ವಿದ್ಯುತ್ ತಂತಿ ತಗುಲಿ ಕ್ಲೀನರ್ ಸಾವು

Must read

ಟಿಪ್ಪರ್ಗೆ ವಿದ್ಯುತ್ ತಂತಿ ತಗುಲಿ ಕ್ಲೀನರ್ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಕೆ.ಆರ್.ಪೇಟೆಯ ಹೊಸಹೊಳಲು ಗ್ರಾಮದಲ್ಲಿ ನಡೆದಿದೆ. ವಿಜಯಪುರದ ಇಂಡಿ ತಾಲೂಕಿನ ಬಬಲವಾದಿ ಗ್ರಾಮದ ಕಾಂತಪ್ಪ (35) ಮೃತ ದುರ್ದೈವಿ.

ದುರ್ಘಟನೆಯಲ್ಲಿ ಟಿಪ್ಪರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಡಿ 10 ಕೋಟಿ ರೂಪಾಯಿಗಳ ಅಡಿ ಹೊಸಹೊಳಲು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಈ ವೇಳೆ ಅದೇ ಗ್ರಾಮದ ಕೆರೆ ಅಭಿವೃದ್ಧಿ ಕೆಲಸಕ್ಕೆ ಟಿಪ್ಪರ್ನಲ್ಲಿ ಮಣ್ಣು ತಂದು ಸುರಿಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿದ್ದು, ಪರಿಣಾಮ ಕ್ಲೀನರ್ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಡಿ ಕೇಸ್ ದಾಖಲಾಗಿದೆ .

- Advertisement -spot_img

More articles

- Advertisement -spot_img

Latest article