ದೂದ್ ಪೇಡಾ ದಿಗಂತ್ ಅಭಿನಯಿಸುತ್ತಿರುವ “ಎಡಗೈ ಅಪಘಾತಕ್ಕೆ ಕಾರಣ” ಸಿನಿಮಾ ಅಂಗಳದಿಂದ ಮತ್ತೊಂದು ಹೊಸ ಸಮಾಚಾರ ರಿವೀಲ್ ಆಗಿದೆ. ಚಿತ್ರತಂಡ ಭರದಿಂದ ಶೂಟಿಂಗ್ ನಡೆಸುತ್ತಿದ್ದು, ಇದೀಗ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಬಳಗಕ್ಕೆ ಪಂಚರಂಗಿ ಬ್ಯೂಟಿ ನಿಧಿ ಸುಬ್ಬಯ್ಯ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಸರಳವಾಗಿ ಮುಹೂರ್ತ ನೆರವೇರಿಸಿದೆ .
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಪಂಚರಂಗಿಯಲ್ಲಿ ದಿಗಂತ್ ಹಾಗೂ ನಿಧಿ ಸುಬ್ಬಯ್ಯ ಜೋಡಿ ಮೋಡಿ ಮಾಡಿದ್ರು . ಈ ಸಿನಿಮಾ ಇವರಿಬ್ಬರಿಗೂ ಬ್ರೇಕ್ ನೀಡಿತ್ತು. ಈ ಚಿತ್ರದ ನಂತ್ರ ನಿಧಿ ದಿಗಂತ್ ಮತ್ತೆ ಯಾವುದೇ ಚಿತ್ರದಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ . ಇದೀಗ ಹತ್ತು ವರ್ಷದ ನಂತರ ದಿಗಂತ್ ನಾಯಕನಾಗಿ ನಟಿಸುತ್ತಿರುವ ಎಡಗೈ ಅಪಫಾತ ಕಾರಣ ಚಿತ್ರದಲ್ಲಿ ನಿಧಿ ನಟಿಸುತ್ತಿದ್ದಾರೆ. ಈ ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ನಿರ್ದೇಶಕ ಸಮರ್ಥ್ ಕಡ್ಕೋಳ್ ನಿಧಿ ಪಾತ್ರ ಪ್ರೇಕ್ಷಕರಿಗೆ ಪಕ್ಕ ಮನರಂಜನೆ ನೀಡುತ್ತದೆ ಅಂತಾ ಹೇಳಿದ್ರು .
ಸಮರ್ಥ್ ಕಡ್ಕೋಳ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸಮರ್ಥ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ‘ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ವಿಶೇಷವಾದ ಸಬ್ಜೆಕ್ಟ್ ಹೊಂದಿದೆ. ಯಲಹಂಕ ಬಳಿಯ ಲಕ್ಷುರಿ ಅಪಾರ್ಟ್‌ಮೆಂಟ್ ಒಂದರಲ್ಲಿ ಈ ಸಿನಿಮಾದ ಚಿತ್ರೀಕರಣ ಶುಕ್ರವಾರದಿಂದ ಆರಂಭವಾಗಿದೆ. ದಿಗಂತ್ ಜೋಡಿಯಾಗಿ ನಾಯಕಿ ಧನು ಹರ್ಷ ನಟಿಸುತ್ತಿದ್ದಾರೆ. ಅಭಿಮನ್ಯು ಸದಾನಂದ್ ಛಾಯಾಗ್ರಾಹಣ, ರಾಹುಲ್ ವಿ ಪಾರ್ತವಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ.