ದೊಡ್ಡ ದೊಡ್ಡ ಸೆಲೆಬ್ರೆಟಿಗಳೆಂದರೆ ಹಾಗೆ ಅಲ್ವಾ ಅವರ ಹಿಂದೆ ಸದಾ ಅಭಿಮಾನಿಗಳು, ಮಾಧ್ಯಮ ವರ್ಗಗಳು ಇದ್ದೇ ಇರುತ್ತಾರೆ. ಅವರುಗಳಿಂದ ತಪ್ಪಿಸಿಕೊಳ್ಳುವುದೇ ಅವರ ದೊಡ್ಡ ತಲೆನೋವಿನ ಕೆಲಸ ನೋಡಿ. ಅದೇ ಸನ್ನಿವೇಶ ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ರವರಿಗೆ ವಿಮಾನ ನಿಲ್ದಾಣದ ಬಳಿ ನಡೆದಿದೆ.
ಸೆಲೆಬ್ರೆಟಿಗಳ ಫೊಟೊ ತೆಗೆಯುವುದು ತಪ್ಪೇನಿಲ್ಲ. ಆದರೆ ಈ ವೇಳೆ ಸಂಭವಿಸುವ ನೂಕು ನುಗ್ಗಲುಗಳಿಂದ ಅವಘಡಕ್ಕೆ ಕಾರಣವಾದರೆ?
ಇದು ನಟಿ ಐಶ್ವರ್ಯ ರೈ ಹಾಗೂ ಅವರ ತಾಯಿಗೆ ಆದ ಅನುಭವ. ಅವರು ತಾಯಿ ಬಿಂದ್ರಾ ರಾಯ್ ಹಾಗೂ ಮಗಳು ಆರಾಧ್ಯ ಜೊತೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಬರುವ ವೇಳೆ, ಅಲ್ಲಿ ನೆರೆದಿದ್ದ ಮಾಧ್ಯಮದವರು ಇವರ ಫೋಟೋ ಮತ್ತು ಬೈಟ್ ಪಡೆಯಲು ಮುಂದಾಗಿದ್ದು, ಈ ವೇಳೆ ವರಧಿಗಾರನೊಬ್ಬ ಐಶ್ ಹತ್ತಿರಕ್ಕೆ ಬಂದಿದ್ದಾರೆ. ಅದನ್ನು ಗಮನಿಸಿದ ಐಶ್ವರ್ಯ ರೈ ಅವರ ಬಾಡಿಗಾರ್ಡ್ ಆತನನ್ನು ಹಿಂದಕ್ಕೆ ಸರಿಸುವ ಪ್ರಯತ್ನ ಮಾಡುವ ವೇಳೆ ನೂಕುನುಗ್ಗಲು ಉಂಟಾಗಿದೆ.
ವರಧಿಗಾರ ನಿಯಂತ್ರಣ ತಪ್ಪಿ ತಪ್ಪಿ ಐಶ್ವರ್ಯ ರೈ ಅವರ ತಾಯಿಯ ಮೇಲೆ ಬಿದ್ದಿದ್ದಾರೆ ಈ ವೇಳೆ ತಾಯಿಯ ತಲೆಗೆ ಪೆಟ್ಟಾಗಿ ರಕ್ತ ಸುರಿಯತ್ತು. ಈ ಗಲಾಟೆಯಿಂದ ಹೇಗೋ ತಪ್ಪಿಸಿಕೊಂಡು ತಕ್ಷಣ ಕಾರು ಹತ್ತಿದ್ದಾರೆ ನಟಿ ಐಶ್ವರ್ಯ.
POPULAR STORIES :
ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!
ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???
ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!
ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.
ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!