ಸಾಮಾಜಿಕ ಜಾಲತಾಣ ಎನ್ನುವುದು ಈಗಿನ ಕಾಲದಲ್ಲಿ ಎಲ್ಲರೂ ಬಳಸೇ ಬಳಸುತ್ತಾರೆ . ಸೆಲಬ್ರೇಟಿಗಳ ಪ್ರತಿ ಅಪ್ ಡೇಟ್ ಸಿಗೋದು ಇದರಲ್ಲೆ . ಈಗ
ಕಾಲಿವುಡ್ ನಟ ಧನುಷ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ತಮಿಳು ಸಿನಿಮಾರಂಗ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ದಾಖಲೆ ಮಾಡಲಾಗಿದೆ. ಅಭಿಮಾನಿಗಳು, ಆಪ್ತರು, ಗೆಳೆಯರ ನಡುವೆ ಸದಾ ಸಂಪರ್ಕದಲ್ಲಿರುವ ಧನುಷ್ ಸಾಮಾಜಿಕ ಮಾಧ್ಯಮಗಳನ್ನು ದಾಖಲೆ ಬರೆದಿದ್ದಾರೆ . ಸದ್ಯ ಧನುಷ್, ಟ್ವಿಟರ್‌ನಲ್ಲಿ 1 ಕೋಟಿ 10 ಲಕ್ಷ ಜನ ಫಾಲೋವರ್‌ಗಳನ್ನು ಹೊಂದುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇಷ್ಟೂ ಜನ ಫಾಲೋವರ್‌ಗಳನ್ನು ಹೊಂದಿರುವ ತಮಿಳಿನ ಏಕೈಕ ನಟ ಮತ್ತು ದಕ್ಷಿಣ ಸಿನಿಮಾ ರಂಗದಲ್ಲೇ ಎರಡನೇ ನಟ ಎಂಬ ದಾಖಲೆಗೆ ಧನುಷ್ ಪಾತ್ರರಾಗಿದ್ದಾರೆ.
ಧನುಷ್ ಫೇಸ್‌ಬುಕ್‌ನಲ್ಲಿ 69 ಲಕ್ಷ ಮತ್ತು ಇನ್‌ಸ್ಟಾಗ್ರಾಂನಲ್ಲಿ 49 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ. ಧನುಷ್ ಬಳಸುವ ಸಾಮಾಜಿಕ ಜಾಲತಾಣಗಳ ಪೈಕಿ ಟ್ವಿಟರ್‌ನಲ್ಲಿ ಅತಿಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದಾರೆ ಧನುಷ್
Date: