ಗುಜರಾತ್ ಮುಖ್ಯಮಂತ್ರಿಯಾಗಿರೋ ಆನಂದೀಬೇನ್ ಪಾಟೀಲ್ ರವರು ಫೇಸ್ ಬುಕ್ನ ಪೋಸ್ಟಿಂಗ್ ಮೂಲಕ ತನ್ನ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ದೇಶದಲ್ಲಿ ಇದು ಸೊಷಲ್ ಮೀಡಿಯಾದಲ್ಲಿ ನೀಡಿರೋ ಮೊತ್ತಮೊದಲ ರಾಜೀನಾಮೆಯಾಗಿದೆ.ಈ ಮೂಲಕ ಇದು ಬಿ.ಜೆ.ಪಿಯ ಪಕ್ಷದಲ್ಲಿ ತನ್ನ ಅಧಿಕಾರಾವಧಿ ಮುಗಿಯೋ ಮೊದಲೇ ನೀಡಿರೋ ಎರಡನೇ ರಾಜೀನಾಮೆಯಾಗಿದೆ.ಈ ಹಿಂದೆ 2004 ರಲ್ಲಿ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿರೋ ಉಮಾ ಭಾರತಿಯವರು ಯಾವುದೋ ಕೇಸ್ ನ ವಾರಂಟ್ ಜ್ಯಾರಿಯಾದ ಹಿನ್ನೆಲೆಯಲ್ಲಿ ತನ್ನ ಪದವಿಗೆ ರಾಜೀನಾಮೆ ಇತ್ತಿದ್ದರು.
ಮೇ 22,2014 ರಲ್ಲಿ ಮುಖ್ಯ ಮಂತ್ರಿಯಾಗಿರೋ ಆನಂದೀಬೇನ್ ರವರು ಸೋಮವಾರ ಸಾಯಂಕಾಲ 4.41 ನಿಮಿಷಕ್ಕೆ ಸರಿಯಾಗಿ ಗುಜರಾಥಿ ಭಾಷೆಯಲ್ಲಿ ಫೇಸ್ ಬುಕ್ನಲ್ಲೊಂದು ಸುದೀರ್ಘವಾದ ಪೋಸ್ಟ್ ಮಾಡಿದ್ರು.ಅವರು ಪೊಸ್ಟ್ ನಲ್ಲಿ ನೀಡಿದ ಮಾಹಿತಿ ಏನಂದ್ರೆ…
“ನಾನು ಮೊದಲಿನಿಂದಲೂ ಬಿ.ಜೆ.ಪಿ ಯ ವಿಚಾರಧಾರೆ,ಸಿದ್ದಾಂತಗಳು ಹಾಗೂ ಅನುಶಾಸನಗಳಿಂದ ಪ್ರೇರಿತಳಾಗಿದ್ದೇನೆ,ಹಾಗೂ ಇದನ್ನು ಇಲ್ಲಿಯ ತನಕ ಪಾಲಿಸಿ ಕೊಂಡು ಬರುತ್ತಿದ್ದೇನೆ.ಕಳೆದ ಕೆಲವು ದಿನಗಳಿಂದ ಪಾರ್ಟಿಯಲ್ಲಿ 75 ಕ್ಕಿಂತ ಅಧಿಕ ವಯಸ್ಸಿನ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಸ್ವ ಇಚ್ಛೆಯಿಂದ ಪದವಿಯನ್ನು ತ್ಯಜಿಸುತ್ತಿದ್ದಾರೆ,ಇದರಿಂದಾಗಿ ಯುವಕರಿಗೆ ಅವಕಾಶ ಸಿಗುವಂತಾಗುತ್ತದೆ,ಇದೊಂದು ಒಳ್ಳೆಯ ಪರಂಪರೆಯಾಗಿದೆ.ನನ್ನ ವಯಸ್ಸೂ ನವಂಬರ್ ನಲ್ಲಿ 75 ಕ್ಕೆ ತಲಪುತ್ತದೆ.”
“2017 ರ ಅಂತ್ಯದಲ್ಲಿ ಗುಜರಾಥ್ ನಲ್ಲಿ ಚುನಾವಣೆ ನಡೆಯುತ್ತಿದೆ.ಇದರಲ್ಲಿ ಹೊಸದಾಗಿ ನಿಯುಕ್ತಿ ಯಾಗಲಿರೋ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಸಮಯಾವಕಾಶ ಕಲ್ಪಿಸುವುದಕ್ಕಾಗಿ,ನಾನು ಹೈಕಮಾಂಡ್ ಬಳಿ ನನ್ನ ರಾಜಿನಾಮೆಯ ವಿಷ್ಯವನ್ನು ತಿಳಿಸಿ ನನ್ನನ್ನು ಇದರಿಂದ ಮುಕ್ತಿಗೊಳಿಸಬೇಕೆಂದು ಕೇಳಿಕೊಂಡಿದ್ದೇನೆ.,ಮತ್ತೊಮ್ಮೆ,ಇವತ್ತಿಲ್ಲಿ,ಈ ಪತ್ರದ ಮೂಲಕ ನನ್ನ ಮುಖ್ಯ ಮಂತ್ರಿ ಪದವಿಯ ಹೊಣೆಗಾರಿಕೆಯಿಂದ ನನ್ನನ್ನು ಮುಕ್ತಗೊಳಿಸಬೇಕೆಂಬುದಾಗಿ ಪಾರ್ಟಿ ಮುಖಂಡರಲ್ಲಿ ನಾನು ಕೇಳಿಕೊಳ್ಳುತ್ತೇನೆ.”
ಆನಂದೀ ಬೇನ್ ರ ಈ ಪ್ರಸ್ತಾವನೆಯ ಬಳಿಕ ಪಾರ್ಟಿ ಪ್ರೆಸಿಡೆಂಟ್ ಆಗಿರೋ ಅಮಿತ್ ಶಾ ಇದರ ಬಗ್ಗೆ ನಮ್ಮ ಪಕ್ಷಕ್ಕೆ ಮಾಹಿತಿ ದೊರಕಿದ್ದು,ಸಂಸತ್ತಿನ ಮೀಟಿಂಗ್ ನಲ್ಲಿ ಇದರ ಕುರಿತಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಪದವಿಗೆ ಆಯ್ಕೆಯಾಗುವವರಲ್ಲಿ ಅಮಿತ್ ಶಾ,ವಿಜಯ್ ರುಪಾಣಿ ಹಾಗೂ ಪುರುಶೋತ್ತಮ್ ರುಪಾಲ ಹೆಸರು ಕೇಳಿ ಬರುತ್ತಿದೆ.
2001 ರಲ್ಲಿ ಪಕ್ಷವು ಕೇಶು ಭಾಯಿ ಪಟೇಲ್ ರನ್ನು ಕೆಳಗಿಳಿಸಿ ಮೋದಿಜೀಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು,ಅಲ್ಲಿಂದ ಮತ್ತೆ 2014 ರ ತನಕ ಮೋದಿಜೀಯವರು ಮುಖ್ಯಮಂತ್ರಿಗಳಾಗಿ,ಗುಜರಾಥ್ ನಲ್ಲಿ ಸುಂದರವಾದ ಆಡಳಿತವನ್ನು ಮಾಡಿದ್ರು.ಅವರು ಪ್ರಧಾನ ಮಂತ್ರಿಯಾಗುತ್ತಿದ್ದಂತೆ ಆನಂದೀ ಬೇನ್ ಮುಖ್ಯಮಂತ್ರಿಗಳಾದ್ರು,ಆದ್ರೆ ದುರದೃಷ್ಟವಶಾತ್,2 ವರುಷದೊಳಗೇ ಅವರಿಗೆ ತನ್ನ ಪದವಿಯಿಂದ ಕೆಳಗಿಳಿಯುವಂತಾಗಿದೆ.ಇನ್ನು ಮೂರನೇಯ ಮುಖ್ಯಮಂತ್ರಿ ಆಯ್ಕೆಯಾಗಬೇಕಾಗಿದೆ,ಯಾರು ಈ ಸ್ಥಾನಕ್ಕೆ ಅರ್ಹ ವ್ಯಕ್ತಿಯೆಂಬುದನ್ನು ಕಾಲವೇ ತಿಳಿಸಬೇಕಷ್ಟೇ.
- ಸ್ವರ್ಣಲತ ಭಟ್
POPULAR STORIES :
ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!
ಮಹಿಳೆಯರೆ… ಸ್ಮೋಕ್ ಮಾಡ್ತಾ ಇದೀರಾ…! ಹುಷಾರ್…!
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!
ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !