No menu items!
8.6 C
Munich
Wednesday, April 15, 2026

ಬಾಂಬೆ ಹೈಕೋರ್ಟ್ ಗೆ ಬಂತು ಹಾವು, ವೈರಲ್ ಆಯ್ತು ವಿಡಿಯೋ!

Must read

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎನ್‌ಆರ್ ಬೋರ್ಕರ್ ಅವರ ಕೊಠಡಿಯಲ್ಲಿ ಇಂದು ಬೆಳಗ್ಗೆ ಹಾವೊಂದು ಪತ್ತೆಯಾಗಿದೆ. 4.5 ರಿಂದ 5 ಅಡಿ ಉದ್ದದ ಮತ್ತು ವಿಷಕಾರಿಯಲ್ಲದ ಹಾವು ಇದಾಗಿದೆ.

ವರ್ಚುವಲ್ ಮೋಡ್ ಮೂಲಕ ವಿಚಾರಣೆಗಳನ್ನು ನಡೆಸಲಾಗುತ್ತಿರುವುದರಿಂದ, ಇತ್ತೀಚಿನ ದಿನಗಳಲ್ಲಿ ಬಾಂಬೆ ಹೈಕೋರ್ಟ್‌ಗೆ ಯಾವುದೇ ವಕೀಲರು ಬರುತ್ತಿಲ್ಲ. ಹೀಗಿರುವಾಗ ಶುಕ್ರವಾರ ದಿಢೀರ್‌ ಬಾಂಬೆ ಹೈಕೋರ್ಟ್‌ನಲ್ಲಿ. ಇದು ಪತ್ತೆಯಾದ ವೇಳೆ ನ್ಯಾಯಾಧೀಶರು ಕೊಠಡಿಯಲ್ಲಿ ಇರಲಿಲ್ಲ. ತಕ್ಷಣವೇ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಲಾಯ್ತು. ಪೊಲೀಸರು ಎನ್‌ಜಿಒವೊಂದರ ಉರಗ ರಕ್ಷಕನನ್ನು ಕರೆ ತಂದಿದ್ದಾರೆ. ಸ್ಥಳಕ್ಕೆ ಬಂದ ಉರಗ ರಕ್ಷಕ ಹಾವನ್ನು ಹಿಡಿದು, ಸೂಕ್ತ ಸ್ಥಳದಲ್ಲಿ ಅದನ್ನು ಬಿಟ್ಟಿದ್ದಾರೆ.

ಅದರ ವಿಡಿಯೋ ಇಲ್ಲಿದೆ ನೋಡಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article