ಮಂಕು ಭಾಯ್ ಫಾಕ್ಸಿ ರಾಣಿ’ ಬಿಡುಗಡೆಗೆ ರೆಡಿ..

Must read

ಮಂಕು ಭಾಯ್ ಫಾಕ್ಸಿ ರಾಣಿ ವಿಭಿನ್ನ ಹೆಸರು ಇಟ್ಟಿಕೊಂಡು ಬರುತ್ತಿರುವ ಸಿನಿಮಾ . ಮಂಗಳೂರಿನ ಪ್ರತಿಭಾನ್ವಿತ ಯುವ ಸಿನಿಮೋತ್ಸಾಹಿಗಳ ತಂಡವೇ ಸೇರಿಕೊಂಡು ತಯಾರಿಸಿರುವ ಈ ಚಿತ್ರ ಸೆನ್ಸಾರ್ ಪಾಸಾಗಿ ರಿಲೀಸ್ ಗೆ ಸಿದ್ದವಾಗಿದೆ .

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ಬಣ್ಣ ಹಚ್ಚಿದ್ದು, ಇವರಿಗೆ ಜೋಡಿಯಾಗಿ ಬ್ರಹ್ಮಗಂಟು ಸೀರಿಯಲ್ ಕಲಾವಿದೆ ಗೀತಾ ಭಾರತಿ ಭಟ್ ನಟಿಸುತ್ತಿದ್ದಾರೆ. ಖ್ಯಾತ ಕಲಾವಿದ ಪ್ರಕಾಶ್‌ ತೂಮಿನಾಡ್‌, ಪಂಚಮಿ ರಾವ್‌, ಅರ್ಜುನ್‌ ಕಜೆ ತಾರಾಬಳಗದಲ್ಲಿದ್ದಾರೆ. ತುಳು ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಗಗನ್ ಎಂ ಈ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಲವ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಎಂ.ಕೆ .ಕೆ.ಷಹಜನ್‌ ಛಾಯಾಗ್ರಹಣ, ವಿನ್ಯಾಸ್‌ ಮದ್ಯ ಶಮೀರ್ ಮುಡಿಪು ಸಂಗೀತ ಹಾಗೂ ಸುಶಾಂತ್‌ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನವಿದೆ. ಜೋಶ್ವ ಜೈಶಾನ್ ಕ್ರಾಸ್ತ ನಿರ್ಮಾಣ ಮಾಡಿರುವ ಈ ಚಿತ್ರದ ಫಸ್ಟ್ ಟ್ರ್ಯಾಕ್ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಸೋನು‌ ನಿಗಂ ಕಂಠದಲ್ಲಿ ಮೂಡಿಬಂದಿರುವ ಮಿಂಚಂತೆ ಮಿನುಗುತಿರೊ ಎಂಬ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತಿದೆ.

- Advertisement -spot_img

More articles

- Advertisement -spot_img

Latest article