ಬೆಂಗಳೂರು : ನಾಳೆಯಿಂದ ಜಾರಿಯಾಗಬೇಕಿದ್ದ ನೈಸ್ ರಸ್ತೆಯ ಉದ್ದೇಶಿತ ದರ ಏರಿಕೆ ಮುಂದೂಡಿಕೆ ಮಾಡಲಾಗಿದೆ. ಬೆಂಗಳೂರಿನ ನೈಸ್ ರಸ್ತೆ ಟೋಲ್ ವನ್ನು ಕೂಡ ಹೆಚ್ಚಳ ಮಾಡಲಾಗುತ್ತದೆ.
ಪರಿಷ್ಕೃತ ದರ ನಾಳೆಯಿಂದ ಜಾರಿಗೆ ಬರಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಹೊಸೂರು-ಬನ್ನೇರುಘಟ್ಟ ರಸ್ತೆಯಲ್ಲಿ ನೀವು ಸಂಚರಿಸುವ ಬೈಕ್ಗಳಿಗೆ 20 ರೂ. ಟೋಲ್ ದರ, ಕಾರುಗಳಿಗೆ ಟೋಲ್ ದರ 45 ರೂ.ಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿತ್ತು. ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯಲ್ಲಿ ಸಂಚರಿಸುವ ಕಾರ್ಗಳಿಗೆ 35, ಬೈಕ್ಗಳಿಗೆ 12 ರೂ., ಕನಕಪುರ ರಸ್ತೆಯಿಂದ ಕ್ಲವರ್ ಲೀಫ್ ರಸ್ತೆಯಲ್ಲಿ ಸಂಚರಿಸುವ ಕಾರ್ಗಳಿಗೆ 25ರೂ., ಬೈಕ್ಗಳ ಟೋಲ್ ದರ 8 ರೂ.ಗೆ ಏರಿಸುವುದಾಗಿ ನೈಸ್ ಸಂಸ್ಥೆ ತಿಳಿಸಿತ್ತು. ಆದ್ರೆ ಈ ದರ ಏರಿಕೆಯನ್ನು ಸಂಸ್ಥೆ ಮುಂದೂಡಿದೆ..