ಡಿಸೆಂಬರ್ 8ರಿಂದ 15ರವರೆಗೆ ಮೈಸೂರಿನಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ. ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ಆಯೋಜಿಸಲಾಗಿದ್ದು, ಗಾರುಡಿ ಗೊಂಬೆಗಳೊಂದಿಗೆ ಪ್ರಚಾರಾಂದೋಲನ ನಡೆಯುತ್ತಿದೆ.
ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನೇತೃತ್ವದಲ್ಲಿ ಮೈಸೂರು ಮೇಯರ್ ಶಿವಕುಮಾರ್ಗೆ ಬಹುರೂಪಿ ರಂಗೋತ್ಸವಕ್ಕೆ ಆಹ್ವಾನವನ್ನ ನೀಡಲಾಯಿತು. ಕುವೆಂಪುನಗರದಲ್ಲಿರುವ ಮೇಯರ್ ನಿವಾಸದ ಬಳಿಗೆ ತೆರಳಿ ಅಡ್ಡಂಡ ಕಾರ್ಯಪ್ಪ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಆಹ್ವಾನ ನೀಡಿದ್ದಾರೆ.
ಈ ವೇಳೆ ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ, ರಂಗಾಯಣ ಕಲಾವಿದರು ಭಾಗಿಯಾಗಿದ್ರು.