನು ಖರೀದಿ ಮಾಡಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಪಂಚೆಗಳನ್ನು ಖಾದಿ ಭಂಡಾರದಲ್ಲಿ ಖರೀದಿ ಮಾಡಿದ್ದು, ಒಂದು ಪಂಚೆಗೆ 650 ರೂಪಾಯಿ ಕೊಟ್ಟಿದ್ದಾರೆ. ಇನ್ನೂ ಬಟ್ಟೆಗಳಿಗೆ ಡಿಸ್ಕೌಂಟ್ ಇಲ್ವ ಅಂತ ಅಂಗಡಿಯವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದ್ದು, ಈ ಹಿನ್ನೆಲೆ ಅಂಗಡಿಯವರು ಸಿದ್ದರಾಮಯ್ಯ ಅವರು ಖರೀದಿ ಮಾಡಿದ ಬಟ್ಟೆಗೆ 40% ಡಿಸ್ಕೌಂಟ್ ಕೊಟ್ಟಿದ್ದಾರೆ. ಇನ್ನೂ ಸಿದ್ದರಾಮಯ್ಯ ಅವರು ಬಟ್ಟೆ ಖರೀದಿಗೆ ಬರುತ್ತಿದ್ದಂತೆ ಅಲ್ಲಿದ್ದ ಸ್ಥಳೀಯರು, ವೀಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಎಲ್ಲೆಡೆ ವೈರಲ್ ಆಗಿದೆ.
ಸಿದ್ದರಾಮಯ್ಯ ಖರೀದಿ ಮಾಡಿದ ಪಂಚೆ ರೇಟ್ ಗೊತ್ತಾ ?
Date: