ಮೈಸೂರಿನ ಪ್ರಮುಖ ಧಾರ್ಮಿಕ ತಾಣವಾದ ಚಾಮುಂಡಿಬೆಟ್ಟದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಏಕಾಶಿಲಾ ನಂದಿ ವಿಗ್ರಹಕ್ಕೆ ಮಹಾಭಿಷೇಕ ನೆರವೇರಿಸಲಾಯಿತು.
ಮೈಸೂರಿನ ಬೆಟ್ಟದ ಬಳಗ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಮಹಾಮಜ್ಜನಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದ್ರು.
ಏಕಶಿಲೆಯಲ್ಲಿ ವಿಶಿಷ್ಟವಾಗಿ ಕೆತ್ತಲಾಗಿರುವ ನಂದಿಯ ವಿಗ್ರಹಕ್ಕೆ ಅರಿಶಿನ, ಕುಂಕುಮ, ಚಂದನ, ಸುಗಂಧ ದ್ರವ್ಯ, ಹಾಲು, ಮೊಸರು, ತುಪ್ಪ, ಖರ್ಜೂರ, ದ್ರಾಕ್ಷಿ, ಎಳನೀರು, ಕಬ್ಬಿನ ರಸ, ಜೇನು ತುಪ್ಪ, ಬಿಲ್ವ ಪತ್ರೆ, ದರ್ಬೆ, ನಿಂಬೆ ರಸ, ಹಲವು ಹಣ್ಣುಗಳು, ಹೂವುಗಳು ಸೇರಿದಂತೆ 38 ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು. ಮಹಾಮಜ್ಜನದ ದೃಶ್ಯವನ್ನ ನೂರಾರು ಭಕ್ತರು ಕಣ್ತುಂಬಿಕೊಂಡಿದ್ದು, ಈ ವೇಳೆ ಹೊಸ ಮಠದ ಚಿದಾನಂದ ಸ್ವಾಮೀಜಿ, ಬೆಟ್ಟದ ಬಳಗ ಚಾರಿಟೆಬಲ್ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ರು.