ಬೆಂಗಳೂರಿನಲ್ಲಿ ವಿವಿಧ ವಿದ್ಯುತ್ ಕಾಮಗಾರಿ ಹಿನ್ನಲೆ ನಾಳೆ ಬೆಂಗಳೂರಿನ ಅರ್ಧ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಸ್ಕಾ ಮಾಹಿತಿ ನೀಡಿದ್ದು, ದಿನಾಂಕ 21-07-2022ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎನ್ ಜಿ ಇ ಎಫ್ ಸ್ಟೇಷನ್ ನಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಾಳೆ ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಎಸ್ ಎಂ ವಿ ಬಿ ರೈಲ್ವೆ ನಿಲ್ದಾಣ, ಜೋಗುಪಾಳ್ಯ ಇಲ್ಟೆ ತೊಪ್ಪು, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಜೋಗುಪಾಳ್ಯ ಮುಖ್ಯ ರಸ್ತೆ, ರಂಕ ಕೋರ್ಟ್, ಅರ್ಟಿಲರಿ ರಸ್ತೆ, ಗೌತಮ ಪುರ, ಕೇಂಬ್ರಿಡ್ಜ್ ರಸ್ತೆ, ಆರ್ ಎಂ ಜಡ್ ಮಿಲ್ಲೇನಿಯ, ಹಲಸೂರು, ಹಲಸೂರು ರಸ್ತೆ ಭಾಗದಲ್ಲಿ ಪವರ್ ಕಟ್ ಆಗಲಿದೆ. ಇದಲ್ಲದೇ ಕೆನರಾ ಬ್ಯಾಂಕ್, ಅಜಂತಾ ಟ್ರಿನಿಟಿ ಸರ್ಕಲ್, ಇಂದಿರಾ ನಗರ 1ನೇ ಹಂತ, ಹೆಚ್ ಎ ಎಲ್ 2ನೇ ಹಂತ, ಹಲಸೂರು, ಹಳೇ ಮದ್ರಾಸ್, ಬೆನ್ನಿಗಾನ ಬಳ್ಳಿ, ಎ.ನಾರಾಯಣಪುರ, ಬಿ.ನಾರಾಯಣಪುರ, ಕಗ್ಗದಾಸಪುರ, ಆಕಾಶನಗರ, ಪೈ ಲೇಔಟ್ ನಲ್ಲಿಯೂ ವಿದ್ಯುತ್ ಇರೋದಿಲ್ಲ. ಗಂಗಪ್ಪ ಲೇಔಟ್, ಬಿಸಿ ಎಸ್ಟೇಟ್ ಸದಾನಂದನಗರ, ಕಸ್ತೂರಿನಗರ, ಕೃಷ್ಣಪಾಳ್ಯ ಪ್ರದೇಶದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವೆರೆಗ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.