No menu items!
13.5 C
Munich
Wednesday, April 22, 2026

ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ

Must read

ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಆರ್ ವಿ ದೇಶಪಾಂಡೆ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಭಾರತ್ ಜೋಡೋ ರಥ ಯಾತ್ರೆ ನಡೆಯುತ್ತಿದ್ದು, ಅದರಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಅಧ್ಯಕ್ಷ, ಸಿಎಲ್ಪಿ ನಾಯಕ, ಬಿಕೆ ಹರಿಪ್ರಸಾದ್ ಸೇರಿದಂತೆ ಎಲ್ಲರು ಇರಲಿದ್ದಾರೆ. ನಾವೆಲ್ಲರೂ ಸಂಘಟಿತರಾಗಿ ಒಟ್ಟಾಗಿ ಹೋಗ್ತೀವಿ. ಇನ್ನೂ ಕೆಲವೊಂದು ಸಲಹೆಗಳು ಭಿನ್ನವಾಗಿ ಇರ್ತಾವೆ. ಹಾಗಂತ ಅದನ್ನು ಗೊಂದಲ ಅಂತಾ ಹೇಳೋಕೆ ಆಗಲ್ಲ ಎಂದರು. ಇನ್ನೂ ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆಗೆ ಹೋಗ್ತಿದ್ದೇವೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೂಡಿ ಭಾರತ್ ಜೋಡೋ ಯಾತ್ರೆಯ ಪ್ರಚಾರ ಮಾಡ್ತಿದ್ದು, ಅನಾವಶ್ಯಕವಾಗಿ ಗೊಂದಲ ನಿರ್ಮಾಣ ಮಾಡೋದು ಸರಿಯಲ್ಲ ಎಂದರು. ಇನ್ನೂ ನನಗೆ ಭಾರತ್ ಜೋಡೋದಲ್ಲಿ ಜವಬ್ದಾರಿ ಕೊಟ್ಟಿಲ್ಲ ಅಂತಾ ಯಾರು ಹೇಳಿದ್ದು..? ನನಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಜವಬ್ದಾರಿ ಕೊಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಜೊತೆಯಲ್ಲಿ ಇರ್ತೇನೆ. ನನಗೆ ಜವಬ್ದಾರಿ ಕೊಟ್ಟಿರೋದನ್ನೆಲ್ಲ ನಿಮಗೆ ಹೇಳೋಕೆ ಆಗುತ್ತಾ..? ಮಾಧ್ಯಮ ಪ್ರತಿನಿಧಿಗಳಿಗೆ ಆರ್ ವಿ ದೇಶಪಾಂಡೆ ಪ್ರಶ್ನಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article